spot_img
spot_img

ಖಾಸಗಿ ಪಶು ವಿವಿ ಸ್ಥಾಪನೆ ವಿರೋಧಿಸಿ ಬೃಹತ್ ಪ್ರತಿಭಟನೆ

Must Read

spot_img
- Advertisement -

ಬೀದರ: ಖಾಸಗಿ ಪಶು ವಿಶ್ವವಿದ್ಯಾಲಯ ಸ್ಥಾಪನೆ ವಿರೋಧಿಸಿ ಪಶು ವೈದ್ಯಕೀಯ ಕಾಲೇಜಿನ‌ ವಿದ್ಯಾರ್ಥಿಗಳು ಪ್ರತಿಭಟನೆ ‌ನಡೆಸಿ ಆಕ್ರೋಶ ಹೊರಹಾಕಿದರು‌.

ನಗರದ ಹೊರವಲಯದಲ್ಲಿರುವ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಎದುರಿಗೆ ಧರಣಿ‌ ಕುಳಿತು ಈಗಾಗಲೇ ರಾಜ್ಯಾದ್ಯಂತ 7 ಕಾಲೇಜುಗಳು ವಿಶ್ವವಿದ್ಯಾಲಯದ ಅಧೀನದಲ್ಲಿ‌ ಕಾರ್ಯನಿರ್ವಹಿಸುತ್ತಿವೆ. ಇದರ ಹೊರತಾಗಿ ಖಾಸಗಿ‌ ಒಡೆತನಕ್ಕೆ ನೂತನ ಪಶು ವಿಶ್ವವಿದ್ಯಾಲಯ ಸ್ಥಾಪನೆಗೆ ಮಂಗಳೂರಿನಲ್ಲಿ ಸಿದ್ದತೆ ನಡೆಯುತ್ತಿದ್ದು, ಅನುಮತಿ‌ ಕೋರಿ  ಸರಕಾರಕ್ಕೆ ಪತ್ರವನ್ನು ಬರೆದಿದ್ದಾರೆ.

ಆದರೆ ಅದಕ್ಕೆ ಸರಕಾರ ಅನುಮತಿ‌ ನೀಡಬಾರದು‌. ಈಗಾಗಲೇ ರಾಜ್ಯಾದ್ಯಂತ ಏಳು ಕಾಲೇಜುಗಳಿಂದ ಪ್ರತಿವರ್ಷ 500 ಕ್ಕು ಜನ ವಿದ್ಯಾರ್ಥಿಗಳು ತೇರ್ಗಡೆಯಾಗ್ತಾರೆ. ಅದರಲ್ಲೆ ಕೆಲವರಿಗೆ ಉದ್ಯೋಗ ಸಿಗದೇ ನಿರುದ್ಯೋಗಿಗಳಾಗಿದ್ದಾರೆ. ಮತ್ತೆ ನೂತನ ವಿವಿ ಸ್ಥಾಪನೆ ಆದರೆ ಇನ್ನಷ್ಟು ನಿರುದ್ಯೋಗ ಸಮಸ್ಯೆ ಉದ್ಭವವಾಗುತ್ತದೆ. ಪ್ರೈವೇಟ್ ಕಾಲೇಜುಗಳಲ್ಲಿ ಹೆಚ್ವಿನ ಹಣ ನೀಡಿ ಪ್ರವೇಶ ಪಡೆಯಬೇಕಾಗುತ್ತದೆ. ಹಾಗಾಗಿ ಖಾಸಗಿಯವರಿಗೆ ಅನುಮತಿ‌ ನೀಡದೇ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯವೊಂದನ್ನೆ ಮುಂದುವರೆಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

- Advertisement -

ಒಂದು ವೇಳೆ ಖಾಸಗಿ ಅವರಿಗೆ ಅನುಮತಿ‌ ನೀಡಿದರೆ ಉಗ್ರ ಹೋರಾಟ ಮಾಡುವುದಾಗಿ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಯಶಸ್ವಿ ಪ್ರಯೋಗ ಪ್ರಚಂಡ ರಾವಣ

ಹಾಸನ ಜಿಲ್ಲಾ ಕನ್ನಡ ರಂಗಭೂಮಿ ಕಲಾವಿದರ ಸಂಘದ ಕಲಾವಿದರು ಗಾಡೇನಹಳ್ಳಿ ವೀರಭದ್ರಾಚಾರ್ ನಿರ್ದೇಶನದಲ್ಲಿ ದಿವಂಗತ ಕಣಗಲ್ ಪ್ರಭಾಕರ್ ವಿರಚಿತ ಪ್ರಚಂಡ ರಾವಣ ನಾಟಕ ಪ್ರದರ್ಶಿಸಿದರು. ಈ ನಾಟಕವನ್ನು...
- Advertisement -

More Articles Like This

- Advertisement -
close
error: Content is protected !!
Join WhatsApp Group