- Advertisement -
ಘಟಪ್ರಭಾ: ಮೋಬೈಲ್ ಗೆ ಕರೆನ್ಸಿ ಹಾಕಿಸಿಕೊಂಡು ಬರುವುದಾಗಿ ಹೋದ ವ್ಯಕ್ತಿಯೊಬ್ಬ ಕಾಣೆಯಾಗಿರುವ ಬಗ್ಗೆ ಆತನ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ.
ಸಮೀಪದ ಮಲ್ಲಾಪೂರ (ಪಿ ಜಿ) ಗ್ರಾಮದ, ೩೪ ವರ್ಷ ವಯಸ್ಸಿನ ಮಾರುತಿ ಲಕ್ಷ್ಮಣ ನಾಗರಮುನ್ನೊಳ್ಳಿ ( ತಳ್ಳ್ಯಾಗೋಳ) ದಿ. ೧೯ ರಂದು ಬಡಿಗವಾಡ ಗ್ರಾಮಕ್ಕೆ ಹೋಗಿ ಮೋಬೈಲ್ ಗೆ ಕರೆನ್ಸಿ ಹಾಕಿಸಿಕೊಂಡು ಬರುವುದಾಗಿ ಹೋದವನು ಇನ್ನೂ ಬಂದಿಲ್ಲ. ತನ್ನ ಸಹೋದರನನ್ನು ಹುಡುಕಿ ಕೊಡಬೇಕೆಂದು ಕಾಣೆಯಾದವನ ಸಹೋದರ ಹಾಲಪ್ಪ ಲಕ್ಷ್ಮಣ ನಾಗರಮುನ್ನೊಳ್ಳಿ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.