ಬಹಳಷ್ಟು ಬಟ್ಟೆಯಿರೆ ಬಟ್ಟೆಯಂಗಡಿಯಲ್ಲಿ
ಇಷ್ಟವಾದುದನಾಯ್ದಕೊಳ್ಳುವಂತೆ
ನೂರಾರು ಮತಗಳಿವೆ ಲೋಕದೊಳಗಾರಿಸಿಕೊ
ನಿನಗಿಷ್ಟವಾದ ಮತ – ಎಮ್ಮೆತಮ್ಮ
ಶಬ್ಧಾರ್ಥ
ಮತ – ತತ್ತ್ವ
ತಾತ್ಪರ್ಯ
ಬಟ್ಟೆಯ ಅಂಗಡಿಯಲ್ಲಿ ಸಾವಿರಾರು ಬಣ್ಣಬಣ್ಣದ ಮತ್ತು ಹಲವಾರು ವಿನ್ಯಾಸದ ಬಟ್ಟೆಗಳಿರುತ್ತವೆ. ಅವು ಹತ್ತಿ, ರೇಶ್ಮೆ,
ಪಾಲಿಸ್ಟರ್, ಪಾಲಿಥಿನ್, ಉಣ್ಣೆ ಮುಂತಾದ ಎಳೆಗಳಿಂದ
ತಯಾರಾದ ಬಟ್ಟೆಗಳಿರುತ್ತವೆ. ಬೆಲೆಗೆ ತಕ್ಕಂಥ ಗುಣಮಟ್ಟದ
ಬಟ್ಟೆಗಳು ದೊರೆಯುತ್ತವೆ. ನಾವು ನಮಗೆ ಇಷ್ಟವಾಗುವ ಮತ್ತು ನಮಗೆ ಹೊಂದುವ ಬಟ್ಟೆಗಳನ್ನು ಆಯ್ದುಕೊಳ್ಳುವ
ಸ್ವಾತಂತ್ರವಿದೆ. ಬಟ್ಟೆ ಕೊಳ್ಳುವ ಮುಖ್ಯ ಉದ್ಧೇಶ
ಗಾಳಿ, ಬಿಸಿಲು, ಚಳಿ, ಮಳೆಗಳಿಂದ ನಮ್ಮ ದೇಹ ರಕ್ಷಣೆ
ಮಾಡಿಕೊಳ್ಳುವುದರ ಜೊತೆಗೆ ಮಾನ ಮುಚ್ಚಿಕೊಳ್ಳುವುದು.
ಹಾಗೆ ಪ್ರಪಂಚದಲ್ಲಿ ಹಲವಾರು ಮತ,ಧರ್ಮಗಳು ಇವೆ. ಜೈನ, ಬೌದ್ಧ, ಶೈವ, ವೈಷ್ಣವ, ಗಾಣಪತ್ಯ, ಶಾಕ್ತೇಯ , ಯಹೂದಿ, ಕ್ರೈಸ್ತ, ಇಸ್ಲಾಂ, ಪಾರ್ಸಿ,ಸಿಖ್ಖ , ವೀರಶೈವ, ಲಿಂಗಾಯತ, ಮುಂತಾದ ಧರ್ಮಗಳಿವೆ.ಮತ್ತೆ ಆಯಾ ಧರ್ಮಗಳಲ್ಲಿ ಅನೇಕ ಕುಲ,ಜಾತಿ ,ಪಂಥ, ಪಂಗಡಗಳು ಸಾಕಷ್ಟು ಇವೆ. ಮನುಷ್ಯಹುಟ್ಟಿನಿಂದ ಯಾವ ಧರ್ಮಗಳಿಗೆ ಸೇರಿರುವುದಿಲ್ಲ. ನಮಗೆ ಇಷ್ಟವಾದ ಧರ್ಮವನ್ನು ಆಯ್ದು ಅದರಂತೆ ಆಚರಿಸಲು ಸ್ವಾತಂತ್ರವಿದೆ. ನಮಗೆ ಹೊಂದುವ ಧರ್ಮವನ್ನು ನಾವುಆಯ್ದುಕೊಂಡು ಆಚರಿಸಬೇಕು. ಎಲ್ಲ ಧರ್ಮದ ಮುಖ್ಯಉದ್ದೇಶ ಸಮಾಜದಲ್ಲಿ ಶಾಂತಿ ನೆಮ್ಮದಿಯಿಂದ ಜೀವಿಸುವುದು.ಯಾವುದೆ ಧರ್ಮವಿರಲಿ ಸೌಹಾರ್ದದಿಂದ ಬದುಕಬೇಕು.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990