ಕಲ್ಲೋಳಿ : ಪಟ್ಟಣದ ಶ್ರೀ ರಾಮಲಿಂಗೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್.ಎಸ್.ಎಸ್. ಹಾಗೂ ವಿವಿಧ ವೇದಿಕೆಗಳ ಆಶ್ರಯದಲ್ಲಿ 68ನೇ ಕನ್ನಡ ರಾಜ್ಯೋತ್ಸವವನ್ನು ಬುಧವಾರ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ಸುರೇಶ ಹನಗಂಡಿ, ಕನ್ನಡ ಭಾಷೆಗೆ 2000 ವರ್ಷಗಳ ಸುದೀರ್ಘ ಇತಿಹಾಸವಿದೆ. ಇಂತಹ ಪ್ರಾಚೀನ ಭಾಷೆಯಾದ ಕನ್ನಡವನ್ನು ಉಳಿಸಿ ಬೆಳೆಸಲು ಕನ್ನಡ ಮನಸ್ಸುಗಳ ಅವಶ್ಯಕತೆ ಇದೆ. ರಾಜ್ಯೋತ್ಸವಕ್ಕೆ ಮಾತ್ರ ಸಿಮೀತವಾಗದ ಕನ್ನಡ ಭಾಷೆ ಸದಾ ನಮ್ಮ ಜೀವನದುದ್ದಕ್ಕೂ ಬಳಸಿ ಬೆಳೆಸುವ ಭಾಷೆಯಾಗಬೇಕು. ನಮ್ಮ ಭಾಷೆಯ ಬಗ್ಗೆ ನಮಗೆ ಹೆಮ್ಮೆಯಿರಲಿ. ಕನ್ನಡ ನಾಡು, ನುಡಿ, ಪರಂಪರೆ, ಸಂಸ್ಕೃತಿಯನ್ನು ಎಂದೆದಿಂಗೂ ಮರೆಯದಿರೋಣ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಡಾ. ಕೆ.ಎಸ್.ಪರವ್ವಗೋಳ ಮಾತನಾಡಿ, ಸಂಸ್ಕೃತ ಭಾಷೆ ಹೊರತುಪಡಿಸಿದರೆ ಪ್ರಾಚೀನ ಕಾಲದ ಅತಿ ಶ್ರೀಮಂತ ಭಾಷೆ ಎಂದರೆ ಅದು ಕನ್ನಡ. ತನ್ನದೇ ಆದ ಸ್ವತಂತ್ರ ಭಾಷೆ ಮತ್ತು ಲಿಪಿಯನ್ನು ಒಳಗೊಂಡಿದೆ ಈ ಕನ್ನಡ ಇತರೆ ಭಾಷೆಗಳಿಗೆ ಗೌರವ ನೀಡೋಣ ಕನ್ನಡ ಭಾಷೆಗೆ ಅಭಿಮಾನ ವ್ಯಕ್ತಪಡಿಸೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಎಂ.ಬು.ಕುಲಮೂರ, ಡಿ.ಎಸ್.ಹುಗ್ಗಿ, ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಶಂಕರ ನಿಂಗನೂರ, ಬಿ.ಕೆ.ಸೊಂಟನವರ, ವಿಲಾಸ ಕೆಳಗಡೆ, ವಸುಂಧರಾ ಕಾಳೆ, ರಾಜಶ್ರೀ ತೋಟಗಿ, ಭೀಮಪ್ಪ ಮಾಳಿ, ಆರ್.ಎಸ್.ಪಂಡಿತ, ಸಂತೋಷ ಜೋಡಕುರಳಿ, ಸಂತೋಷ ಬಂಡಿ, ಎಂ.ಬಿ. ಜಾಲಗಾರ, ಗ್ರಂಥಪಾಲಕ ಬಿ.ಬಿ.ವಾಲಿ, ಸಹಾಯಕ ಗ್ರಂಥಪಾಲಕ ರಘುನಾಥ ಮೇತ್ರಿ, ಕಛೇರಿ ಸಿಬ್ಬಂದಿಗಳಾದ ಬಿ.ಎಂ.ಶೀಗಿಹಳ್ಳಿ, ನಿರಂಜನ ಪಾಟೀಲ, ಮಂಜುನಾಥ ಗೊರಗುದ್ದಿ, ಮಹೇಶ ಹೊಸಮನಿ ಮುಂತಾದವರು ಉಪಸ್ಥಿತರಿದ್ದರು.