- Advertisement -
ಕಂಡೂ ಕಾಣದ
ಜೀವ ಜಾಲದೊಳು
ಮರೆತ ನೋವ ಪುಟಗಳು
- Advertisement -
ಮಾಸುವ ಮುನ್ನ ನನ್ನ ನಲ್ಲೆ
ಪರಿಚಯದ ಪರಿಯದು
ಮರೆತ ನೋವುಗಳ
- Advertisement -
ಚಿಗುರೊಡೆದು ಪ್ರೀತಿ
ಮೂಡಿ ಹೊಸ ಸೆಲೆಯ ಚಿಗುರು
ಹೇಳಿ ತಿಳಿಯದ ಸ್ಪರ್ಶ ಕೇಳಿ ತಿಳಿಯದೆ ನೀಡಿ ಬದುಕಿನ
ಸೆಳೆತಕೆ ನೀಡಿಹ ಪ್ರೀತಿಯ
ಸಂಜೀವನದ ಸ್ಪರ್ಶ
ನಿಶ್ಯಬ್ದ ಮೌನದೊಳು
ಏನೋ ಹೊಸ ಬಯಕೆ
ಮತ್ತೆ ಚಿಗುರೊಡೆದ ಪ್ರೇಮ
ನೋವುಗಳ ನಲಿವು ನೀಡಿದ ಸ್ಪರ್ಶ
ನಿನ್ನ ಎದೆಯಾಳದಿ
ಮಲಗಿ ನನ್ನೆಲ್ಲ ಬಯಕೆಗಳ
ಹೇಳಿ ಕಾಣಬೇಕೆಂಬ
ಆಲಿಂಗನದಿ ಮೈಮರೆಸುವ ಸ್ಪರ್ಶ
ಹಸಿವು ಮರೆತು ಪ್ರೀತಿಯ
ಅಲೆಯೊಳು ತೇಲುವ ಸ್ಪರ್ಶ
ನನ್ನೆಲ್ಲ ನೋವುಗಳ ಮರೆತು
ಮಲಗುವ ಜೀವ ಸ್ಪರ್ಶ
ರಂಜನೆಯ ಕತೆಯಲ್ಲ
ನೈಜತೆ ಹೊಂದಿರುವ ನಿಜ ಜೀವನದ ಬದುಕಿನ ಹೊಸ ನೋಟದ
ಕನಸು ನನಸಾಗುವ ಸ್ಪರ್ಶ
ನಿಶ್ಶಬ್ದ ನಿಶ್ಶಬ್ದ ಮೌನವಲ್ಲ !
ಆಗಾಗ ಮಾತನಾಡಿ ಭಾವ
ಹಂಚುವ ಮಾತುಗಳು ಮೂಡಿ
ಜೀವದೇಹದೊಳೆಗೆಲ್ಲ ಹೊಸತನ ಕಾಣುವ ಸ್ಪರ್ಶ
ಏನೇನೋ ಕನಸುಗಳ
ಹೊಸ ನೋಟ ಹೊಸ ಹೊಳಹು
ಮೂಡಿ ಬದುಕ ಚೇತನ
ಚಿಲುಮೆಯಾಗಬಹುದಾದ ಜೀವ ಸ್ಪರ್ಶ
ವೈ. ಬಿ. ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮುನವಳ್ಳಿ-೫೯೧೧೧೭
ಸ್ಪರ್ಶ ಸುಖದ ಮುಂದೆ ನೈಜ ಆಗಲಿ