spot_img
spot_img

ಬ್ರಿಮ್ಸ್ ಆಸ್ಪತ್ರೆ ಒಳಗೆ ನಾಯಿ ಮಲ ಮೂತ್ರ ವಿಸರ್ಜನೆ !

Must Read

- Advertisement -

ಬೀದರ್ ಜಿಲ್ಲೆಯ ಅತಿ ದೊಡ್ಡ ಆಸ್ಪತ್ರೆ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಜಿಲ್ಲಾಸ್ಪತ್ರೆ ಬ್ರಿಮ್ಸ್ ಅಸ್ಪತ್ರೆಯೋ ಹಾಳು ಬಿದ್ದ ಸಾರ್ವಜನಿಕ ಕಟ್ಟಡವೋ ಎಂಬ ಸಂಶಯ ಹುಟ್ಟಿಸುವಂತಿದೆ.

ವೈದ್ಯಕೀಯ ಶಿಕ್ಷಣ ಸಚಿವರು ನೋಡಲೇಬೇಕಾದ ಈ ಸ್ಟೋರಿ ಇದು…

- Advertisement -

ಬೀದರ ನಗರದ ಪ್ರತಿಷ್ಠಿತ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಶ್ವಾನಗಳಿಂದ ಸ್ವಾಗತ ಸಿಗುತ್ತದೆ. ರಾತ್ರಿ ಹತ್ತು ಗಂಟೆ ಆದರೆ ಸಾಕು ಶ್ವಾನಗಳು ಆಸ್ಪತ್ರೆಯಲ್ಲಿ ಬಂದು ಮಲಮೂತ್ರ ವಿಸರ್ಜನೆ ಮಾಡುತ್ತವೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ  ಸ್ವಚ್ಛತೆಯೇ ಇಲ್ಲದೇ ಇರುವುದರಿಂದ ರೋಗಿಗಳ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ.

ಇದನ್ನೆಲ್ಲ ನೋಡಿದರೆ ಅಧಿಕಾರಿಗಳು, ಸ್ವಚ್ಛತಾ ಕರ್ಮಿಗಳು ಇಲ್ಲಿ ಏನು ಮಾಡುತ್ತಾರೆ ಎಂಬ ಪ್ರಶ್ನೆ ಏಳುತ್ತದೆ. ಆಸ್ಪತ್ರೆಯ ಒಳಾಂಗಣದಲ್ಲಿ ಬಂದು ಶ್ವಾನಗಳು ಮಲಮೂತ್ರ ವಿಸರ್ಜನೆ ಮಾಡುತ್ತಿದ್ದರೆ ಸೆಕ್ಯೂರಿಟಿ ಗಾರ್ಡ್ಗಳು ಎಲ್ಲಿದ್ದಾರೆ ಎಂಬ ಪ್ರಶ್ನೆ ಕೂಡ ಏಳುತ್ತದೆ.

- Advertisement -

ಸರ್ವರಿಗೆ ಆರೋಗ್ಯ ನೀಡಬೇಕಾದ ಆಸ್ಪತ್ರೆಯೇ ಈ ರೀತಿಯಲ್ಲಿ ಬಿಡಾಡಿ ನಾಯಿಗಳಿಗೆ ಆಶ್ರಯ ತಾಣವಾಗಿ ಅಸ್ವಚ್ಛತೆಯ ತಾಣವಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಬ್ರಿಮ್ಸ್ ಆಸ್ಪತ್ರೆ ಕಡೆಗೆ ಗಮನ ಹರಿಸುತ್ತಾರಾ ಕಾದು ನೋಡಬೇಕಾಗಿದೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಪೌರಕಾರ್ಮಿಕರ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಸಮುದಾಯ ಸಹಕರಿಸಲಿ- ಬಾಲಚಂದ್ರ ಜಾಬಶೆಟ್ಟಿ.

ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯಲ್ಲಿ ಪರಿಸರ ಸ್ನೇಹಿ ತಂತ್ರಜ್ಞಾನಗಳ ಅಳವಡಿಕೆ ಕುರಿತ ಉಪನ್ಯಾಸ   ಧಾರವಾಡ- ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮಂಟಪದ ವಿಶೇಶ ಉಪನ್ಯಾಸ...
- Advertisement -

More Articles Like This

- Advertisement -
close
error: Content is protected !!
Join WhatsApp Group