spot_img
spot_img

ಪುಸ್ತಕ ಪರಿಚಯ: ಫ್ಲಾರೆನ್ಸ್ ನೈಟಿಂಗೇಲ್

Must Read

spot_img
- Advertisement -

ಪುಸ್ತಕದ ಹೆಸರು : ಫ್ಲಾರೆನ್ಸ್ ನೈಟಿಂಗೇಲ್
ಲೇಖಕರು : ಆಗುಂಬೆ ಎಸ್ ನಟರಾಜ್
ಬೆಲೆ : 250
ಪುಟ : 284
ಮುದ್ರಕರು : ಸ್ನೇಹಾ ಪ್ರಿಂಟರ್ಸ
ಅಕ್ಷರ ಜೋಡಣೆ : ವರ್ಷಿಣಿ ಗ್ರಾಫಿಕ್ಸ್

ಪುಸ್ತಕಗಳು ಮಸ್ತಕದ ಜ್ಞಾನಹೆಚ್ಚಿಸಲು ಆತ್ಮ ಸಾಕ್ಷಾತ್ಕರ ಮಾಡಿಕೊಳ್ಳಲು ಮಾನಸಿಕ ನೆಮ್ಮದಿಗೆ ಹೃದಯದ ಆರೋಗ್ಯಕ್ಕೆ ಒಳ್ಳೆಯ ಔಷಧಿ. ಆತ್ಮೀಯ ಮಿತ್ರನಂತೆ ಕಾರ್ಯನಿರ್ವಹಿಸುತ್ತವೆ. ಇಂತಹ ಕಾರ್ಯಮಾಡಲು ದೂರದ ಊರಿನಿಂದ ಹಿರಿಯರಾದ ಆಗುಂಬೆ ಎಸ್ ನಟರಾಜ ಸರ್ ನನ್ನ ವಿಳಾಸಕ್ಕೆ ಸುಮಾರು ಅತ್ಯುತ್ತಮ ಪುಸ್ತಕ ಕಳುಹಿಸಿಕೊಟ್ಟರು.ಅವುಗಳನ್ನು ಬಿಚ್ಚಿದ ತಕ್ಷಣ ನನ್ನನ್ನು ಆಕರ್ಷಿಸಿದ್ದು ಫ್ಲಾರೆನ್ಸ್ ನೈಟಿಂಗೇಲ್ ಎನ್ನುವ ಪುಸ್ತಕ. ಮುಖಪುಟದ ಮುಗ್ದ ಚಿತ್ರ ಅವಳ ಜೀವನ ಚರಿತ್ರೆ ಅದ್ಭುತ.

ಬನ್ನಿ ನಿಮಗಷ್ಟು ಇದರ ಬಗ್ಗೆ ಉಣಬಡಿಸುತ್ತೇನೆ. ನೀವು ಸ್ವಲ್ಪ ತಿಳಿದುಕೊಂಡು ಲೇಖಕರ ಬರಹದ ಶ್ರಮ ಅರಿತು ಕೊಂಡು ಓದುವಿರೆಂದು ಆಶಿಸುತ್ತೇನೆ.

- Advertisement -

ನನ್ನ ಹಾಗೆ ಲೇಖಕರಿಗೂ ಅವರ ಮಗ ತಂದ ಅನೇಕ ಪುಸ್ತಕಗಳಲ್ಲಿ ಸಿಸಿಲ್ ಹ್ಯಾಮ ಸ್ಮಿತ್ ರಚಿಸಿದ “ಫ್ಲಾರೆನ್ಸ ನೈಟಿಂಗೇಲ್” ಎನ್ನುವ ಗ್ರಂಥಹಿಡಿಸಿ ಅದನ್ನು ಅವರು ಓದಿ ಅದರ ಆಧಾರವಾಗಿಟ್ಟುಕೊಂಡು ತಾವು ಈ ಪುಸ್ತಕ ರಚಿಸಿದ್ದಾರೆ. ಕೇವಲ ಮೋಕ್ಷ ದೇಗುಲಗಳ ದರ್ಶನ, ದಾನ, ಆಧ್ಯಾತ್ಮಿಕ, ಜೀವನವಷ್ಟೆ ನಿಜಗುರಿಯಲ್ಲ ನಮ್ಮ ಸುತ್ತಮುತ್ತಲ ಜನರ ಸೇವೆಯೂ, ಹಸಿದವರಿಗೆ ತುತ್ತು, ಬಾಯಾರಿದವರಿಗೆ ಬೊಗಸೆ ನೀರು ನೀಡಿದರೂ ಭಗವಂತ ಮೆಚ್ಚುತ್ತಾನೆ ಎನ್ನುವ ಮಾತನ್ನು ಲೇಖಕರು ತಿಳಿಸುತ್ತ ತಮ್ಮ ಬರಹ ಪಾರಂಭಿಸಿದ್ದಾರೆ.
ಫ್ಲಾರೆನ್ಸ್ ನೈಟಿಂಗೇಲ್ ಪುಸ್ತಕದಲ್ಲಿ ಒಟ್ಟು 17 ಅಧ್ಯಾಯಗಳಿವೆ. ಮೊದಲ ಅಧ್ಯಾಯದಲ್ಲಿ ಫ್ಲಾರೆನ್ಸಳ ತಂದೆ ವಿಲಿಯಮ್ಸ ತಾಯಿ ಪ್ಯಾನಿಯ ಬಗ್ಗೆ.

ಫ್ಲಾರೆನ್ಸ್ ನೈಟಿಂಗೇಲ್ ಮೆ 12,1820 ರಂದು ನೇಪಲ್ಸ ನಗರದಲ್ಲಿ ಜನಿಸಿದ್ದು, ನೈಟಿಂಗೇಲ್ ಹೆಸರನ್ನು ಅವರ ತಂದೆ ತಮ್ಮ 21 ನೇ ವಯಸ್ಸಿನಲ್ಲಿ ತಮಗಿದ್ದ ಮೊದಲ ಹೆಸರು ಶೋರ್ ಬದಲಿಸಿದ್ದು, ಅವಳ ತಾಯಿ ನ್ಯಾನಿಯ ಮನೆತನ ಬಡವರ ಮೇಲಿದ್ದ ಅವಳ ಕನಿಕರ ಅವಳ ಮೊದಲ ಜೀವನ ಅವಳು ಅವಳ ತಂಗಿಯ ಸ್ವಭಾವ ಫ್ಲಾರೆನ್ಸಳ ಚುರುಕತನ ಜಾಣ್ಮೆ, ಜಿದ್ದು, ಹಠಮಾರಿತನ ಪ್ಲಾರೆನ್ಸಳ ತಂದೆ ತಾಯಿಯ ಜೀವನದಲ್ಲಿ ಆದ ಏರಿಳಿತಗಳ ಬಗ್ಗೆ ಅವರು 8 ನೇ ತಾರೀಖು ಸಪ್ಟೆಂಬರ್ 1837 ರಂದು ಇಂಗ್ಲೆಂಡ ತೊರೆದು ಫ್ರಾನ್ಸಿಗೆ ಪ್ರಯಾಣಿಸಿದ ಮಾಹಿತಿ ವಿವರವಾಗಿ ನೀಡಿದ್ದಾರೆ.

ಎರಡನೆಯ ಅಧ್ಯಾಯದಲ್ಲಿ ನೈಟಿಂಗೇಲ ಕುಟುಂಬ ಫ್ರಾನ್ಸನಲ್ಲಿ ನೆಲೆಸಿದ ಕ್ಷಣದಲ್ಲಿ ಆತ್ಮೀಯ ಜನರ ಕೋಟಲೆಗಳು, ಅವಳು ನೈಸನಗರ ತಲುಪಿದ್ದು, ಅಲ್ಲಿಯ ಸಂತೋಟ ಕೂಟದ ನೋಟ, ಇವರ ಪಾಲ್ಗೊಳ್ಳುವಿಕೆ, 1838 ರಲ್ಲಿ ಫ್ಲಾರೆನ್ಸ ನಗರಕ್ಕೆ ಹೊಗಿದ್ದು ಅಲ್ಲಿಂದ ಜಿನೀವಾ ಕ್ಕೆ ಪಯಣ ಅಲ್ಲಿನ ಆಸ್ಡ್ರೀಯ ಮೇಲಿನ ದಬ್ಬಾಳಿಕೆ, ಪ್ರಸಿದ್ಧ ಇತಿಹಾಸಕಾರ ಸಿಸ್‍ಮೊಂಡಿಯಾ ಕರುಣಾಳು ಹೃದಯ ಫ್ಲಾರೆನ್ಸಳೊಂದಿಗೆ ಸ್ನೇಹ ವಾಯುವಿಹಾರ ಸಿಸಮೊಂಡಿಯಿಂದ ಇಟಲಿಯ ಸ್ವಾತಂತ್ರ್ಯ ಹೋರಾಟಗಾರರ ಪರಿಚಯ, ಫರ್ಡಿನಾಂಡನ ಸಿಂಹಾಸನಾವರೋಹನದಿಂದ ದೊರೆತ ಭ್ರಷ್ಟ ರಿಗೆ ಕ್ಷಮಾದಾನ, ವಿಲಿಯಮ್ ಗೆ ಮತ್ತೆ ಒದಗಿಬಂದ ಕಂಟಕ, ಮೇರಿ ಕ್ಲಾರ್ಕಳ ಪರಿಚಯ, ಅವಳ ಪ್ರೇಮ ಪ್ರಕರಣಗಳು ಭಗ್ನಪ್ರೇಮ, ಜೂಲಿಯಸ ಮೇಲ್ ಮೇರಿ ಕ್ಲರ್ಕರ ಉತ್ಕಟ ಪ್ರೇಮಿ ಅವರ ಬಾಣತನ ನೈಟಿಂಗೇಲ್ ಕುಟುಂಬದೊಂದಿಗೆ ಕ್ಲಾರ್ಕಳೊಂದಿಗಿನ ಸಂಬಂಧ ಎಳೆಎಳೆಯಾಗಿ ತುಂಬಾ ಸುಂದರವಾಗಿ ವಿವರಿಸಿದ್ದಾರೆ. ನೈಟಿಂಗೇಲ್ ಕುಟುಂಬ 18 ತಿಂಗಳ ನಂತರ ಲಂಡನ್ನಿಗೆ ಹಿಂದಿರುಗಿದ್ದು, ಫ್ಲಾರನ್ಸ್ ದೇವರ ಸೇವಕಿಯಾಗಿ ಬದಲಾಗಿದ್ದು ಎಂತಹ ವಿವರಣೆ ! ಓದಿಯೇ ಅನುಭವಿಸಬೇಕು.

- Advertisement -

ಮೂರನೆ ಅಧ್ಯಾಯದಲ್ಲಿ ಫ್ಲಾರೆನ್ಸಳ ಘರ್ಷಣೆ ದಿನಗಳ ಪರಿಚಯ ವಿವಾಹದ ನಿರಾಕರಣೆ ಶುಶ್ರೂಷಕಿಯಾಗಲು ಹಾತೊರಿಕೆ ತಾಯಿ ತಂದೆಯ ನಿರಾಕರಣೆ ಕದ್ದು ಅಸ್ಪತ್ರೆಗೆ ಹೋಗುವುದು ಸೇವೆ ಮಾಡುವುದು, ತಂಗಿಯ ಅನಾರೋಗ್ಯ ಬ್ರೇಡ್ ಎಡ್ಜ ದಂಪತಿಗಳ ಸಹಾಯ ಮುಂತಾದ ವಿವರಣೆ ಇದೆ. ನಾಲ್ಕನೆಯ ಅಧ್ಯಾಯದಲ್ಲಿ ಫ್ಲಾರೆನ್ಸಳ ವಿಚಲಿತ ಮನಸ್ಸು ಅವರು ಆಯ್ದುಕೊಳ್ಳಬೇಕೆಂದ ಮೂರು ದಾರಿ, ತಾಯಿ ಫ್ಯಾನಿಯ ಆಸೆಯಂತೆ ತಂಗಿಯ ಗೂಢಚಾರಿ ಕೆಲಸ ಹೆನ್ರಿ ನಿಕೋಲಸನ ಮರಣ ಡಾ. ಎಲಿಜಿಬೆತಳ ಸ್ನೇಹ ತಾಯಿ ಫ್ಯಾನಿಯ ಅಸಹಕಾರ ವ್ಯಕ್ತವಾಗಿದೆ. 5 ನೇಯ ಅಧ್ಯಾಯದಲ್ಲಿ ಅಸಕ್ತ ಮಹಿಳೆಯರ ಅನಾಥಾಲಾಯದಲ್ಲಿ ಫ್ಲಾರೆನ್ಸ್ ತಂದ ಬದಲಾವಣೆ ಸುಧಾರಣೆ ವಿಸ್ತ್ರತವಿವರ 6ನೇ ಅಧ್ಯಾಯದಲ್ಲಿ 1854 ರಲ್ಲಿ ರಶೀಯಾದೇಶ ತುರ್ಕಿದೇಶದ ಮೇಲೆಯುದ್ಧ ಸಾರಿದ ಸಂದರ್ಭ ಇದು ಪ್ರಸಿದ್ಧ ಕ್ರಿಮಿಯಾ ಯುದ್ಧ ಅದರ ಕಾರ್ಯ ಪರಿಣಾಮ ಎದುರಿಸಿ ಸಂಕಷ್ಟ ಭಯಾನಕ ಘಟನೆಗಳು ಅದರಲ್ಲಿ ಫ್ಲಾರೆನ್ಸ್ ದಾದಿಯರ ಕೆಲಸ ಕಾರ್ಯಗಳ ನಿರ್ವಹಣೆ ಕೆಲಸ ಮಾಡಿದು,್ದ ಎದುರಿಸಿದ ಅವಘಡ ಆಘಾತ, ದುರ್ಘಟನೆಗಳ ವಿವರ ಕಣ್ಣಿಗೆ ಕಟ್ಟುತ್ತದೆ. ಮಿಲಿಟರಿ ಅಧಿಕಾರಿ, ಅಧಿಕಾರಿಗಳ ಜವಾಬ್ದಾರಿ, ಕಾರ್ಯಗಳ ವಿವರ ಓದಿಯೇ ತಿಳಯಬೇಕು. 8ನೇ 9ನೇ ಅಧ್ಯಾಯದಲ್ಲಿ ಫ್ಲಾರೆನ್ಸಳ ಸೇವಾಮನೋಭಾವ ವಿವಿಧ ವ್ಯಕ್ತಿತ್ವದವರೊಂದಿಗೆ ಕೊಡಿಗೆ ಕಾರ್ಯ ನಿರ್ವಹಿಸಿದ್ದು ಪ್ರಮುಖ ವ್ಯಕ್ತಿಗಳ ಒಡನಾಡ ಡಾ ಅಲೆಗ್ಝಾಂಡರನ ಸಾವಿನ ಆಘಾತ, ಫ್ಲಾರೆನ್ಸಳ ಅನಾರೋಗ್ಯದ ಉಲ್ಬಣದದ ವಿವರ 11 ನೇ ಅಧ್ಯಾಯದಲ್ಲಿ ಫ್ಲಾರೆನ್ಸ್ ನೈಟಿಂಗೇಲ್ ಅಜಾÐತವಾಸ ಮಾಡಬೇಕೆಂದು ತಂದು ಕೊಂಡ ನಿರ್ಧಾರ ಹ್ಯಾಮಸ್ಪೆಡದಲ್ಲಿ ಒಂದು ಮನೆ ಬಾಡಿಗೆ ಪಡೆದು ಅವಳ ಸಮಾಜ ಸುಧಾರಣಾ ತುಡಿತ ಮತ್ತೆ 1861ರ ಅಮೇರಿಕಾದಲ್ಲಿ ಅಂತರ ಯುದ್ಧ ಸಂದರ್ಭದಲ್ಲಿಯ ಕಾರ್ಯ 13 ನೇ ಅಧ್ಯಾಯದಲ್ಲಿ 1864 ಅತ್ಯಂತನಿಶ್ಯಕ್ತಳಾದ ನೈಟಿಂಗೇಲ್ ಖಿನ್ನತೆಗೆ ಒಳಗಾಗದ್ದು ಆತ್ಮೀಯ ಸ್ನೇಹಿತಿಯ ಕ್ಲಾರ್ಕಿಯ ಸ್ನೇಹದ ಮಾತು ತನ್ನ ಕಾಯಿಲೆಯ ಉಲ್ಬಣತೆ ಆದರಿಂದ ಅವಳು ಒಂಟಿಯಾಗಿ ಇರಲು ಬಯಸಿದ್ದು, ಜೋವೆಟನ ಪಾತ್ರ ವ್ಯವಹಾರ ಸಮಾಧಾನ ನೀಡದ್ದು ಕೊನೆಗೆ ಆತ್ಮೀಯ ಗೆಳತಿ ಹಿಲರಿ ಬೋನಹ್ಯಾಮ ಕಾರ್ಟರ ಮರಣ ಹಿಲರಿಯ ಮರಣ. ಲಾರ್ಡ ಪಾಮರ ಸ್ಪನನ ಮರಣ ಅವಳಿಗೆ ಬಲವಾದ ಪೆಟ್ಟು ಬಿದ್ದತ್ತು 1865 ರಲ್ಲಿ ಹಾಸಿಗೆ ಹಿಡಿದಳು. ಆದರೂ ಅವಳಿಗ ಪ್ರಾಣಿ ಪಕ್ಷಿಗಳ ಮೇಲಿನ ಒಲವು ಇಂಡಿಯಾ ಸ್ಯಾನಿಟರಿ ರಿಪೋರ್ಟ ವರದಿ ಅನುಷ್ಠಾನ 9 ವರ್ಷಗಳ ನಂತರ ಫ್ಲಾರೆನ್ಸ ತನ್ನ ರಾಯಿಯನ್ನು ನೋಡಲು ಹೋಗಿದ್ದು, ಸ್ಯಾನಿಟರಿ ರಿಪೋರ್ಟ ಬಗ್ಗೆ. ಅವಳು ಮಾಡಿದ ಪ್ರಯತ್ನ , ಆರೋಗ್ಯ ಸೇವಾಕನಸು ಕನಸಾಗೆ ಉಳಿದಿದ್ದುರ ಮಾಹಿತಿ ಇದೆ.

ಹದಿನಾಲ್ಕನೆ ಅಧ್ಯಾಯದಲ್ಲಿ ಮಿಲಿಯಮೆ ರಾಥಬೋನ್ ಸೆರೆಮನೆಯ ಕಾರ್ಯಗಾರರಗಳ ಬಗ್ಗೆ ಸುಧಾರಣಾ ಕ್ರಮಗಳು, ದಾದಿಯರ ಕಾರ್ಯ, ಶುಚಿತ್ವ. ವರ್ಗಸಮಸ್ಯೆ ನಿವಾರಣೆ , ದಾಂದಿಯವ ವ್ಯಕ್ತಿ ಪಾವಿತ್ಯತೆ ದಾದಿಯರ ಶಿಕ್ಷಣಕ್ಕೆ ಮಹಿಳೆರೆ ಸೂಕ್ತ ಫ್ಲಾರೆನ್ಸ್ ತಾನು ಪಡೆದ ಅನುಭವಗಳಿಂದ ದಾದಿಯರ ಹಕ್ಕು ಕರ್ತವ್ಯ 1868 ರಲ್ಲಿ ಸ್ತ್ರೀ ವಿಮೋಚನಾ ಚಳುವಳಿಗೆ ಬೆಂಬಲ ನೀಡಿದ್ದುದ ಮಾಹಿತಿ ಇದೆ. 15 ನೇ ಅಧ್ಯಾಯದಲ್ಲಿ ಭಾರತದಲ್ಲಿ ಫ್ಲಾರೆನ್ಸಳ ಸುಧರಣಾ ಕ್ರಮಗಳು ಭಾರತದ ಬುದ್ಧಿಜೀವಿ ಅಧಿಕಾರಿಗಳೊಂದಿಗೆ ಸ್ನೇಹ ಇಂಡಿಯಾದ ರೈತರಜೀವನ ಕ್ರಮ ವಿವಿಧ ಅಧಿಕಾರಿಗಳ ಕಾರ್ಯ, ಫ್ಲಾರೇನ್ಸಳ ಬೇಟಿಯಾದ ಎಲ್ಲರೂ ಅವಳಿಗೆ ಅವರ ಜ್ಞಾನಕ್ಕೆ ಕಾರ್ಯಕ್ಕೆ ಸೋಲುವವರ 1870 ರಲ್ಲಿ ಜರ್ಮನಿ ಪ್ರಾನ್ಸ್ ದೇಶಗಳ ಮಧ್ಯ ಸಮರ ಇಲ್ಲ ಪ್ಲಾರೆನ್ಸ್ ನೈಟಿಂಗೇಲ ಕೈಗೊಂಡ ಕಾರ್ಯ ನಿಜಕ್ಕೂ ಅತ್ಯದ್ಬುತ ವಿವರ, ಪ್ರತಿ ಪುಟನೆಯಲ್ಲೂ ನಾನು ಒಬ್ಬ ಪಾತ್ರದಾರಿ ಎನ್ನುವಂತ ಭಾವನೆ ಬರುವಂತ ವಿವರಣೆ ಮೈನವಿಕೇಳಿಸುತ್ತದೆ.

16 ನೇ ಅಧ್ಯಾಯದಲ್ಲಿ ಪ್ಲಾರೆನ್ಸಳ ಜೀವನದಲ್ಲಿ ಮಹತ್ತರ ಬದಲಾವಣೆಗೊಂಡದ್ದು 51 ವರ್ಷದ ಪ್ಲಾರೆನ್ಸಳು ರೋಗಿಯಾಗಿ ಸಂತ ಧಾಮಸ್ ಆಸ್ಪತ್ರೆಗೆ ದಾಖಲಾಗಿ ತನ್ನ ಕಾಲ ಕಳೆಯಬೇಕೆಂದು ಕೊಂಡಿದ್ದಳು ಆದರೆ ಮೇಲ್ವಿಚಾರಕಿಯಾಗಿ ಕಾರ್ಯ ನಿರ್ವಹಿಸಬೇಕಾಗಿದ್ದು ಜೊವೆಟ ಸಲಹೆಯಂತೆ ಶಾಂತಿಯುತ ಜೀವನಕ್ಕೆ ಸಮ್ಮತಿಸಿದ್ದು ಪ್ಲಾರೆನ್ಸ್ ನೈಟಿಂಗೇಲ್ ದಾದಿಯರ ತರಬೇತಿ ವಿದ್ಯಾಭ್ಯಾಸ ಶಾಲೆಯ ಆಡಳಿತದಲ್ಲಿ ಜಾರಿಗೆ ತಂದದ್ದು ಜವಾಬ್ದಾರಿಯ ನಿರ್ವಹಣೆಯೊಂದಿಗೆ ಜೋವೆಟನ ಸಲಹೆಯಂತೆ ಗ್ರಂಥರಚನೆಯಲ್ಲಿ ತೊಡಗಿಕೊಂಡು ಅವಳ ಕಾರ್ಯಕ್ಕೆ ತಂದೆಮರಣ, ತಾಯಿಯ ಅನಾರೋಗ್ಯ, ಆತ್ಮೀಯರ ಅಗಲಿಕೆ, ಅವಳನ್ನು ಮನೋಶಾಂತಿ ಕದಡುವದು, ಆದರೂ ತನ್ನಿಂದ ಕನಿಷ್ಟ ಉಪಯೋಗವಾಗುವಂತಿದ್ದರೆ ನಾನಿಗೇನೆ ಎನ್ನುವ ಹೇಳಿಕೆಯೊಂದಿಗೆ ಅನೇಕ ಯುವ ದಾಯಿಯರ ಪ್ರೀತಿಯವಳಾದಳು ನೈಟಿಂಗೇಲ ಶಾಲೆಯ ಆಡಲಿತ ಮತ್ತು ಲೇಖನದಲ್ಲಿ ತಲ್ಲಿಳಾಗಿದ್ದಾಗೆ ಮತ್ತೆ ಭಾರತದ ಸ್ಯಾನಿಟರಿ 1874 ರಲ್ಲಿ ನಿಷ್ಠಾತ ಸರ್ ಆರ್ಥರಕಾಟದ ಬೇಟಿ ಚರ್ಚೆ ಆದರೂ ಇಂಡಿಯಾದ ಅಭಿವೃದ್ಧಿಯ ವಿಷಯದಲ್ಲಿ 1879 ಸೋತಿದ್ದು, ಮತ್ತೆ ಅವಳನ್ನು ಕುಟುಂಬ ಹಾಗೂ ಸ್ನೇಹದತ್ತ ಹೊರಳಿಸಿತು. ಜೊವೆಟನ್ ಜೀವೆನ ಹುರುಪಿನ ಕೆಲಮಾತುಗಳು ಅವಳ ಮನಸ್ಸಿಗೆ ನಾಟಿದವು .

1883 ರವರೆಗೂ ಅವಳ ಪ್ರಯತ್ನ ಬ್ರಿಟಿಷ ಯೋಧ ಜನರಲ್ ಗೋರ್ಡನನ ಪರಿಚಯ ಮತ್ತೆ ಅವಳು ಆರೋಗ್ಯ ಮೃತಳಾಗಿದ್ದು 1884 ರ ನಂತ ಸಿಟ್ಟಿಗೆ ವಿಧಾಯ ಹೇಳಿದಳು. ವೃದ್ಧಾಪ್ಯ ಒಪ್ಪಿಂಕೊಂಡಿದ್ದು, ಪ್ಲಾರೆನ್ಸ್ ನೈಟಿಂಗೇಲಳ ಸುಧಾರಣಾ ಸಲಹಾಸೂತ್ರ ಒಂದೊಂದಾಗಿ ಒಪ್ಪಿಕೊಮಡಿದ್ದು ನಂತರ, ಮಸೂದೆ ಪಾಸ್ ಆಗಿದ್ದು ನಂತರ ತಿರಸ್ಕರಿಸಿದ್ದು ದಾಯಿಂiÀiರ ವೃತ್ತಿ ಪವಿತ್ರತೆ ಮೌಲ್ಯ ಎಷ್ಟು ಮುಖ್ಯ ಎಂಬುದನ್ನು ಪ್ಲಾರೆನ್ಸ್ ನೈಟಿಂಗೇಲ ತೋರಿಸಿಕೊಟ್ಟಳು 17ನೆ ಅಧ್ಯಾಯದಲ್ಲಿ ಕೊನೆಯ ದಿನದಲ್ಲಿ ಅವಳಲ್ಲಾದ ಬದಲಾವಣೆ ಮಾತೃಹೃದಯ ವೈಶಾಲ್ಯತೆ ಸಹೋದರಿ ಪಾರ್ಥೆಯ 1890 ರಲ್ಲಿ ಮರಣ 1893 ರಲ್ಲಿ ಸ್ನೇಹಿತ ಜೋವೆಟ್ ಅಗಲಿಕೆ 1894 ರಲ್ಲಿ ಹ್ಯಾರಿ ಹಾಗೂ ಶೋರ ಅವಳನ್ನು ಅಗಲಿದರೂ ಜೀವನ ಅಮೂಲ್ಯ ಎನ್ನುವ ಅವಳ ಆಶಾಭಾವ ಎಲ್ಲರಿಗೂ ಮಾರ್ಗದರ್ಶಿಯಾಗಿದೆ. 1867ರಿಂದ ಕಣ್ಣನೋವು ಬಂದು ಓದಲು ಬರೆಯಲು ಸಾಧ್ಯವಾಗದ ಪರಿಸ್ಥಿತಿಯಾಯ್ತು 1901 ರಲ್ಲಿ ನೆನಪಿನ ಶಕ್ತಿ ಕ್ಷೀಣ 1910, 13 ನೇ ಅಗಷ್ಟರ ದಿನ ಅವಳು ಚಿರನಿದ್ರೆಗೆ ಜಾರಿದ್ದು ಅವಳ ಪರಿಸ್ಥಿತಿ ಕಣ್ಣು ತುಂಬಿತು.

ಹೀಗೆ ಅವಳ ಜಾÐನತ್ಮಕ ಆದ್ಯಾತ್ಮಕ ಚೈತನ್ಯ ಅಭೂತಪೂರ್ವಚರಿತ್ರೆ ಕಾಯಕಜೀವಿ ಪ್ಲಾರೆಸ್ಟ್ ನೈಟಿಂಗೇಲಳ ಚರಿತ್ರೆ 2ನೇಯ ಮುದ್ರಣ ಕಂಡಿದ್ದು ಹರ್ಷ, ಆಗುಂಬೆ ನಟರಾಜರ ಕೃತಿ ರಚನಾ ಕಾರ್ಯಕ್ಕೆ ಎಷ್ಟು ಶ್ರಮಿಸಿದವರು ಎನ್ನುವುದು ಈ ಕೃತಿ ಓದಿದವರಿಗೆ ತಿಳಯುತ್ತದೆ. ಪತ್ರಿಕ್ಷಣ ಆಗುವ ಚಿಕ್ಕ ನೋವು ಸಣ್ಣ ಅಪಮಾನ, ನಿಂದನೆ, ಸೋಲುಗಳಿಗೆ ದುಃಖಿಸುವ ಹಿಂಜರಿಯುವ ನಮ್ಮಂತಹ ಹಲವರಿಗೆ ಕೃತಿಯು ದಾರಿದೀಪವಾಗಿದೆ. ಎಂತಹ ಪರಿಸ್ಥಿಯಲ್ಲೂ ಜೀವನ ಎದುರಿಸಬೇಕು, ಅನುಭವಿಸಬೇಕು ಬೆಳೆಯಬೇಕು ಮರಳಿಯತ್ ಮಾಡಬೇಕು ಎನ್ನುವ ಪ್ಲಾರೆನ್ಸ್ ನೈಟಿಂಗೇಲ ಎನ್ನುವ ಮಹಿಳಾ ಮಣಿಯು ಮುಕುಟಪ್ರಾಯಗಳು.

ಅತಂತ್ಯ ಸುಂದರ ಭಾಷಾ ಶೈಲಿ ಓದುಗರನ್ನು ಇಡೀ ಜಗತ್ತನ್ನೆ ಸುತ್ತಿಸಿಕೊಂಡು ಬರುವಂತ ಮೇಲು ಕೃತಿ ಓದಿ ಪಾತ್ರಧಾರಿಯಾಗಿಯೇ ಹೋಗುತ್ತೇವೆ. ಲೇಖಕರಿಗೆ ಮನದಾಳ ಅಭಿನಂದನೆಗಳು ತಾವೆಲ್ಲ ಕೂಡ ಓದಿ ಪ್ರೋತ್ಸಾಹಿಸಿ ಲೇಖಕರ ಜಂಗಮ ವಾಣಿ : 9481423004.

ಲೇಖಕಿ:
ಲಲಿತಾ ಮಹಾವೀರ ಕ್ಯಾಸನ್ನವರ
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ
ಹಲಗಾ, ಬೆಳಗಾವಿ.
ಮೊ: 9035527366

- Advertisement -
- Advertisement -

Latest News

ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಸವರಾಜ ಪತ್ತಾರ ಅವರಿಗೆ ಸನ್ಮಾನ

ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ...
- Advertisement -

More Articles Like This

- Advertisement -
close
error: Content is protected !!
Join WhatsApp Group