spot_img
spot_img

ಕಾರ್ಮಿಕ ಸಂಘಟನೆಯಿಂದ ಜಿಲ್ಲಾಧಿಕಾರಿಗೆ ಮನವಿ

Must Read

- Advertisement -

ಮೂಡಲಗಿ: ಪಟ್ಟಣದ ಸಮರ್ಥ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಟನೆಯಂದ ಕಟ್ಟಡ  ಕಾರ್ಮಿಕರು ಕಾರ್ಮಿಕ ಇಲಾಖೆಯಿಂದ ಹೊಸ ನೊಂದಣಿ ಹಾಗೂ ನವೀಕರಣ ಮಾಡಲು ಹಾಜರಾತಿ ಪುಸ್ತಕ ಅಥವಾ ವೇತನ ಪಾವತಿ ಕಡ್ಡಾಯಗೂಳಿಸಿದ್ದನ್ನು ಹಿಂಪಡೆಯಲು ಮತ್ತು ಕಾರ್ಮಿಕರ ವಿವಿಧ ಬೇಡಿಕೆಗಳನ್ನು  ಈಡೇರಿಸುವಂತೆ ಆಗ್ರಹಿಸಿ ಸೋಮವಾರದಂದು ಮೂಡಲಗಿ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿ ಮೂಡಲಗಿ ತಹಶೀಲ್ದಾರ ಶಿವಾನಂದ ಬಬಲಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯದರ್ಶಿ ಸುಭಾಸ ಗೊಡ್ಯಾಗೋಳ ಮಾತನಾಡಿ, ಮೂಡಲಗಿ ತಾಲೂಕಿನ ವ್ಯಾಪ್ತಿಯಲ್ಲಿ ಸುಮಾರು 7-8 ಸಾವಿರ ಕಾರ್ಮಿಕರಿದ್ದು ಈಗ ನವೀಕರಣ ಮಾಡಿಸಿಕೂಳ್ಳಲು ಹಾಜರಾತಿ ಪುಸ್ತಕ ಮತ್ತು ವೇತನ ಪಾವತಿ ಕಡ್ಡಾಯಗೊಳಿಸಿದ್ದರಿಂದ ಕಾರ್ಮಿಕರ ಕಾರ್ಡ ಮಾಡಿಕೂಳ್ಳಲು ಸಾದ್ಯವಾಗುತ್ತಿಲ್ಲ ಅದೂ ಅಲ್ಲದೇ ಕಾರ್ಮಿಕ ಇಲಾಖೆಯಿಂದ ವಿವಿಧ ಸೌಲಭ್ಯ ಪಡೆದುಕೂಳ್ಳಲು ಸಹಿತ ತೊಂದರೆಯಾಗುತ್ತಿದೆ ಎಂದರು.

ಕಾರ್ಮಿಕರು ಸುಮಾರು ತಿಂಗಳಿನಿಂದ ಕಾರ್ಮಿಕರ ಕಾರ್ಡ ನವೀಕರಣ ಮಾಡಿಕೂಳ್ಳಲು ಆಗುತ್ತಿಲ್ಲ. ಕಾರ್ಮಿಕರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಈ ಮೊದಲು ಕಾರ್ಮಿಕರು ಕಾರ್ಮಿಕ ಕಾರ್ಡ ಮಾಡಿಕೊಳ್ಳಲು ದಾಖಲೆಗಳಾದ ಆಧಾರ ಕಾರ್ಡ, ರೇಷನ ಕಾರ್ಡ, ಪ್ಯಾನ್ ಕಾರ್ಡ, ಮತ್ತು ಉದ್ಯೋಗ ದೃಡೀಕರಣ ಪತ್ರ ಸ್ವಿಕರಿಸಿ ಕಾರ್ಮಿಕರ ಕಾರ್ಡಗಳನ್ನು ಮಾಡಿಕೊಡುತ್ತಿದ್ದರು, ಆದರೆ ಈಗ ಕಾರ್ಮಿಕ ಇಲಾಖೆಯವರು ಹಾಜರಾತಿ ಪುಸ್ತಕ ಮತ್ತು ವೇತನ ಪಾವತಿ ಕಡ್ಡಾಯಗೊಳಿಸಿದ್ದರಿಂದ ಗುತ್ತಿಗೆದಾರರು ಹಾಜರಾತಿ ಪುಸ್ತಕ ಮತ್ತು ವೇತನ ಪಾವತಿ ನೀಡಲು ಹಿಂಜರಿಯುತ್ತಿದ್ದು ಇದರಿಂದ ಕಾರ್ಮಿಕರು ಪರದಾಡುವಂತಾಗಿದೆ. ಕಾರ್ಮಿಕರಿಗೆ ಸರಕಾರ ಸೌಲಭ್ಯ ಕಲ್ಪಿಸಲು ಮೊದಲಿನಂತೆ ಆದೇಶವನ್ನು ಜಾರಿ ಮಾಡಬೇಕೆಂದು ಆಗ್ರಹಿಸಿದರು.  

- Advertisement -

ಸಾಮಾಜ ಕಾರ್ಯಕರ್ತರಾದ ಗುರು ಗಂಗಣ್ಣವರ ಮತ್ತು ಈರಪ್ಪ ಢವಳೇಶ್ವರ ಹಾಗೂ ರವಿ ಮಹಾಲಿಂಗಪೂರ ಮಾತನಾಡಿ, ಕಾರ್ಮಿಕ ಇಲಾಖೆಯಿಂದ 10ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ಲ್ಯಾಪಟಾಪ್ ಗಳನ್ನು ವಿತರಣೆ ಮಾಡುತ್ತಿದ್ದು ಇದರಲ್ಲಿ ಬೆರಳೆಣಿಕೆಯಷ್ಟು ಮಾತ್ರ ಕಾರ್ಮಿಕ ಮಕ್ಕಳಿಗೆ ಲ್ಯಾಪಟಾಪ್‍ಗಳನ್ನು ನೀಡುತ್ತಿದ್ದು ಇನ್ನುಳಿದ ಕಾರ್ಮಿಕ ಮಕ್ಕಳಿಗೆ ತಾರತಮ್ಯ ಮಾಡುತ್ತಿದ್ದಾರೆ. 10ನೇ ತರಗತಿಯಲ್ಲಿ ಓದುತ್ತಿರುವ ಎಲ್ಲಾ ಕಾರ್ಮಿಕ ಮಕ್ಕಳಿಗೆ ಲ್ಯಾಪಟಾಪ್‍ಗಳನ್ನು ನೀಡಬೇಕು ಮತ್ತು ಕಾರ್ಮಿಕರಿಗೆ ನೀಡುವ ಗೌಂಡಿ ಕಿಟ್, ಸೆಂಟ್ರಿಂಗ್ ಕಿಟ್ಟ್, ಪೇಟಿಂಗ್ ಕಿಟ್ಟ್, ಶಾಲಾ ಕಿಟ್ಟಗಳನ್ನು ಸರಿಯಾಗಿ ಮಾಹಿತಿ ನೀಡದೆ ಕೆಲ ಕಾರ್ಮಿಕರಿಗೆ ಮಾತ್ರ ನೀಡುತ್ತಿದ್ದಾರೆ. ಸರಿಯಾಗಿ ಎಲ್ಲರಿಗೂ ನೀಡಬೇಕು ಮತ್ತು ಕಿಟ್ಟಗಳ ಬದಲಾಗಿ ಕಟ್ಟಗಳಿಗೆ ತಗಲುವ ಹಣವನ್ನು ನೇರವಾಗಿ ಕಾರ್ಮಿಕರ ಖಾತೆಗೆ ಜಮಾ ಮಾಡುವುದಾಗಬೇಕು. ಕಟ್ಟಡದ ಕಾರ್ಮಿಕರಿಗೆ ಮತ್ತು ಅವರ ಮಕ್ಕಳಿಗೆ ದೊರೆಯುವ ಮದುವೆ ಧನ ಸಹಾಯದ ಕಳೆದ 2-3 ವರ್ಷಗಳಿಂದ ಸರಿಯಾಗಿ ವಿತರಣೆಯಾಗುತ್ತಿಲ್ಲ ಮತ್ತು ಠೇವಣಿ ರಸೀದಿಗಳು ಸಹಿತ ಸರಿಯಾಗಿ ನಿಡುತ್ತಿಲ್ಲ. ಅದೇ ರೀತಿಯಾಗಿ ಮೂಡಲಗಿಯಲ್ಲಿ ಖಾಯಂ ಕಾರ್ಮಿಕ ನಿರೀಕ್ಷಕರ ನೇಮಕ ಮಾಡಬೇಕು ಹಾಗೂ ಕಟ್ಟಡ ಕಾರ್ಮಿಕರಿಗೆ ಮನೆ ಕಟ್ಟಲು 5 ಲಕ್ಷ ರೂ ಧನಸಹಾಯವನ್ನು ಕಾರ್ಮಿಕ ಕಲ್ಯಾಣ ಮಂಡಳಿಯಿಂದಲೇ ನೀಡಬೇಕು. ಕಾರ್ಮಿಕ ಇಲಾಖೆಯಿಂದ ನೀಡುವ ಪ್ರತಿಯೊಂದು ಸೌಲಭ್ಯದ ಬಗ್ಗೆ ಮಾಹಿತಿಯನ್ನು  ದಿನಪತ್ರಿಕೆ  ಮತ್ತು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಬೇಕು ಎಂದು ಒತ್ತಾಯಿಸಿದರು. 

ಹಸನಸಾಬ ಕುರಬೇಟ ಮಾತನಾಡಿ, ಕಾರ್ಮಿಕರ ಸಮಸ್ಯೆಗಳನ್ನು ಶೀಘ್ರ ಪರಿಹರಿಸದ್ದಿದರೆ  ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದರು. 

ಸಂಘಟನೆಯ ಅಧ್ಯಕ್ಷ ಬಸವರಾಜ ಪೋಳ, ಉಪಾಧ್ಯಕ್ಷ ಬಸವರಾಜ ಗಂಗೂರಿ, ಬೀರಪ್ಪ ಮಾಳಗಿ, ರಾಜು ಪೂಜೇರಿ, ಅಬ್ದುಲ್ ಪೈಲವಾನ, ಶ್ರೀಧರ ಮೋಪಗಾರ, ಕುಮಾರ ಕಲಾಲ, ಸುನೀಲ ಮೋಪಗಾರ, ಗಣಪತಿ ರಾಜಾಪೂರ, ಪರಸಪ್ಪ ತಳವಾರ ಅಪ್ಪಸಾಬ ಕುಂಭಾರ,ಶಿವಾನಂದ ಈರಪ್ಪವರ, ಪರುಶರಾಮ ಬಂಗೆನ್ನವರ, ಪ್ರಕಾಶ ದೊಡ್ಡಮನಿ, ಅಬ್ಬಾಸಾಬ ರಾಮದುರ್ಗ, ಮಹಾದೇವ ಗಾಡ್ಡಿವಡ್ಡರ, ರಾಜು ಬಂಡಿವಡ್ಡರ, ಯಶವಂತ ಹರಿಜನ, ವಿಠ್ಠಲ ಪತ್ತಾರ, ಜಂಗ್ಲಿಸಾಬ ಮುಲ್ಲಾ, ಸುಭಾಸ ಮಳ್ಳಗೇರಿ ಹಾಗೂ ಸಂಘಟನೆಯ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group