ಅಪರೂಪದ ಚಿಪ್ಪು ಹಂದಿ ಪತ್ತೆ; ರಕ್ಷಿಸಿ ಕಾಡಿಗೆ ಬಿಟ್ಟ ಅರಣ್ಯಾಧಿಕಾರಿಗಳು

Must Read

ಬೀದರ: ಬೀದರ ಜಿಲ್ಲೆಯ ಔರಾದ‌ ಪಟ್ಟಣವು ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಪಟ್ಟಣ. ಔರಾದ ತಾಲೂಕಿನ ಗಂಗನಬೀಡ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಚಿಪ್ಪುಹಂದಿ ಪತ್ತೆಯಾಗಿದೆ.

ರೈತರು ಬೆಳಿಗ್ಗೆ ಹೊತ್ತು ಹೊಲದಲ್ಲಿ ಕೆಲಸ ಮಾಡುವಾಗ ಚಿಪ್ಪು ಹಂದಿಯನ್ನು ಕಂಡು ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಪ್ರಭಾರ ವಲಯ ಅರಣ್ಯಾಧಿಕಾರಿ ಅಂಕುಶ ಮಚಕುರಿ ರೈತರೊಬ್ಬರು ತಮ್ಮ ಹೊಲಕ್ಕೆ ಹಾಕಲಾದ ಬೇಲಿಗೆ ಸಿಕ್ಕಿಕೊಂಡಿದ್ದ ಚಿಪ್ಪುಹಂದಿಯನ್ನು ಹೊರ ತೆಗೆದು ಅದನ್ನು ಪುನಃ ಕಾಡಿಗೆ ಬಿಟ್ಟಿದ್ದಾರೆ. 

ಮೈತುಂಬ ಕಂದುಬಣ್ಣದ ಚಿಪ್ಪು ಹೊಂದಿದ ಸುಮಾರು 3 ಅಡಿ ಉದ್ದದ ಚಿಪ್ಪು ಹಂದಿಯನ್ನು ನೋಡಲು ಸುತ್ತಲಿನ ಹೊಲಗಳ ರೈತರು ಸೇರಿದ್ದರು.

ಚಿಪ್ಪುಹಂದಿಯನ್ನು ಆಂಗ್ಲ ಭಾಷೆಯಲ್ಲಿ “ಪೆಂಗೋಲಿನ್” ಎಂದು ಕರೆಯುತ್ತಾರೆ. 

ಇದೊಂದು ಅಳಿವಿನ ಅಂಚಿನಲ್ಲಿರುವ ಪ್ರಾಣಿ.  ಅಪರೂಪಕ್ಕೆ ಸಿಗುತ್ತವೆ. ಇವು ಪ್ರಾಣಿಗಳು ಮನುಷ್ಯನಿಗೆ ಅಪಾಯವಲ್ಲ. ರಾತ್ರಿ ವೇಳೆ ಓಡಾಡುತ್ತವೆ. ಇರುವೆಗಳು, ಗೆದ್ದಲು ಹುಳು ಇವುಗಳ ಆಹಾರ. ಔಷಧ ತಯಾರಿಸಲು ಚಿಪ್ಪು ಹಂದಿ ಬಳವುದರಿಂದ ಇವುಗಳಿಗೆ ಭಾರಿ ಬೇಡಿಕೆಯೂ ಇದೆ ಎಂದು ಪ್ರಭಾರ ವಲಯ ಅರಣ್ಯಾಧಿಕಾರಿ ಅಂಕುಶ ಮಚಕುರಿ ಮಾಹಿತಿ ‌ನೀಡಿದರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group