spot_img
spot_img

ಡಾ. ರಾಧಾಕೃಷ್ಣನ್ ಜನ್ಮ ದಿನ ಆಚರಣೆ

Must Read

spot_img
- Advertisement -

ಸಿಂದಗಿ: ಡಾ|| ಸರ್ವಪಲ್ಲಿ ರಾಧಾಕೃಷ್ಣನ್ ರವರು 05 ಸಪ್ಟೆಂಬರ್ 1888 ರಂದು ಜನಿಸಿ, ವೃತ್ತಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಭಾರತದ ಮೊದಲ ಉಪರಾಷ್ಟ್ರಪತಿಯಾಗಿ ಮತ್ತು ದೇಶದ ಎರಡನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ಡಾ. ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಶಿಕ್ಷಕರ ದಿನವನ್ನಾಗಿ ದೇಶದೆಲ್ಲೆಡೆ ಆಚರಿಸಲಾಗುತ್ತಿದೆ ಎಂದು ಸಂಗಮ ಸಂಸ್ಥೆಯ ನಿರ್ದೇಶಕ ಫಾದರ್ ಸಂತೋಷ್ ಹೇಳಿದರು.

ಪಟ್ಟಣದ ಸಂಗಮ ಸಂಸ್ಥೆಯಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣ ಜಯಂತಿ ಹಾಗೂ ಸಂತ ಮಧರ್ ತೆರೆಸಾ ಸ್ಮರಣಾರ್ಥ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದಿ ಫಿಲಾಸಫಿ ಆಫ್ ಉಪನಿಷದ್, ಪೂರ್ವ ಮತ್ತು ಪಶ್ಚಿಮ ಕೆಲವು ಪ್ರತಿಫಲಕಗಳು ಮತ್ತು ಪೂರ್ವ ಧರ್ಮ ಮತ್ತು ಪಾಶ್ಚಿಮಾತ್ಯ ಚಿಂತನೆ ಅವರ ಕೆಲವು ಪ್ರಸಿದ್ಧ ಕೃತಿಗಳಾಗಿವೆ. ಮದರ್ ತೆರೆಸಾ ಒಬ್ಬ ಮಹಾ ಮಾನವತಾವಾದಿಯಾಗಿ ಬಡವರ, ನಿರ್ಗತಿಕರ, ರೋಗಿಗಳ, ಅನಾಥರ ಹಾಗೂ ವೃದ್ದರ ಪರವಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ಇವರಿಗೆ ವಿಶ್ವದ ಅತ್ಯುನ್ನತ ನಾಗರಿಕ ಗೌರವವಾದ ನೊಬೆಲ್ ಶಾಂತಿ ಪ್ರಶಸ್ತಿ ಹಾಗೂ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕ ಆಸ್ಪತ್ರೆಯ ಎ.ಜೆ.ಎಮ್.ಎಸ್ ಸಿಎಸ್ಸಿ ಆಗಿರುವ ಶ್ರೀಯುತ ಹರಳಯ್ಯರವರು ಮಾತನಾಡಿ, ಸಂಕಷ್ಟದಲ್ಲಿ ಇರುವ ಮಕ್ಕಳನ್ನು ಹಾಗೂ ಸಮುದಾಯದಿಂದ ಅನ್ಯಾಯಕ್ಕೆ ಒಳಪಟ್ಟ ಮಕ್ಕಳನ್ನು ಗುರುತಿಸಿ ಅವರಿಗೆ ಆಸರೆ ಆಗಿ ನಿಲ್ಲುವುದು ಸಂಗಮ ಸಂಸ್ಥೆ, ಈ ಸಂಸ್ಥೆಯು ಅನಾಥ ಮಕ್ಕಳಿಗೆ ಮತ್ತು ನಿರ್ಗತಿಕ ಮಕ್ಕಳಿಗೆ ಶಿಕ್ಷಣ ಕೊಡುವಲ್ಲಿ ಕೂಡಾ ತುಂಬಾ ಮಹತ್ವಪೂರ್ಣ ಕಾರ್ಯವನ್ನು ಮಾಡುತ್ತದೆ ಎಂದರು.

- Advertisement -

ಆರೋಗ್ಯ ಇಲಾಖೆಯ ಆಪ್ತ ಸಮಾಲೋಚಕರಾಗಿ ಕಾರ್ಯನಿರ್ವಹಿಸುತ್ತಿರುವ ಮಲ್ಲೇಶಪ್ಪ ಸಾಗರ್ ಮಾತನಾಡಿ, ವಿಶ್ವದ ಪುಟದಲ್ಲಿ ದಾಖಲೆಯನ್ನು ಸೃಷ್ಠಿಸುವ ಹಾಗೂ ವಿಜ್ಞಾನಿಗಳು, ವೈದ್ಯರು, ಸೈನಿಕರು, ವಿಶ್ವದ ನಾಯಕರು, ಇಂಜಿಯರಗಳನ್ನು ಸೃಷ್ಟಿಸುವ ಕಾರ್ಯ ಮಡುತ್ತಿರುವ ನಮ್ಮ ಶಿಕ್ಷಕರು. ತಮ್ಮ ಜನ್ಮ ದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಣೆ ಮಾಡಿ ಎಂದು ತಿಳಿಸಿಕೊಟ್ಟಿರುವ ಡಾ|| ಸರ್ವಪಲ್ಲಿ ರಾಧಾಕೃಷ್ಣನ್‍ರವರಿಗೆ ಜನ್ಮ ದಿನದ ಶುಭಾಶಯಗಳು. ನಮ್ಮ ಸಿಂದಗಿ ಸರಕಾರಿ ಆಸ್ಪತ್ರೆಗೆ ಬರುವ ರೋಗಿಗಳು ತಮಗೆ ಅನಾರೋಗ್ಯ ಎಂದು ಕಂಡಕೂಡಲೇ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ ಇದರಿಂದ ಶೀಘ್ರ ಗುಣಮುಖರಾಗಲು ಸಾಧ್ಯ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ನ್ಯೂಟ್ರೀಷನ್ ಕಿಟ್‍ಗಳು ಹಾಗೂ ಪೌಷ್ಠಿಕ ಆಹಾರದ ಕಿಟ್ ಗಳನ್ನು ವಿತರಣೆ ಮಾಡಲಾಯಿತು. ಸಂತ ಜೋಸೆಫ್ ವಿಶ್ವ ವಿದ್ಯಾಲಯದ ವಿದ್ಯಾರ್ಥಿಯಾದ ಕುಮಾರಿ ಮದನಾರವರು ಮೊಬೈಲ್ ಆಟಗಳಿಂದ ಮಕ್ಕಳ ಮೇಲಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿದರು.  ಸಂಗಮ ಸಂಸ್ಥೆಯ ಸಂಯೋಜಕರಾದ ವಿಜಯ ಬಂಟನೂರ ನಿರೂಪಿಸಿದರು, ಮಲಕಪ್ಪ ಹಲಗಿ ಸ್ವಾಗತಿದರು ಹಾಗೂ ಬಸವರಾಜ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group