ಬೀದರ – ಕೇಂದ್ರ ಸರ್ಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಇತರೆ ಎಂಟು ಸಂಘಟನೆಗಳನ್ನು ನಿಷೇಧಿಸಿದ ಬೆನ್ನಲ್ಲೇ ಬೀದರ ಪೊಲೀಸರು ಸಂಘಟನೆಗೆ ಸಂಬಂಧಿಸಿದವರ ಮೇಲೆ ಮುಗಿ ಬಿದ್ದಿದ್ದಾರೆ.
ಪಿಎಫ್ ಐ ಅಧ್ಯಕ್ಷ ಅಬ್ದುಲ್ ಕರೀಮ್ ನ ಹುಮನಾಬಾದ್ ಪಟ್ಡಣದ ನೂರ್ಖಾನಾ ಅಖಾಡಾ ದಲ್ಲಿರುವ ಮನೆ ಹಾಗೂ ಕಂಪ್ಯೂಟರ್ ಇನ್ ಸ್ಟ್ಯೂಟ್ ಕಚೇರಿ ಮೇಲೆ, ಎಸ್ ಡಿಪಿಐ ಕಾರ್ಯದರ್ಶಿ ಶೇಖ್ ಮಕ್ಸೂದ್ ಮನೆ ಸೇರಿದಂತೆ ಹುಮನಾಬಾದ್ ಪಟ್ಟಣದ ನಾಲ್ಕು ಕಡೆ ಪೊಲೀಸರು ದಾಳಿ ನಡೆಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಬಾಬು ಮಾರ್ಗದರ್ಶನ ದಲ್ಲಿ ದಾಳಿ ಮಾಡಿರುವ ಪೊಲೀಸ್ ಅಧಿಕಾರಿಗಳು.ದಾಳಿಯಲ್ಲಿ ಜಿಲ್ಲೆಯ ವಿವಿಧ ವೃತ್ತಗಳ ಸಿಪಿಐ ಪಿಎಸ್ ಐ ಹಾಗೂ ಹಲವು ಠಾಣೆಗಳ ಪೇದೆಗಳು ಭಾಗಿಯಾಗಿದ್ದರು.
ವರದಿ: ನಂದಕುಮಾರ ಕರಂಜೆ, ಬೀದರ