ಬೆಂಗಳೂರು: ದಕ್ಷಿಣ ಬೆಂಗಳೂರಿನ ಒಂದು ಪ್ರಮುಖ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರ ಶ್ರೀ ಜಯರಾಮ ಸೇವಾ ಮಂಡಳಿಯು “ತೇರಾ ಕೋಟಿ ಶ್ರೀರಾಮನಾಮ ಲೇಖನ ಯಜ್ಞ”ವನ್ನು ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಶಂಕರ ಭಾರತೀ ಮಹಾಸ್ವಾಮಿಗಳ ಮಹಾಸಂರಕ್ಷಣೆ, ದಿವ್ಯ ಮಾರ್ಗದರ್ಶನ ಹಾಗೂ ಆಶೀರ್ವಾದಗಳೊಂದಿಗೆ 2022-2024ರಲ್ಲಿ 17 ತಿಂಗಳ ಕಾಲ ಹಮ್ಮಿಕೊಂಡಿದ್ದು, ಈ ಯಜ್ಞದಲ್ಲಿ 13 ಕೋಟಿ ರಾಮನಾಮಗಳಿರುವ ಪುಸ್ತಕಗಳನ್ನು ಮಂದಿರದಲ್ಲಿ ನಿರ್ಮಾಣಗೊಂಡಿರುವ ಹೊಸ ಸ್ತೂಪದ ಅಡಿಯಲ್ಲಿ ಮುಡಿಪಾಗಿಡಲಾಗಿದೆ. 17ನೇ ಮಾರ್ಚ್ 2024 ರಂದು ಲೇಖನ ಯಜ್ಞದ ಸಮಾರೋಪ ಸಮಾರಂಭ ಆಯೋಜಿಸಲಾಗಿತ್ತು.
ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಶಂಕರ ಭಾರತೀ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಿವೃತ್ತ ನ್ಯಾಯಮೂರ್ತಿ ಎನ್. ಕುಮಾರ್ , ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದ ಸಮಾರಂಭದ ಅಧ್ಯಕ್ಷತೆಯನ್ನು ಜಯರಾಮ ಸೇವಾ ಮಂಡಳಿಯ ಗೌ .ಅಧ್ಯಕ್ಷ ಆರ್.ಎನ್.ಸ್ವಾಮಿ ವಹಿಸಿದ್ದರು.
ಅಂದು mಬೆಳಿಗ್ಗೆ ಶ್ರೀ ರಾಮ ತಾರಕ ಹೋಮನಡೆದು ಶ್ರೀ ರಾಮ ಸ್ತೂಪದ ಆವರಣ-ಪ್ರಾಕಾರೋತ್ಸವ ರಥದ ಸಮರ್ಪಣೆ ಆಯಿತು. ವೇದಾಂತ ಭಾರತಿ ಸದಸ್ಯರಿಂದ ಸಾಮೂಹಿಕ ಶ್ರೀ ರಾಮಭುಜಂಜ ಪ್ರಯಾತ, ಶಿವ ಪಂಚಾಕ್ಷರ ನಕ್ಷತ್ರಮಾಲಾ, ಶ್ರೀ ಲಕ್ಷ್ಮೀನೃಸಿಂಹ ಕರಾವಲಂಬ ಮತ್ತು ಕಲ್ಯಾಣವೃಷ್ಟಿಸ್ತವಃ ಸ್ತೋತ್ರಗಳ ಪಾರಾಯಣ ನಂತರ ಶ್ರೀಮದ್ರಾಮಾಯಣ ಚಿತ್ರಮಂಜರಿ – ಶ್ರೀ ಮೋಹನದಾಸ್ ಮಾರತ್ ರಚಿಸಿದ, ಶ್ರೀ ಮನೋಜ್ ಟಿ ಎಂ ಅವರು ಬಣ್ಣ ತುಂಬಿರುವ ಸುಂದರವಾದ 120 ಮನೋಜ್ಞ ಚಿತ್ರಗಳ ಸಹಿತ ವಾಲ್ಮೀಕಿ ರಾಮಾಯಣವನ್ನು ಶ್ರೀ ಸುಬ್ಬರಾವ್ ಅವರು ಇಂಗ್ಲಿಷ್ ಭಾಷೆಯಲ್ಲಿ,ಪ್ರೊ. ಶ್ರೀಮತಿ ಗಾಯತ್ರಿ ಮೂರ್ತಿ ಅವರು ಕನ್ನಡಲ್ಲಿ ಮತ್ತು ವಿದುಷಿ ಸುಮಿತ್ರ ಸತೀಶ್ ಅವರು ಸಂಸ್ಕೃತದಲ್ಲಿ ಬರೆದ ಕಥನದೊಂದಿಗೆ ಮೂರು ಪುಸ್ತಕಗಳು. ಸಂಪೂರ್ಣ ವಾಲ್ಮೀಕಿ ರಾಮಾಯಣ ಮತ್ತು ರಾಮಾಯಣದ ಮಹಾಪುರುಷರು-ಕನ್ನಡ ಸಾಹಿತ್ಯದ ಖ್ಯಾತ ಲೇಖಕ ಕೀರ್ತಿಶೇಷ ಶ್ರೀ ದೇವುಡು ನರಸಿಂಹ ಶಾಸ್ತ್ರಿ ಅವರು ಬರೆದ ವಾಲ್ಮೀಕಿ ರಾಮಾಯಣದ ಗದ್ಯ ರೂಪ ಮತ್ತು ರಾಮಾಯಣದ ಕೆಲವು ಮಹನೀಯರ ವಿಷಯ ಸಂಕಲನ, ಹರಿದಾಸರು ಹಾಡಿರುವ ಶ್ರೀರಾಮನ ಕನ್ನಡ ಕೀರ್ತನೆಗಳು -ಪುರಂದರದಾಸರು, ಕನಕದಾಸರು, ಹೆಳವನಕಟ್ಟೆ ಗಿರಿಯಮ್ಮ ಮತ್ತು ಇತರ ಅನೇಕ ಹರಿದಾಸರು ಶ್ರೀರಾಮನ ಮೇಲೆ ರಚಿಸಿರುವ ಸುಮಾರು 500 ಕೀರ್ತನೆಗಳು ಸಂಗ್ರಹಿಸಿದವರು ಪ್ರೊ. ಶ್ರೀ ಜಿ ಅಶ್ವತ್ಥನಾರಾಯಣ.ವಾಲ್ಮೀಕಿ ರಾಮಾಯಣದ ಅಂತರಾರ್ಥಗಳು -ಶ್ರೀ ಎಸ್ ಆರ್ ಕೃಷ್ಣಮೂರ್ತಿ ಅವರ ವಿಮರ್ಶಾತ್ಮಕ ಗ್ರಂಥ. ಪುಸ್ತಕಗಳು ಲೋಕಾರ್ಪಣೆ ಮಾಡಿ ಅನುಗ್ರಹ ಸಂದೇಶ ನೀಡಿದ ಶ್ರೀಗಳು ರಾಮತಾರಕ ಮಂತ್ರ ಅಥವಾ “ಶ್ರೀರಾಮ ಜಯ ರಾಮ ಜಯಜಯ ರಾಮ” ಎನ್ನುವ ಹದಿಮೂರು ಅಕ್ಷರಗಳ ರಾಮಜಪ ಜಪಗಳಲೆಲ್ಲಾ ಅತಿ ಮಹತ್ವವಾದದ್ದು. ಈ ದಿವ್ಯ ಮಂತ್ರವನ್ನು ಬರೆಯುವುದರಿಂದ ಸರ್ವ ಪುರುಷಾರ್ಥ ಬಯಕೆಗಳು ಸಿದ್ಧಿಸುವುದು ಎಂದು ತಿಳಿಸಿದರು.
ಆರಂಭದಿಂದಲೂ ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ಮಂಡಳಿ ನಿರಂತರವಾಗಿ ನಡೆಸುತ್ತಾ ಬಂದಿದೆ. ಸಾವಿರಾರು ಭಕ್ತರು ಶ್ರೀ ರಾಮನಾಮ ಲೇಖನದಲ್ಲಿ ಪಾಲ್ಗೊಂಡು ಕೃತಾರ್ಥರಾಗಿ ಶ್ರೀರಾಮನ ಕೃಪೆಗೆ ಪಾತ್ರರಾಗಿದ್ದಾರೆ.ನಮ್ಮ ದೇಶವು ರಾಮರಾಜ್ಯವಾಗಬೇಕು,ಶ್ರೀ ಜಯರಾಮ ಸೇವಾ ಮಂಡಳಿಯಲ್ಲಿರುವ ಶ್ರೀರಾಮ ದೇವರ ದೇವಸ್ಥಾನ ಶಕ್ತಿಯುತವಾದ ಶ್ರದ್ಧಾ ಕೇಂದ್ರವಾಗಬೇಕು ಎಂಬ ಸಂಕಲ್ಪದೊಂದಿಗೆ: 50 ಸಾವಿರಕ್ಕೂ ಹೆಚ್ಚು ಭಕ್ತರಿಂದ ಶ್ರೀರಾಮನಾಮ ಲೇಖನ,ವಿದ್ವಾಂಸರಿಂದ ಶ್ರೀರಾಮಾವತಾರ ಸಂಬಂಧಿತ ಉಪನ್ಯಾಸಗಳು, ಶ್ರೀರಾಮಾವತಾರ ಸಂಬಂಧಿತ ಪುಸ್ತಕಗಳ ಪ್ರಕಟಣೆ,ಮಕ್ಕಳಿಗೆ ಶ್ರೀರಾಮಾವತಾರ ಸಂಬಂಧಿತ ಕೌಶಲ ಸಂಸ್ಕೃತ ಸ್ಪರ್ಧೆಗಳು,ಶ್ರೀ ರಾಮಭುಜಂಗ, ಶ್ರೀರುದ್ರ, ಸೌಂದರ್ಯಲಹರಿ, ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ, ಹನುಮಾನ್ ಚಾಲೀಸಾ ಸ್ತೋತ್ರಗಳ ಸಾಮೂಹಿಕ ಪಾರಾಯಣ ಈ ಚಟುವಟಿಕೆಗಳು ನಡೆದಿವೆ. ಎಂದು ಶ್ರೀ ಜಯರಾಮ ಸೇವಾ ಮಂಡಲಿಯ ಗೌ ಕಾರ್ಯದರ್ಶಿ ಎಸ್.ಕೆ.ಗೋಪಾಲಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.