spot_img
spot_img

Bidar: ಮನೆಯೊಂದು ಮೂರು ಬಾಗಿಲಾದ ಬೀದರ ಬಿಜೆಪಿ; ಇನ್ನೂ ಆರದ ಅಸಮಾಧಾನದ ಕಿಚ್ಚು

Must Read

- Advertisement -

ಬೀದರ: ಬರುವ ಲೋಕಸಭಾ ಚುನಾವಣೆಯಲ್ಲಿ ಮರಾಠ ಸಮಾಜದ ಅಭ್ಯರ್ಥಿಗೆ ಟಿಕೆಟ್  ನೀಡುವಂತೆ ಹೈ ಕಮಾಂಡಿಗೆ ಒತ್ತಾಯ ಮಾಡಿದ ಬಸವಕಲ್ಯಾಣ ಶಾಸಕ ಶರಣು ಸಲಗಾರ ಈ ಮೂಲಕ ಹಾಲಿ ಸಂಸದರಾದ ತಮ್ಮದೇ ಪಕ್ಷದ ಭಗವಂತ ಖೂಬಾ ಅವರಿಗೆ ಟಾಂಗ್ ನೀಡಿದ್ದಾರೆ

ಇದಲ್ಲದೆ ಕ್ಷೇತ್ರದಲ್ಲಿ ಲಿಂಗಾಯತ ಮತ್ತು ಮರಾಠ ಸಮಾಜದ ನಡುವೆ ಅಸಮಾಧಾನ ಕಿಚ್ಚು ಹಚ್ಚಿದ್ದಾರೆ ಬಸವಕಲ್ಯಾಣ ಶಾಸಕ ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ.

ಲೋಕಸಭಾ ಚುನಾವಣೆಯಲ್ಲಿ ಬೀದರ್ ಜಿಲ್ಲೆಯಿಂದ  ಮರಾಠ ಸಮಾಜದ ಮುಖಂಡ ಪದ್ಮಾಕರ ಪಾಟೀಲ್ ಅವರಿಗೆ ಟಿಕೆಟ್ ನೀಡಬೇಕೆಂದು ಕೇಂದ್ರ ನಾಯಕರ ಮೇಲೆ ಒತ್ತಡ ಹಾಕಿದ ಶರಣು ಸಲಗರ ಅವರು ಮರಾಠ ಸಮಾಜ  ಬೆಂಬಲಕ್ಕೆ ನಿಂತು ಪರೋಕ್ಷವಾಗಿ ಖೂಬಾ ಗೆ ಟಿಕೆಟ್ ನೀಡದಂತೆ ಮನವಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ.

- Advertisement -

ಈ ಬೆಳವಣಿಗೆಯಿಂದಾಗಿ ಬೀದರ ಜಿಲ್ಲೆಯಲ್ಲಿ ಬಿಜೆಪಿ ಒಂದು ಮನೆ ಮೂರು ಬಾಗಿಲು ಆದಂತಾಗಿದೆಯೆನ್ನಲಾಗಿದೆ. ಭಗವಂತ ಖೂಬಾಗೆ ಜಿಲ್ಲೆಯಲ್ಲಿ ತಿರುಗಿ ಬಿದ್ದ  ಸ್ವ ಪಕ್ಷದ ಇಬ್ಬರು ಶಾಸಕರಿಂದಾಗಿ ಮುಂದೆ ಬರುವ ಲೋಕಸಭಾ ಚುನಾವಣೆ ಬೀದರ್ ಜಿಲ್ಲೆಯಿಂದ ಗೆಲುವು ಸ್ವಲ್ಪ ಮಟ್ಟಿಗೆ ಕಷ್ಟವಾಗಬಹುದು ಎನ್ನಲಾಗುತ್ತಿದೆ.

ಮೊನ್ನೆ ತಾನೇ ಬೀದರ್ ಜಿಲ್ಲೆ ಔರಾದ ಶಾಸಕ ಪ್ರಭು ಚವ್ಹಾಣ ಕೂಡ ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಕೊಲೆ ಆರೋಪ ಹೊರಿಸಿದ ಘಟನೆ ಇನ್ನೂ ಬೀದರ್ ಜಿಲ್ಲೆದ್ಯಾಂದತ್ತ ಚರ್ಚೆ ನಡೆಯುತ್ತಿರುವಾಗಲೇ ಕೇಂದ್ರ ಸಚಿವ ಭಗವಂತ ಖೂಬಾಗೆ ಸಲಗರ ಅವರು ಇನ್ನೊಂದು ಶಾಕ್ ನೀಡಿದ್ದಾರೆ ಎನ್ನಬಹುದು. 

ಭಾರತೀಯ ಜನತಾ ಪಕ್ಷದ ಹೈಕಮಾಂಡ್ ನಿಂದ ಈ ಕ್ರಿಯೆಗೆ ಯಾವ ಪ್ರತಿಕ್ರಿಯೆ ಬರಬಹುದು ಎಂಬುದನ್ನು ಬೀದರ ಜನತೆ ಕುತೂಹಲ ದಿಂದ ಎದುರು ನೋಡುತ್ತಿದ್ದಾರೆ.

- Advertisement -

ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ವಿಮರ್ಶೆ ; ಹಾಸನದಲ್ಲಿ ಶಿವ ಸಂಚಾರ ತಂಡದ ಬಂಗಾರದ ಮನುಷ್ಯ ನಾಟಕ

ಹಾಸನದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದ ಹೊರ ಆವರಣದಲ್ಲಿ ಶಿವಶಂಚಾರ ತಂಡದಿಂದ ಶನಿವಾರ ಪ್ರದರ್ಶಿತವಾದ ಬಂಗಾರದ ಮನುಷ್ಯ ನಾಟಕ ಹಲವು ಆಯಾಮಗಳಿಂದ ಗಮನ ಸೆಳೆಯಿತು. ಪ್ರಸಿದ್ದ...
- Advertisement -

More Articles Like This

- Advertisement -
close
error: Content is protected !!
Join WhatsApp Group