ಬೆಳಗಾವಿ – ತಾಲೂಕಿನ ಅಗಸಗಾದ ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆ ಎಸ್ ಎಲ್ ವಿ ಕೆ ಪ್ರೌಢಶಾಲೆ ಯಲ್ಲಿಂದು ಇಲ್ಲಿಯ ಹಳೆಯ ಪ್ರೌಢಶಾಲೆಯ ವಿದ್ಯಾರ್ಥಿಗಳು ಉದ್ಯಮಿ ಹಾಗೂ ದಾನಿಗಳಾದ ಸಿದ್ದರಾಯ ನಾಯಕ್ ಹಾಗೂ ಬಸವರಾಜ ತಳವಾರರವರು ಪ್ರೌಢಶಾಲೆಗೆ ಆಗಮಿಸಿದ್ದರು.
ಇವರನ್ನು ಪ್ರೌಢಶಾಲೆಯ ವತಿಯಿಂದ ಸ್ವಾಗತಿಸಲಾಯಿತು ಉದ್ಯಮಿಗಳು ಹಾಗೂ ಸಿದ್ದರಾಯ ನಾಯಕ ಪ್ರೌಢಶಾಲೆಯ ವಿದ್ಯಾರ್ಥಿನಿಯರ ಫುಟ್ಬಾಲ್ ತಂಡಕ್ಕೆ ಸಮವಸ್ತ್ರಗಳನ್ನು ದೇಣಿಗೆಯಾಗಿ ನೀಡಿದರು ಹಾಗೂ ಬಸವರಾಜ್ ತಳವಾರ ರವರು ಪ್ರೌಢಶಾಲೆಗೆ ಬೇಕಾಗುವ ಯಾವುದಾದರು ಸಲಕರಣೆಗಳನ್ನು ನೀಡುವುದಾಗಿ ಭರವಸೆ ನೀಡಿದರು.
ಮುಖ್ಯೋಪಾಧ್ಯಾಯರಾದ ಎಂ ಬಿ ಬೆಳಗಾವಿ ಹಿರಿಯ ಶಿಕ್ಷಕರಾದ ಬಿ ಆರ್ ಹಿರೇಮಠ, ದೈಹಿಕ ಶಿಕ್ಷಕರಾದ ಎನ್ ಬಿ ಪಾಟೀಲ, ಎಲ್ಲಾ ಶಿಕ್ಷಕ ಸಿಬ್ಬಂದಿ ವರ್ಗದವರು ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಸಿದ್ದರಾಯ ನಾಯಕ ಹಾಗೂ ಬಸವರಾಜ ತಳವಾರರವರನ್ನು ಪ್ರೌಢಶಾಲೆ ವತಿಯಿಂದ ಸತ್ಕರಿಸಲಾಯಿತು.
ಅಭಿನಂದನೆ: ಕಲಿತ ಶಾಲೆಯ ವಿದ್ಯಾರ್ಥಿಗಳ ಪುಟ್ಬಾಲ ತಂಡಕ್ಕೆ ಸಮವಸ್ತ್ರ ನೀಡುವ ಮೂಲಕ ಶಿಕ್ಷಣ ಪ್ರೇಮ ಮೆರೆದಿರುವ ಹಾಗೂ ಇತರ ಸಹಾಯ ಸಹಕಾರ ನೀಡಲು ಸಿದ್ಧ ರಾಗಿರುವ ನಿಂಗ್ಯಾನಟ್ಟಿ ಗ್ರಾಮದ ಯುವ ಸಮಾಜ ಸೇವಾ ಕಾರ್ಯಕರ್ತರು, ಉದ್ದಿಮೆದಾರರಾಗಿರುವ ಸಿದ್ರಾಯ ನಾಯ್ಕ ಮತ್ತು ಬಸವರಾಜ ತಳವಾರ ರವರನ್ನು ತಾಲೂಕಿನ ಮಾಸ್ತ ಮರಡಿಯ ಮುಖ್ಯೋ ಪಾಧ್ಯಾಯರಾದ ಬಸವರಾಜ ಸುಣಗಾರ ಅಭಿನಂದಿಸಿ ಅವರ ಕಾರ್ಯ ಇತರರಿಗೆ ಸ್ಫೂರ್ತಿ ನೀಡಲೆಂದು ಆಶಿಸಿದ್ದಾರೆ.