ನಾನು ಮಾತ್ರನೇ ಎಂಬ ಭ್ರಮೆ ಬೇಡ

Must Read

ಮೂಡಲಗಿ: ಆತ್ಮವಿಶ್ವಾಸ ಇರಲಿ ಅಹಂಕಾರ ಬೇಡ ನಾನು ಅನ್ನೋ ಸ್ಥೈರ್ಯ ಇರಲಿ ನಾನು ಮಾತ್ರನೇ ಎಂಬ ಭ್ರಮೆ ಬೇಡ ಎಂದು ಹೇಳಿದ ಕೃಷ್ಣ ಪರಮಾತ್ಮನು ಪ್ರತಿಯೊಬ್ಬರು ಭಕ್ತಿಯಿಂದ ಪೂಜಿಸಿದರೆ ಮುಕ್ತಿ ಪಡೆಯಲು ಸಾಧ್ಯ ಎಂದು ಸಾಹಿತಿ ಲಕ್ಷ್ಮಿ ಜೋಸೆಫ್ ಬೈಲಾ ಹೇಳಿದರು.

ಪಟ್ಟಣದ ಆರ.ಡಿ.ಎಸ್ ಸೊಸೈಟಿಯ ಅಂಗಸಂಸ್ಥೆಯಾದ ವಿದ್ಯಾನಿಕೇತನ ಸಿ.ಬಿ.ಎಸ್.ಇ ಶಾಲೆಯಲ್ಲಿ ಜರುಗಿದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಶಿಕ್ಷಣದ ಜೊತೆಗೆ ಮಹಾಭಾರತ, ರಾಮಾಯಣ ಕಥೆಗಳನ್ನು ಕೇಳಿ ಅದರಲ್ಲಿ ಇರುವಂಥ ವಿಷಯಗಳನ್ನು ಅರಿತುಕೊಳ್ಳಬೇಕು ಎಂದರು.

ಶಾಲೆಯ ಪ್ರಾಂಶುಪಾಲರು ಜೋಸೆಫ್ ಎಸ್.ಬಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯ ವಿದ್ಯೆಯೊಂದಿಗೆ ವಿನಯ ಬೆಳೆಸಿಕೊಳ್ಳಬೇಕು ಹಾಗೂ ದೇವರು ಧರ್ಮದಲ್ಲಿ ಶ್ರದ್ಧೆ ಉಳ್ಳವರಾಗಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು ಶ್ರೀ ಕೃಷ್ಣ  ಮತ್ತು ರಾಧೆಯ ವೇಷಭೂಷಣದಲ್ಲಿ ಗಮನ ಸೆಳೆದು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಸುನಿತಾ ಸುಣದೊಳಿ, ಸೌಜನ್ಯ ಮಿರಾಶಿ, ಶಿಕ್ಷಕ ಆನಂದ ಕಂಬಾರ ಹಾಗೂ ಶಿಕ್ಷಕ ವೃಂದ, ಶಾಲಾ ಮಕ್ಕಳು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group