ಓಂಕಾರ ಸೇವಾ ಸಂಘದಿಂದ ಹಸು ಕಾಣಿಕೆ

1
360

ಸವದತ್ತಿ: ಓಂಕಾರ ಸಮಗ್ರ ಗ್ರಾಮೀಣ ಸೇವಾ ಸಂಘ (ರಿ) ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದೆ, ಅದರಲ್ಲಿ ಗೋ ಭಾಗ್ಯ ಕಾರ್ಯಕ್ರಮದಡಿಯಲ್ಲಿ ಅನೇಕ ಆಕಳುಗಳನ್ನು ಅರ್ಹ ವ್ಯಕ್ತಿಗಳಿಗೆ ಉಚಿತವಾಗಿ ವಿತರಣೆ ಮಾಡುತ್ತಿದೆ.

ಸೋಮು ಪಾಟೀಲ್ ನೇತೃತ್ವದಲ್ಲಿ ಇಂದು  ಸವದತ್ತಿ ತಾಲೂಕಿನ ಮರಕುಂಬಿ ಗ್ರಾಮದ ಗಂಗಯ್ಯ ಕಾಡಯ್ಯನವರಮಠ ಇವರಿಗೆ ಗೋವನ್ನು ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷರು ಸೋಮಯ್ಯ ಪಾಟೀಲ,  ಗೋವನ್ನು ನಾವು ಯಾವುದೇ ಫಲಾಪೇಕ್ಷೆ ಇಲ್ಲದೆ ನೀಡುತಿದ್ದೇವೆ, ಸ್ವೀಕರಿಸಿದ ವ್ಯಕ್ತಿಗಳು ನಮ್ಮ ಸೇವೆಯನ್ನು ಸದುಪಯೋಗ ಮಾಡಿಕೊಂಡರೆ ಅದುವೇ ನಮಗೆ ಮಹದಾನಂದ, ಭಾರತೀಯ ಗೋ ಸಂತತಿ ಉಳಿಯಬೇಕು ಹಾಗೂ ಬಡತನದ ಕುಟುಂಬಗಳಿಗೆ ಆರೋಗ್ಯ ಮತ್ತು ಆರ್ಥಿಕ ಸಹಕಾರ ನೀಡಲು ಗೋವನ್ನು ನೀಡುತಿದ್ದೇವೆ, ಇಲ್ಲಿಯವರೆಗೂ ಸುಮಾರು ಗೋವನ್ನು ನೀಡಿದ್ದೇವೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು ನಮಗೆ ಸಂತಸ ತಂದಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗುರು ಅಮರಗೋಳ, ನಿರ್ಗುಣ ರೇವಣ್ಣವರ,ಅನೇಕ ಸದಸ್ಯರು ಉಪಸ್ಥಿತರಿದ್ದರು.

1 COMMENT

  1. ಸಮಾಜ ಸೇವಕರ ಸೇವೆಯನ್ನು ಗುರುತಿಸಿ ಪ್ರೇರೇಪಿಸುವ ಕಾರ್ಯಕ್ಕೆ ನಮ್ಮ ಅಭಿನಂದನೆಗಳು..

Comments are closed.