ವಿದ್ಯುನ್ಮಾನ ತಂತ್ರಜ್ಞಾನದ ಆವಿಷ್ಕಾರ ‘ಸ್ಮಾರ್ಟ್ ನೋಡ್ ‘ ಇದೀಗ ಬೆಳಗಾವಿ ಗೆ

Must Read

ಜೀವನಶೈಲಿ ಸರಳಗೊಳಿಸಲು ಉತ್ತಮ ಆಯ್ಕೆ- ಸದಾಶಿವ ದೇವರಮನಿ.

ನಾಗಾಲೋಟದಲ್ಲಿ ಓಡುತ್ತಿರುವ ತಂತ್ರಜ್ಞಾನ ಮತ್ತು ಜಂಜಾಟಮಯ ಜೀವನದಲ್ಲಿ ನಮ್ಮ ಜೀವನವನ್ನು ಇನ್ನಷ್ಟು ಸರಳ ಮತ್ತು ಸುಲಭಗೊಳಿಸಲು ಮತ್ತು ವಿದ್ಯುತ್ ಪೋಲು, ವಿದ್ಯುತ್ ಅಪಘಾತ, ಕಳ್ಳತನ, ದರೋಡೆ ಮುಂತಾದ ಘಟನೆಗಳಿಂದ ತಪ್ಪಿಸಿಕೊಳ್ಳಲು ಮನೆ, ಆಫೀಸು, ಶಾಲೆ, ಕಚೇರಿಗಳು, ಕಾರ್ಖಾನೆಗಳು ಎಲ್ಲಕಡೆ ಅಳವಡಿಸಲಾಗಿರುವ ವಿದ್ಯುತ್ ಉಪಕರಣಗಳು, ಡೋರ್ ಲಾಕ್, ಗೇಟ್ ಲಾಕ್ ಗಳನ್ನು, ನೀರೆತ್ತುವ ಪಂಪ್ ಸೆಟ್ ಗಳನ್ನು ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಕೇವಲ ಆಪ್ ಬಳಸಿ ಅದನ್ನು ನಿಯಂತ್ರಣ ಮಾಡುವ ಹೊಸ ವಿಧಾನ ಬಂದಿದೆ.

‘ಸ್ಮಾರ್ಟ್ ನೋಡ್’ ಎನ್ನುವ  ತಂತಿ ಸಂಪರ್ಕವಿಲ್ಲದೆ ಸ್ವಯಂ ಚಾಲಿತವಾಗಿ ನಡೆಯುವ ಹೊಸ ತಂತ್ರಜ್ಞಾನವನ್ನು ಬೆಳಗಾವಿ ಮಹಾನಗರದ ಜನತೆಗೆ  ತಿಳಿಸಲು ಉದ್ಘಾಟನಾ ಸಮಾರಂಭ ಮಂಗಳವಾರ ದಿ.26 ರಂದು ಬೆಳಗಾವಿಯ ಯುಕೆ 27 ಹೋಟೆಲ್ ನಲ್ಲಿ ನಡೆಯಿತು.

ಬೆಳಗಾವಿ ಮಾರುಕಟ್ಟೆ ವಿಭಾಗದ ಕಂಪನಿಯ ಮುಖ್ಯಸ್ಥ ಯುವ ಉದ್ಯಮಿ ಸೌರಭ ದೇವರಮನಿ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಹೈದರಾಬಾದ, ಅಹ್ಮದಾಬಾದ, ದೆಹಲಿ ಸೇರಿದಂತೆ ವಿವಿಧ ಮಹಾನಗರಗಳಲ್ಲಿ ‘ಸ್ಮಾರ್ಟ್ ನೋಡ್ ‘ ಕಂಪನಿಯ ಉಪಕರಣಗಳು ಕಾರ್ಯನಿರ್ವಹಿಸುತ್ತಿವೆ. ಇದು ಯಾವುದೇ ತಂತಿಗಳಿಲ್ಲದೆ ಕೇವಲ ಒಂದು ವಿಶೇಷ ಉಪಕರಣ ಕೂಡ್ರಿಸುವುದರ ಮೂಲಕ ಗೃಹ,ಕಚೇರಿ, ಕಾರ್ಖಾನೆ, ಆಸ್ಪತ್ರೆ, ಶಾಲೆ, ಕಂಪನಿಗಳು ಬಳಸುವ ಎಲ್ಲಾ ತರಹದ ವಿದ್ಯುತ್ ಉಪಕರಣಗಳನ್ನು ಈ ವಿಶೇಷ ಆಪ್ ಮೂಲಕ  ನಿಯಂತ್ರಣ ಮಾಡಬಹುದು.

ಇದರಿಂದ ಅನವಶ್ಯಕ ವಿದ್ಯುತ್ ಪೋಲಾಗುವುದು ತಪ್ಪುವುದರ ಜೊತೆಗೆ, ಬಾಗಿಲು, ಕಿಟಕಿ ಗೇಟ್ ಗಳು ಮುಂತಾದ ಸುರಕ್ಷತೆಗಾಗಿ ಬಳಸುವ ವಸ್ತುಗಳನ್ನು ನಿಶ್ಚಿಂತೆಯಿಂದ ಯಾವಾಗ ಬೇಕಾದಾಗ ನಿಯಂತ್ರಿಸಬಹುದು ಎಂದು ಪ್ರಾತ್ಯಕ್ಷಿಕೆ ಮಾಡುವುದರ ಮೂಲಕ ವಿವಿಧ ಉಪಕರಣಗಳನ್ನು ಪರಿಚಯಿಸಿದರು. ಇದೇ ಸಂದರ್ಭದಲ್ಲಿ ಉತ್ಕೃಷ್ಟ ಗುಣಮಟ್ಟದ ‘ನೋರಿಸಿಸ್ ‘ಕಂಪನಿಯ ವಿವಿಧ ಸ್ವಿಚ್ ಗಳು, ವಿದ್ಯುತ್ ಮಂಡಲದ ಎಲ್ಲಾ ರೀತಿಯ ಉಪಕರಣಗಳನ್ನು ತೋರಿಸಿ ನೋರಿಸಿಸ್ ಕಂಪನಿಯ ಕುರಿತಾದ ಉಪಕರಣಗಳ ವಿಶೇಷ ಮಾಹಿತಿ ನೀಡಿದರು.      

ಕಾರ್ಯಕ್ರಮದಲ್ಲಿ ಕರ್ನಾಟಕ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಾಗರಾಜನ್, ಮತ್ತು ಕುಲದೀಪ್ ಹಂಗರಗೇಕರ  ಯಾವ ರೀತಿ ಸ್ಮಾರ್ಟ್ ನೋಡ್ ನ ಉಪಕರಣಗಳು ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ವಿವಿಧ ರಾಜ್ಯಗಳಲ್ಲಿನ ಬಳಕೆದಾರರ ನೇರ ಸಂಪರ್ಕ ಪಡೆದು ಅವುಗಳನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ  ಹೆಸರಾಂತ ಅರ್ಕಿಟೆಕ್ಟ್, ಸಿವಿಲ್,ಡಿಸೈನ್ ಇಂಜಿನಿಯರರಾದ ಸಿದ್ದಾರ್ಥ ಪಾಟೀಲ, ಚಂದನ ನಂದಿ, ವಿನಾಯಕ ಪಾವಸೆ, ಅಶ್ವಿನಕುಮಾರ ಕಲಮನಿ, ಪರವೇಜ್ ಸಯ್ಯದ ಸೇರಿದಂತೆ ಹಲವಾರು ಅಭಿಯಂತರರು ಭಾಗಿಯಾಗಿದ್ದರು.     

ಕಾರ್ಯಕ್ರಮದ ಆರಂಭದಲ್ಲಿ ಸಮಾಜ ಸೇವಕರು ಮತ್ತು ಉದ್ದಿಮೆದಾರರು ಮತ್ತು ಬೆಳಗಾವಿಯ ಪ್ರೊಟೆಕ್ಟೋ ಮಾರ್ಕೆಟಿಂಗ್ ಸರ್ವಿಸಸ್ ನ  ಮುಖ್ಯಸ್ಥರು ಆಗಿರುವ ಸದಾಶಿವ ದೇವರಮನಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

Latest News

ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.

ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...

More Articles Like This

error: Content is protected !!
Join WhatsApp Group