ಐತಿಹಾಸಿಕ ಕವನ

Must Read

ಗಂಡುಗಲಿ ಕುಮಾರ ರಾಮ

ಕನ್ನಡ ನಾಡಿನ,ಚಿನ್ನದ ಬೀಡಿನ
ರನ್ನದ ರಾಮನು ಗಂಡುಗಲಿ||
ಕನ್ನವ ಹಾಕುವ,ನನ್ನಿಯ ನಾಡುವ
ಕುನ್ನಿಗೆ ಸಿಂಹ ಸ್ವಪ್ನದಲಿ ||೧||

ಪರನಾರಿಯಣ್ಣ,ಶಿರಕಾಯೊವಣ್ಣ
ಪರಶಿವನಾಂಶದ ರಾಮಣ್ಣ |
ಧರಣಿಗೆ ಕುತ್ತನು,ತರುವಂತ ಶತ್ರುವಿಗೆ
ಮರಣದ ದೀಕ್ಷೆಯ ನೀಡುವನು ||೨||

ಕಂಪನ ಹುಟ್ಟಿಸೊ,ಕಂಪಿಲ ರಾಯನ
ಸಂಪಿಗೆ ಸುಂದರ ಯುವರಾಜ |
ಇಂಪಿನ ದನಿಯವ,ಕೆಂಪನೆ ಬಣ್ಣವ
ಕಂಪನು ಮೂಡಿಸೊ ರವಿತೇಜ||೩||

ಮುತ್ತಿನ ಚೆಂಡಿನ,ನೆತ್ತಿಯ ಮೇಲಕೆ
ಬಿತ್ತದು ಹೊಡೆತವು ರಾಮನದು |
ಎತ್ತರ ಜಿಗಿಯಿತು,ಚಿತ್ತವ ಕೆಡಿಸಿತು
ಬಿತ್ತದು ಮಾತೆಯ ಮನೆಯೊಳಗೆ||೪||

ಚೆಂಡನು ಬೇಡಲು,ಗಂಡ್ಹುಲಿ ಬಂದುದ
ಕಂಡಳು ಕಾಮದ ಚಿಕ್ಕಮ್ಮ |
ಕೆಂಡದ ಕಾಮವ,ತುಂಡರಿಸೆನ್ನಲು
ಬೆಂಡೆಯ ತೋರಿದ ಕಂದಮ್ಮ ||೫||

ಅದರೊಳು ಕೆತ್ತಿತು,ಗಧಗಧ ನಡುಗಿಸೊ
ಮುದವನು ನೀಡುವ ಮಾತೊಂದ|
ಓದಿದಳು ಮಾತೆಯು,ತೊದಲುವ ದನಿಯಲಿ
ಪದವನು ಪರನಾರಿ ಸೋದರ ||೬||

ಕೋಪಿಸಿಕೊಂಡಳು,ರೂಪಸಿ ಪಾಪಿಯು
ಶಾಪವ ಹಾಕುತ ಮನದಲ್ಲಿ |
ಅಪವಾದ ಕೊಡುತ,ತಾಪದಿ ದೂರಲು
ಕೋಪದಿ ಪಿತ ಸುತನ ವಧಿಸಲು||೭||

ಕಮ್ಮಟ ದುರ್ಗದ,ಹೆಮ್ಮೆಯ ಪುತ್ರನು
ಬಿಮ್ಮನೆ ರಾಜ್ಯವನಾಳುತಿರೆ|
ಅಮ್ಮನ ಸಂಚಿಗೆ,ಕಮ್ಮಟ ಕೀರ್ತಿಯು
ಸುಮ್ಮನೆ ಮಣ್ಣಿನ ಪಾಲಾಯ್ತು ||೮||

*ಶ್ರೀ ಈರಪ್ಪ ಬಿಜಲಿ.ಕೊಪ್ಪಳ*

1 COMMENT

  1. ಕವನವನ್ನು ಪ್ರಕಟಸಿದ ಸಂಪಾದಕರಿಗೆ ಹೃತ್ಪೂರ್ವಕವಾದ ಧನ್ಯವಾದಗಳು👏ಸರ

Comments are closed.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group