ನಂದಿನಿ ಸಿಹಿ ಉತ್ಸವ ಮಳಿಗೆ ಉದ್ಘಾಟಿಸಿದ ಸರ್ವೋತ್ತಮ ಜಾರಕಿಹೊಳಿ

Must Read

ಮೂಡಲಗಿ: ಪಟ್ಟಣದ ಪುರಸಭೆ ಹತ್ತಿರ ಇರುವ ನಂದಿನಿ ಮಾರಾಟ ಮಳಿಗೆಯಲ್ಲಿ ನಾಗರ ಪಂಚಮಿ ನಿಮಿತ್ತ ರಿಯಾಯಿತಿ ದರದಲ್ಲಿ ನಂದಿನಿ ಸಿಹಿ ಉತ್ಸವ ಮಳಿಗೆಯನ್ನು ಗೋಕಾಕ ಲಕ್ಷ್ಮೀ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸತ್ಕಾರ ಸ್ವೀಕರಿಸಿ ಸರ್ವೋತ್ತಮ ಜಾರಕಿಹೊಳಿ ಅವರು ಮಾತನಾಡಿ, ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳದ ನಂದಿನಿ ಸಿಹಿ ಉತ್ಸವ ಪ್ರಯುಕ್ತ ವಿವಿಧ ಸಿಹಿ ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ನೀಡುತ್ತಿದ್ದು, ಗ್ರಾಹಕರು ಈ  ನಂದಿನಿ ಸಿಹಿ ಉತ್ಸವದಲ್ಲಿ ಉತ್ಪನಗಳನ್ನು ಶೇ.20 ರಷ್ಟು ರಿಯಾಯಿತಿ ದರದಲ್ಲಿ ಖರೀದಿಸುವ ಮೂಲಕ ಹೈನುಗಾರಿಕೆದಾರರಿಗೆ ಉತ್ತೇಜಿಸುವ ಕಾರ್ಯ ಮಾಡಿದಂತಾಗುವುದು ಎಂದ ಅವರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಾಲ್ಕು ವರ್ಷಗಳ ಕಾಲ ಕೆ.ಎಂ.ಎಫ್ ರಾಜ್ಯಾಧ್ಯಕ್ಷರಿದ್ದಾಗ ಉನ್ನತಿಗೆ ಮತ್ತು ಪ್ರಗತಿಗೆ ಶ್ರಮಿಸಿದ್ದಾರೆ ಎಂದರು. 

ಕೆಎಂಎಫ್ ಮೂಡಲಗಿ ವಲಯದ ವಿಸ್ತರಣಾಧಿಕಾರಿ ರವಿ ತಳವಾರ ಸಿಹಿ ಉತ್ಸವದ ಮಾಹಿತಿ ನೀಡಿದರು.

 ಈ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಆಪ್ತ ಸಹಾಯಕ ನಿಂಗಪ್ಪ ಕುರಬೇಟ, ಮಲ್ಲು ಪಾಟೀಲ, ಪುರಸಭೆ ಸದಸ್ಯರಾದ ಸಂತೋಷ ಸೋನವಾಲ್ಕರ, ಹನಮಂತ ಗುಡ್ಲಮನ್ನಿ, ನಂದಿನಿ ಮಳಿಗೆಯ ಮಹಾಂತೇಶ ಬೈಲವಾಡ,  ಬಿಜೆಪಿ  ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ,  ಅನ್ವರ ನದಾಫ್, ಮುತ್ತಪ್ಪ ಖಾನಾಪೂರ, ಸಿದ್ದಪ್ಪ ಯಾದಗೂಡ, ಬೀರಪ್ಪ ಹೊಸಟ್ಟಿ, ಮಹಾಂತೇಶ ಕುಡಚಿ, ಕಲ್ಮೇಶ ಗೋಕಾಕ, ಸುರೇಶ ಪಾಟೀಲ, ಶಿವಬೋಧ ಗೋಕಾಕ  ಮತ್ತಿತರರು ಇದ್ದರು.

Latest News

ಶ್ರೀಕೃಷ್ಣನ ಪಾತ್ರದಾರಿ ಎ.ಹೆಚ್.ಗಣೇಶ ಅಂಕಪುರ

ನಿವೃತ್ತ ಪ್ರಾಂಶುಪಾಲರು ಎ.ಹೆಚ್.ಗಣೇಶ್ ಮೂಲತಃ ಅಂಕಪುರ ಗ್ರಾಮದವರು. ಹಾಲಿ ಹಾಸನದ ವಾಸಿ. ಹಾಸನ ತಾಲ್ಲೂಕು ಕಟ್ಟಾಯ ಹೋಬಳಿ ಅಂಕಪುರ ಗ್ರಾಮದಲ್ಲಿತಂದೆ ಹನುಮಂತೇಗೌಡ ತಾಯಿ ಹೊಂಬಾಳಮ್ಮ ದಂಪತಿಗಳ...

More Articles Like This

error: Content is protected !!
Join WhatsApp Group