spot_img
spot_img

ದಿ. 24 ರಂದು ಸ್ವರ-ಸಾಹಿತ್ಯ-ಸಂಗಮ

Must Read

spot_img
- Advertisement -

ಭಾವಮಂಗಳ” ಧ್ವನಿ ತಟ್ಟೆ ಲೋಕಾರ್ಪಣೆ

ಬೆಳಗಾವಿ: ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ ರಚಿಸಿದ ಭಕ್ತಿ ಗೀತೆ, ನಾಡ ಗೀತೆ, ಜಾನಪದ ಗೀತೆ ಮತ್ತು ಭಾವ ಗೀತೆಗಳನ್ನೊಳಗೊಂಡ ಸುಮಾರು 20 ಹಾಡುಗಳ “ಭಾವಮಂಗಳ” ಧ್ವನಿತಟ್ಟೆ ದಿ.24 ರಂದು ಸಂಜೆ 4 ಗಂಟೆಗೆ ನಗರದ ನೆಹರೂ ನಗರದಲ್ಲಿನ ಕನ್ನಡ ಭವನದಲ್ಲಿ ಆಯೋಜಿಸಲಾದ ಭವ್ಯ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳ್ಳಲಿದೆ. 

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಬೆಳಗಾವಿ ಕಾರಂಜಿಮಠದ ಶ್ರೀ.ಮ.ನಿ.ಪ್ರ ಗುರುಸಿದ್ಧ ಮಹಾಸ್ವಾಮಿಗಳು ವಹಿಸಲಿದ್ದಾರೆ. ಮಾಜಿ ರಾಜ್ಯಸಭಾ ಸದಸ್ಯ ಮತ್ತು ಕೆ.ಎಲ್.ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ “ಸ್ವರ-ಸಾಹಿತ್ಯ-ಸಂಗಮ”  ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.      

- Advertisement -

ಅಪರಾಧ ವಿಭಾಗದ ಡಿ.ಸಿ.ಪಿ ಪಿ.ವಿ.ಸ್ನೇಹಾ,  ಕೆ.ಎಲ್.ಇ ನಿರ್ದೇಶಕ ಶ್ರೀಶೈಲ ಮೆಟಗುಡ್ಡ ಮತ್ತು ಬೆಳಗಾವಿ ರಾಣಿ ಚೆನ್ನಮ್ಮಾ ಮಹಿಳಾ ಸಹಕಾರಿ ಬ್ಯಾಂಕ್ ಅಧ್ಯಕ್ಷೆ ಶ್ರೀಮತಿ ಆಶಾ ಕೋರೆ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. 

ಧ್ವನಿ ತಟ್ಟೆ ಸಂಗೀತ ನಿರ್ದೇಶಕ, ಗಾಯಕ ಶಿಕ್ಷಕ ಕುಮಾರ ಕಡೇಮನಿ, ಕೆ.ಎಲ್.ಇ ಸಂಗೀತ ಮಹಾವಿದ್ಯಾಲಯದ ಅಧ್ಯಾಪಕ ಯಾದವೇಂದ್ರ ಪೂಜಾರಿ, ಡಿ.ಜೆ. ಸಮರ್ಥ,  ಕೆ.ಎಲ್.ಇ ಸಂಗೀತ ಮಹಾವಿದ್ಯಾಲಯದ ಅಧ್ಯಾಪಕಿ ಡಾ. ಸುನೀತಾ ಪಾಟೀಲ ಗಾನ ಸಂಗೀತ ಸಂಯೋಜಿಸಲಿದ್ದಾರೆ. 

ಅರುಣ ಶಿರಗಾಪುರ, ಮುರಗೇಶ ಶಿವಪೂಜಿ, ರಾಹುಲ ಮಂಡೋಲ್ಕರ, ಬಾಳನಗೌಡ ದೊಡ್ಡಬಂಗಿ, ಶಾಂತಾರಾಮ ಎಂಟೆತ್ತಿನವರ, ಲಕ್ಮೀ ಪಾಟೀಲ, ಶ್ರೀಮತಿ ಪ್ರತಿಭಾ ಕಳ್ಳಿಮಠ, ಡಾ. ಹೇಮಾ ಪಾಟೀಲ, ಶ್ರೀಮತಿ ಸ್ವಾತಿ ಹುದ್ದಾರ, ಶ್ರೀಮತಿ ನಂದಿತಾ ಮಾಸ್ತಿಹೊಳಿಮಠ, ಶ್ರೀಮತಿ ಜ್ಯೋತಿ ಬಿರಾದಾರ, ಡಾ. ದರ್ಗಾ ನಾಡಕರ್ಣಿ, ಶ್ರೀಮತಿ ವಿದ್ಯಾ ಹೆಗಡೆ, ಶ್ರೀಮತಿ ಲೀನಾ ಕೋಳಿ, ಶ್ರೀಮತಿ ಶಿವಾಂಗಿ ಶರ್ಮಾ, ಶ್ರೀಮತಿ ಸ್ಮಿತಾ ಕುಲಕರ್ಣಿ, ಶ್ರೀಮತಿ ಸುಜಾತಾ ಕಲ್ಮೇಶ, ಶ್ರೀಮತಿ ಕಾಜಲ ಧಾಮನೇಕರ, ಶ್ರೀಮತಿ ರೂಪಾ ವಸ್ತ್ರದ, ಶ್ರೀಮತಿ ಜಯಶ್ರೀ ನಾಯಕ, ಶ್ರೀಮತಿ ಉಜ್ವಲಾ ದೇಶಪಾಂಡೆ, ಶ್ರೀಮತಿ ಅನುರೀಟಾ ಭಿಕಾಜಿ, ಶ್ರೀಮತಿ ಲಕ್ಮೀ ಮೂಗಡ್ಲಿಮಠ, ಶ್ರೀಮತಿ ಸವಿತಾ ಗುಡ್ಡೀನ, ಒಳಗೊಂಡಂತೆ ಅನೇಕ ಗಾಯಕ ಗಾಯಕಿಯರು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ ರಚಿಸಿದ ಭಕ್ತಿ ಗೀತೆ, ನಾಡ ಗೀತೆ, ಜಾನಪದ ಗೀತೆ ಮತ್ತು ಬಾವ ಗೀತೆಯನ್ನೊಳಗೊಂಡ ವಿಭಿನ್ನ ಹಾಡುಗಳನ್ನು ಹಾಡಲಿದ್ದಾರೆ.   

- Advertisement -

ಕಾರ್ಯಕ್ರಮಕ್ಕೆ ಸರ್ವರಿಗೂ ಪ್ರವೇಶ ಉಚಿತವಿದ್ದು ಸಾಹಿತ್ಯ ಸಂಗೀತ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಬೆಳಗಾವಿ ಜಿಲ್ಲಾ ಕಸಾಪ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ ಪ್ರಕಟಣೆಯಲ್ಲಿ ಕೋರಿದ್ದಾರೆ.


ಮಾಹಿತಿ ವರದಿ:

ಆಕಾಶ್ ಅರವಿಂದ ಥಬಾಜ

ಜಿಲ್ಲಾ ಸಹ ಮಾಧ್ಯಮ ಪ್ರತಿನಿಧಿ, 

ಕನ್ನಡ ಸಾಹಿತ್ಯ ಪರಿಷತ್, ಬೆಳಗಾವಿ ಜಿಲ್ಲೆ, 

ಬೆಳಗಾವಿ

9448634208

9035419700

- Advertisement -
- Advertisement -

Latest News

ಎಸ್ ಎಂ ಕೃಷ್ಣ ನಿಧನಕ್ಕೆ ಕಡಾಡಿ ಸಂತಾಪ

ಮೂಡಲಗಿ:ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು, ರಾಜ್ಯಪಾಲರೂ ಸೇರಿದಂತೆ ಅನೇಕ ಉನ್ನತ ಹುದ್ದೆಗಳಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ರಾಜ್ಯಕ್ಕೆ ಹಾಗೂ ದೇಶಕ್ಕೆ ತಮ್ಮದೇ ಆದ ಅಪಾರ...
- Advertisement -

More Articles Like This

- Advertisement -
close
error: Content is protected !!
Join WhatsApp Group