spot_img
spot_img

ಮುನವಳ್ಳಿ ಜೈಂಟ್ಸ್ ಗ್ರುಪ್ ನವರಿಂದ ವಿಶಿಷ್ಟ ಮಕ್ಕಳ ದಿನಾಚರಣೆ

Must Read

- Advertisement -

ಮುನವಳ್ಳಿಯ ಪ್ರಸಿದ್ದ ಐತಿಹಾಸಿಕ ಸ್ಥಳ ಶ್ರೀ ಪಂಚಲಿಂಗೇಶ್ವರ ದೇವಾಲಯ. ಈ ದೇವಾಲಯದ ಆವರಣದಲ್ಲಿ ಬುಧವಾರ ಮಕ್ಕಳ ಕಲರವ ಜೋರಾಗಿತ್ತು. ಅಲ್ಲಿ ವಿವಿಧ ಶಾಲೆಗಳಿಂದ ಆಗಮಿಸಿದ್ದ ಶಿಕ್ಷಕರು ಶಿಕ್ಷಕಿಯರು ಮಕ್ಕಳು ಒಂದೆಡೆ ತಮ್ಮ ತಮ್ಮ ಶಾಲೆಗಳ ಮಕ್ಕಳ ನೃತ್ಯದ ತಯಾರಿಯ ವೇಷಭೂಷಣದಲ್ಲಿ ತೊಡಗಿದ್ದರೆ ಮತ್ತೊಂದೆಡೆ ಬಸವ ಸೇನೆ ಅಧ್ಯಕ್ಷರು ಹಾಗೂ ಜೈಂಟ್ಸ ಗ್ರುಪ್‌ನ ಹಿರಿಯರಾದ ಉಮೇಶ ಬಾಳಿ ಮತ್ತು  ಜೈಂಟ್ಸ ಗ್ರುಪ್ ಅಧ್ಯಕ್ಷ ಶಿವಾಜಿ ಮಾನೆ ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳನ್ನು ಸ್ವಾಗತಿಸಲು ದೇವಾಲಯದ ಮಹಾದ್ವಾರದಲ್ಲಿ ಆಸೀನರಾಗಿದ್ದರು. ಮುನವಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ಮುಖ್ಯ ಶಿಕ್ಷಕ ಭವಾನಿ ಖೊಂದುನಾಯ್ಕ ಹಾಗೂ ಬಾಳು ಹೊಸಮನಿ ಈ ಕಾರ್ಯಕ್ರಮದ ತಯಾರಿಯಲ್ಲಿ ತೊಡಗಿದ್ದರು. ಈ ವೇಳೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸವದತ್ತಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡೀನ ಆಗಮನವಾಯಿತು.ಅವರ ಮೆಚ್ಚಿನ ವಿದ್ಯಾರ್ಥಿ ಹಾಗೂ ಶಿಕ್ಷಕ ತಂಗೋಜಿ ಅವರನ್ನು ಕರೆದುಕೊಂಡು ಬಂದಾಗ ಪಂಚಲಿಂಗೇಶ್ವರ ದೇವರ ದರ್ಶನಕ್ಕೆ ಜೊತೆಯಾದವರು ಸಮನ್ವಯ ಶಿಕ್ಷಣ ಶಿಕ್ಷಕ ವೈ.ಬಿ.ಕಡಕೋಳ. ದೇವರ ದರ್ಶನ ಇತಿಹಾಸದ ಪರಿಚಯದೊಡನೆ ಮುಖ್ಯ ವೇದಿಕೆಗೆ ಆಗಮಿಸುವಷ್ಟರಲ್ಲಿ ಸವದತ್ತಿ ತಾಲೂಕಿನ ಶಾಸಕರಾದ ವಿಶ್ವಾಸ ವೈದ್ಯ ಅವರ ಸಹೋದರ ಅಶ್ವತ್ಥ ವೈದ್ಯ ಅಗಮಿಸಿದರು. ಒಂದು ಕಡೆ ಭಾರತ ನ್ಯೂಜಿಲೆಂಡ ಕ್ರಿಕೆಟ್ ಹಣಾಹಣಿ ಮುಂಬೈದಲ್ಲಿ ಜರುಗಿದ್ದರೆ ತಮ್ಮ ಮಕ್ಕಳ ಸಮೂಹ ನೃತ್ಯ ನೋಡಲು ಹಾಗೂ ಆಯಾ ಶಾಲೆಗಳ ಶಿಕ್ಷಕ ಶಿಕ್ಷಕಿಯರು ಮಕ್ಕಳೊಡನೆ ಈ ಸಭಾಂಗಣದಲ್ಲಿ ನೆರೆದಿದ್ದರು.

ಸಮಯಕ್ಕೆ ಸರಿಯಾಗಿ ಜೈಂಟ್ಸ ಗ್ರುಪ್ ನ ಪ್ರಾರ್ಥನೆಯೊಂದಿಗೆ ಈ ಕಾರ್ಯಕ್ರಮ ಪ್ರಾರಂಭಗೊಂಡಿತು.ಜೈಂಟ್ಸ ಗ್ರುಪ್ ನ ಅಧ್ಯಕ್ಷರಾಗಿರುವ ಯುವ ನ್ಯಾಯವಾದಿ ಶಿವಾಜಿ ಮಾನೆಯವರ ಬಗ್ಗೆ ಎರಡು ಮಾತು ಈ ಸಂದರ್ಭದಲ್ಲಿ ಹೇಳಲೇಬೇಕು. ಇವರು ಅಧ್ಯಕ್ಷರಾದ ನಂತರ ವೈವಿಧ್ಯಮಯ ಕಾರ್ಯಕ್ರಮಗಳನ್ನು ಜೈಂಟ್ಸ ಗ್ರುಪ್ ಮೂಲಕ ಮಾಡುತ್ತಿರುವರು.ಇವರು ಈ ಹಿಂದೆ ಮರಾಠ ಕೋ ಅಪ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕರಾಗಿ ಸೇವೆಗೈಯ್ದಿರುವರು. ತಮ್ಮ ನ್ಯಾಯವಾದಿಗಳ ಸವದತ್ತಿ ಬಾರ್ ಅಸೋಸಿಯೇನ್ ಹಿಂದಿನ ಕಾರ್ಯದರ್ಶಿಯಾಗಿ ಕೂಡ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರುವರು. ಇವರ ವೈಶಿಷ್ಟ್ಯತೆಯೆಂದರೆ ಎಲ್ಲರನ್ನು ಸಂಘಟನೆಯಲ್ಲಿ ತೊಡಗಿಸಿಕೊಂಡು ಕಾರ್ಯಕ್ರಮ ಮಾಡುವುದು. ಕಾರ್ಯಕ್ರಮಕ್ಕಿಂತ ಮೊದಲು ಹಿರಿಯರಿಗೆ ಹಲವು ಮುಖ್ಯಸ್ಥರಿಗೆ ಕರೆ ಮಾಡಿ ಅವರಿಗೆ ನೀಡಿರುವ ಜವಾಬ್ದಾರಿ ನೆನಪಿಸುವ ಜೊತೆಗೆ ಬೇಗ ಬನ್ನಿರಿ ಎಂದು ಕರೆಯುವುದು.ಈ ಸ್ವಭಾವದ ಮೂಲಕ ಎಲ್ಲರ ನೆಚ್ಚಿನ ಅಧ್ಯಕ್ಷರಾಗಿ ಗಮನಸೆಳೆಯುತ್ತಿರುವರು.

- Advertisement -

ಇತ್ತೀಚೆಗೆ ಧಾರವಾಡದ ದತ್ತಿದಾನಿ ಲೂಸಿ ಸಾಲ್ಡಾನಾ ಗುರು ಮಾತೆ ಯ ಹೆಸರಿನಲ್ಲಿ ನೀಡುವ ಶಿಕ್ಷಕ ರತ್ನ ರಾಜ್ಯ ಪ್ರಶಸ್ತಿ ಗೆ ಭಾಜನರಾದ ದೈಹಿಕ ಶಿಕ್ಷಕ ಭವಾನಿ ಖೊಂದುನಾಯ್ಕ ವೇದಿಕೆಗೆ ಗಣ್ಯರನ್ನು ಆಹ್ವಾನಿಸಿದರು. ಅಶ್ವತ್ಥ ವೈದ್ಯ. ಮೋಹನ ದಂಡಿನ.ಉಮೇಶ ಬಾಳಿ.ಮಧುಮತಿ ಕಲಾಲ.ಎಸ್.ಎಸ್.ಮಾನೆ. ಉಮೇಶ ಬಾಳಿ. ಅನೀಲ ಕಿತ್ತೂರ.ರಾಷ್ಟ್ರೀಯ ಹಿರಿಯರ ಕ್ರೀಢಾಕೂಟದಲ್ಲಿ ಚಿನ್ನದ ಪದಕ ವಿಜೇತೆ ಮುನವಳ್ಳಿ ಪಕ್ಕದ ಕಲ್ಲೋಳಿಯ ಅಜ್ಜಿ ಗಂಗಮ್ಮ ಮಲ್ಲಪ್ಪ ಬೆಳಗಾವಿ. ಗದಗ ಜಿಲ್ಲೆಯ ಕೋಳಿವಾಡದ ವಾಯ್ಸ ಆಪ್ ಗದಗನ ಪ್ರತಿಭಾನ್ವಿತ ಬಾಲ ಗಾಯಕಿ ಕಾವೇರಿ ಕರಿಗಾರ ಅಶೋಕ ಪಟ್ಟಣಶೆಟ್ಟಿ.ಭುಜಂಗ್ ರಾವ್ ನಿಕ್ಕಂ.ನಿರ್ಮಲಾ ಗದ್ವಾಲ್ ಸೇರಿದಂತೆ ಜೈಂಟ್ಸ ಗ್ರುಪ್ ಮತ್ತು ಜೈಂಟ್ಸ ಗ್ರುಪ್ ಆಪ್ ರಾಣಿ ಚನ್ನಮ್ಮ ಸಹೇಲಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವೇದಿಕೆಯ ಎದುರಿನಲ್ಲಿ ಬಹುಮಾನಗಳ ಪ್ರಾಯೋಜಕರಾದ ಮಲ್ಲಿಕಾರ್ಜುನ ಓಂಕಾರಿ.ತಾಸೇದ ಪೆಟ್ರೋಲಿಯಂನ ಸಂಚಾಲಕರು.ಯಲ್ಲಪ್ಪ ಪೂಜೇರ.ನಿಖಿಲ್ ಉಮೇಶ ಬಾಳಿ.ಶಿವಕುಮಾರ ಕರೀಕಟ್ಟಿ.ಬಡೆಮ್ಮಿ ಸಹೋದರರು. ಸೇರಿದಂತೆ ಜೈಂಟ್ಸ ಗ್ರುಪ್ ನ ವೈದ್ಯರಾದ ಡಿ.ಎಸ್.ಅಷ್ಟಗಿಮಠ.ಅಪ್ಪು ಅಮಠೆ.ಬಿ.ಎಂ.ಅಂಗಡಿ.ಶಿವಾನಂದ ಬಡೆಮ್ಮಿ.ಅರುಣಗೌಡ.ಪಾಟೀಲ. ಶೀವೂ ಕಾಟೆ.ಅರ್ಜುನ ಕಲಾಲ.ಆರ್.ಜಿ.ಗಂಗನ್ನವರ.ಎಂ.ಆರ್.ಬೇವಿನಗಿಡದ.ಮಹಾಂತೇಶ ಬೆಲ್ಲದ.ಮೋಹನ ಸರ್ವಿ,ಉದಯ ಶೆಟ್ಟಿ. ವೈ.ಬಿ.ಕಡಕೋಳ.ವೀರಣ್ಣ ಕೊಳಕಿ.ವಿರಾಜ ಕೊಳಕಿ.ವಾಯ್.ಪಿ.ರಾಮಜಾರ್.ಬವರ್ ಮೇವಾಡ.ಸಂತೋಷ ಹಂಜಿ ಸೂರ್ಯಪ್ರಕಾಶ ಗಂಗಾವತಿ. ಸೇರಿದಂತೆ ಮಹಿಳಾ ಘಟಕದ ಪದಾಧಿಕಾರಿಗಳಾದ ಅನ್ನಪೂರ್ಣ ಲಂಬೂನವರ.ಗೌರಿ ಜೇವೂರ.ರಾಜೇಶ್ವರಿ.ಬಾಳಿ.ಸುರೇಖಾ ಗೋಪಶೆಟ್ಟಿ. ಅನುರಾಧ ಬೆಟಗೇರಿ.ಪದ್ಮಾವತಿ.ಪಾಟೀಲ.ಸವಿತಾ ಹಂಜಿ.ರಾಧಾ ಕುಲಕರ್ಣಿ.ಸೇರಿದಂತೆ ಜೈಂಟ್ಸ ಹಾಗೂ ರಾಣಿ ಚನ್ನಮ್ಮ ಗ್ರುಪ್ ನ ಸದಸ್ಯರು ಉಪಸ್ಥಿತರಿದ್ದರು.

ಸಸಿಗೆ ನೀರುಣಿಸುವ ಮೂಲಕ ಅಶ್ವತ್ಥ ವೈದ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಮೇಶ ಬಾಳಿ ಪ್ರಾಸ್ತಾವಿಕವಾಗಿ ಮಾತನಾಡಿ “ಜೈಂಟ್ಸ ಸಂಸ್ಥೆ ಬೆಳೆದು ಬಂದ ಬಗೆಯನ್ನು ತಿಳಿಸಿದರು”. ನಂತರ ಉದ್ಘಾಟಕರಾದ ಅಶ್ವತ್ಥ ವೈದ್ಯ ಮಾತನಾಡಿ “ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವ ಜೈಂಟ್ಸ ಸಂಸ್ಥೆ ಮಕ್ಕಳ ದಿನಾಚರಣೆ ಅಂಗವಾಗಿ ಬಾಲ ಪ್ರತಿಭೆಯ ಸನ್ಮಾನ ಹಾಗೂ ಹಿರಿಯ ಅಜ್ಜಿಯ ಸನ್ಮಾನ ಮಾಡುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಕ್ಕೆ ಮುಂದಿನ ದಿನಗಳಲ್ಲಿ ತಾವೂ ಕೂಡ ಸಹಾಯ ಸಹಕಾರ ನೀಡುವುದಾಗಿ” ತಿಳಿಸಿದರು.

- Advertisement -

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ ಮಾತನಾಡಿ “ ಇಂದು ಪಾಲಕರು ಮತ್ತು ಮಕ್ಕಳು ಮೋಬೈಲ್ ಗೀಳು ಮತ್ತು ಟೀವಿ ನೋಡುವ ಗೀಳನ್ನು ಕಡಿಮೆ ಮಾಡುವ ಜೊತೆಗೆ ಮಕ್ಕಳಲ್ಲಿ ನೈತಿಕ ಚಟುವಟಿಕೆಗಳನ್ನು ಬಿಂಬಿಸಬೇಕು. ಇಂದು ಇಬ್ಬರು ಮಹನೀಯರ ಸನ್ಮಾನ ಮಾಡುವ ಜೊತೆಗೆ ನಾಡು ನುಡಿಯ ಕನ್ನಡ ಗೀತೆಗಳನ್ನು ಸ್ಥಳೀಯ ಶಾಲೆಗಳ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡು ಬಹುಮಾನ ನೀಡುತ್ತಿರುವುದು ಶ್ಲಾಘನೀಯ” ಎಂದರು.

ರಾಷ್ಟ್ರೀಯ ಹಿರಿಯರ ಕ್ರೀಢಾಕೂಟದಲ್ಲಿ ಚಿನ್ನದ ಪದಕ ವಿಜೇತೆ ಮುನವಳ್ಳಿ ಪಕ್ಕದ ಕಲ್ಲೋಳಿಯ ಅಜ್ಜಿ ಗಂಗಮ್ಮ ಮಲ್ಲಪ್ಪ ಬೆಳಗಾವಿ. ಗದಗ ಜಿಲ್ಲೆಯ ಕೋಳಿವಾಡದ ವಾಯ್ಸ ಆಪ್ ಗದಗನ ಪ್ರತಿಭಾನ್ವಿತ ಬಾಲ ಗಾಯಕಿ ಕಾವೇರಿ ಕರಿಗಾರ.ಅಶ್ವತ್ಥ ವೈದ್ಯ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗೌರವ ಸನ್ಮಾನ ಇದೇ ಸಂದರ್ಭದಲ್ಲಿ ಜರುಗಿತು.

    ಜೈಂಟ್ಸ ಅಧ್ಯಕ್ಷ ಶಿವಾಜಿ ಮಾನೆ ಮಾತನಾಡಿ “ ಜೈಂಟ್ಸ ಗ್ರುಪ್ ನ ಎಲ್ಲ ಹಿರಿಯರ ಸಹಕಾರದೊಂದಿಗೆ ತಾವು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು.ಇಂದು ಸನ್ಮಾನ ಗೊಳ್ಳುತ್ತಿರುವ ಅಜ್ಜಿಯನ್ನು ಅವರ ಮನೆಗೆ ಹೋಗಿ ಸನ್ಮಾನಿಸುವ ಕುರಿತು ತಿಳಿಸಿದಾಗ ಅವರಲ್ಲಿನ ಚೇತೋಹಾರಿ ಮಾತುಗಳು ನಮಗೆ ಸ್ಪೂರ್ತಿ ಎಂದು ಆ ನೆನಪು ಮಾಡಿಕೊಂಡು ಜೈಂಟ್ಸ ಗ್ರುಪ್ ನ ಎಲ್ಲ ಪದಾಧಿಕಾರಿಗಳ ಸಹಕಾರವನ್ನು ನೆನೆದರು.ಪ್ರದರ್ಶಾನಾರ್ಥವಾಗಿ ಸಾಯಿ ನಾಟ್ಯ ಅಕಾಡೆಮಿ. ನಾಟ್ಯಂ ಡಾನ್ಸ್ ತಂಡದವರಿಂದ ನೃತ್ಯ ಜರುಗುವ ಜೊತೆಗೆ ಪ್ರತಿಭಾನ್ವಿತ ಬಾಲ ಗಾಯಕಿ ಕಾವೇರಿ ಕರಿಗಾರ. ತನ್ನ ಕಂಚಿನ ಕಂಠದ ಮೂಲಕ ಕನ್ನಡ ನಾಡು ನುಡಿಯ ಗೀತೆಗಳನ್ನು ಹಾಡುವ ಮೂಲಕ ಕಾರ್ಯ ಕ್ರಮಕ್ಕೆ ಶೋಭೆ ತಂದರು. 

    ನಂತರ ಜರುಗಿದ್ದು ವಿವಿಧ ಶಾಲೆಗಳಿಂದ ಸಮೂಹ ನೃತ್ಯ ಗಾಯನ ಸ್ಥರ್ಧೆ ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪ್ರಾರ್ಥನಾ ಶಾಲೆ. ದ್ವಿತೀಯ ಸ್ಥಾನ ಎಂ. ಎಲ್. ಇ . ಎಸ್ ಆಂಗ್ಲ ಮಾಧ್ಯಮ ಶಾಲೆ. ತೃತೀಯ ಸ್ಥಾನ ಶ್ರೀ ರೇಣುಕಾ ಶುಗರ್ಸ ಪೌಂಡೇಶನ್ ಶಾಲೆಯವರು ಬಹುಮಾನ ಪಡೆದುಕೊಂಡರು. ಸಮಾಧಾನಕರ ಬಹುಮಾನವನ್ನು ಮುನವಳ್ಳಿ ಸರಕಾರಿ ಪ್ರಾಥಮಿಕ ಕನ್ನಡ ಮತ್ತು ಹೆಣ್ಣು ಮಕ್ಕಳ ಶಾಲೆಯವರು. ಗೌಡಪ್ಪಗೌಡ. ದ್ಯಾಮನಗೌಡರ ಶಾಲೆ. ವ್ಹಿ.ಪಿ.ಜೇವೂರ ಶ್ರವಣ ನ್ಯೂನತೆ ಶಾಲೆಯವರು. ನೂತನ ಪ್ರಾಥಮಿಕ ಶಾಲೆ. ಪ್ರೇರಣಾ ಪ್ರಾಥಮಿಕ ಶಾಲೆ ಯವರಿಗೆ ಸಮಾಧಾನಕರ ಬಹುಮಾನವನ್ನು ನೀಡಲಾಯಿತು

ಮುನವಳ್ಳಿಯಲ್ಲಿ ಜೈಂಟ್ಸ ಗ್ರುಪ್ ಬೆಳೆದು ಬಂದ ಹಾದಿ:

ಮುನವಳ್ಳಿಯಲ್ಲಿಂದು ಅನೇಕ ಸಂಘ-ಸಂಸ್ಥೆಗಳಿವೆ.ಮೊದಲಿನಿಂದಲೂ ಲಯನ್ಸ ಕ್ಲಬ್ ಅನೇಕ ಚಟುವಟಿಕೆಗಳನ್ನು ಮಾಡುತ್ತ ಬಂದಿತ್ತು.ನಂತರದ ವರ್ಷಗಳಲ್ಲಿ ಅಂತರಾಷ್ಟ್ರೀಯ ಸಂಸ್ಥೆಯೊಂದರ ಹೆಸರಿನಲ್ಲಿ ಎಲ್ಲ ರಂಗಗಳಲ್ಲಿ ಸೇವೆ ಸಲ್ಲಿಸಬೇಕು.ಸಮಾಜದ ಪ್ರತಿಯೊಬ್ಬರಿಗೂ ತಮ್ಮ ಸೇವೆಯ ಸೌಲಭ್ಯ ಸಿಗಬೇಕು ಎನ್ನುವ ಮಹದಾಸೆಯೊಂದಿಗೆ ಜೈಂಟ್ಸ್ ಗ್ರೂಪ್ ಆಫ್ ಮುನವಳ್ಳಿ ೨೩-೦೩-೨೦೦೬ ರಲ್ಲಿ ಸ್ಥಾಪನೆಗೊಂಡಿತು.        

ಸಹಕಾರಿ ಧುರೀಣ, ಸಾಮಾಜಿಕ, ಧಾರ್ಮಿಕ, ರಾಜಕೀಯ ಕಾರ್ಯಕ್ರಮಗಳ ಸಂಘಟಕರಾದ ಉಮೇಶ ಬಾಳಿ ಅವರ ನೇತೃತ್ವದಲ್ಲಿ ಸ್ಥಾಪನೆ ಗೊಂಡಿತು.

ಇದರ ಇನ್ನೊಂದು ಮಹತ್ವದ ಅಂಶವೆಂದರೆ ಪ್ರತಿ ವರ್ಷವೂ ಅಧ್ಯಕ್ಷತೆಯನ್ನು ಬದಲಾವಣೆಯ ಮಾಡುವ ಮೂಲಕ ಸರ್ವರಿಗೂ ಆ ಸ್ಥಾನ ಸಿಗುವಂತೆ ಮಾಡಿ ಎಲ್ಲರ ನೇತೃತ್ವದಲ್ಲಿ ಕಾರ್ಯ ಚಟುವಟಿಕೆಗಳು ನಡೆಯುವಂತೆ ಮಾಡುವುದು.ಹೀಗೆ ಅವರ ಚಟುವಟಿಕೆಗಳು ನಡೆಯುತ್ತ ಬಂದಿದ್ದು ಈ ಹಿಂದಿನ ವರ್ಷಗಳ ಹಿಂತಿರುಗಿ ನೋಡಿದಾಗ ಪ್ರತಿ ವರ್ಷ ಮಕ್ಕಳ ದಿನಾಚರಣೆಯಂದು ಮುನವಳ್ಳಿ ವ್ಯಾಪ್ತಿಯ ಎಲ್ಲ ಶಾಲೆಗಳ ವಿದ್ಯಾರ್ಥಿಗಳಿಗೆ ಸಮೂಹ ನೃತ್ಯ ಪ್ರದರ್ಶನ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ.ಶಿಕ್ಷಕ ದಿನಾಚರಣೆಯಂದು ಶಿಕ್ಷಕರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ವಿತರಣೆ, ಶಿಕ್ಷಕರಿಗೆ ವಿವಿಧ ಮನರಂಜನಾ ಸ್ಪರ್ಧೆಗಳನ್ನು ಏರ್ಪಡಿಸಿ ಶಿಕ್ಷಕರಿಗೆ ಸೂಕ್ತ ಗೌರವ ನೀಡಿರುವರು.

ರೋಗಿಗಳ ಸೇವೆಯೇ ದೇವರ ಸೇವೆ ಎಂದು ನಂಬಿ ತಮ್ಮನ್ನೇ ಸೇವಾ ಕ್ಷೇತ್ರಕ್ಕೆ ಅರ್ಪಿಸಿಕೊಂಡ ವೈದ್ಯರಿಗೆ ಕೃತಜ್ಞತೆಯಿಂದ ಗೌರವಪೂರ್ವಕವಾಗಿ ಸನ್ಮಾನಿಸಿರುವರು. ಪ್ರಜಾಪ್ರಭುತ್ವದಲ್ಲಿ ನಾಲ್ಕನೆಯ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಿಕಾ ರಂಗ ಹಾಗೂ ಅದರಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಿಕಾ ಬರಹಗಾರರಿಗೆ ಸತ್ಕಾರ ಅವರ ಕಾರ್ಯವನ್ನು ಸಮಾಜಕ್ಕೆ  ತಿಳಿಸಿಕೊಡುವ ಕಾರ್ಯ ಹಮ್ಮಿಕೊಂಡಿರುವರು.

ಭಾರತ ದೇಶ ಕೃಷಿ ಪ್ರಧಾನ ದೇಶ ಇಲ್ಲಿಯ ರೈತರಿಗೆ ಬೆಳೆ ಬೆಳೆಯುವ ಪದ್ಧತಿ, ಬೆಳೆಗಳ ನಿರ್ವಹಣೆ, ಕೀಟಗಳ ಹತೋಟಿ, ಮಣ್ಣಿನ ರಕ್ಷಣೆ, ನೀರಿನ ಸದ್ಬಳಕೆ, ವಿವಿಧ ಬೆಳೆಗಳ ಕ್ಷೇತ್ರೋತ್ಸವ, ಜಾನುವಾರುಗಳ ಆರೋಗ್ಯ ತಪಾಸಣೆ, ಉಚಿತ ಔಷಧಿ ವಿತರಣೆ, ಮೊದಲಾದವುಗಳ ಕುರಿತು ಸಮಗ್ರ ಮಾಹಿತಿ ನೀಡುವಲ್ಲಿ ಜೈಂಟ್ಸ್ ಗ್ರೂಪ್ ಶ್ರಮಿಸಿದೆ

ಮಳೆ ನೀರು ಕೊಯ್ಲು, ಶುದ್ಧ ಕುಡಿಯುವ ನೀರು, ಕುಡಿಯುವ ನೀರಿನ ಸದ್ಬಳಕೆ ಕುರಿತು ಸಾರ್ವಜನಿಕರಿಗೆ ಕರಪತ್ರಗಳ ಮೂಲಕ ಮಾಹಿತಿ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದೆ.

ಪರಿಸರ ರಕ್ಷಣೆಯಲ್ಲಿ ಜೈಂಟ್ಸ್ ಗ್ರೂಪ್ ಹಿಂದೆ ಬಿದ್ದಿಲ್ಲ ಮುನವಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ, ನಾನಾ ಶಾಲೆ ಕಾಲೇಜುಗಳಲ್ಲಿ ವನಮಹೋತ್ಸವ ಆಚರಣೆ ಮಾಡಿ ವಿವಿಧ ತರಹದ ಸಸಿಗಳನ್ನು ನೆಡಲಾಗಿದೆ.

ಮಹಿಳೆಯರು ಅಬಲೆಯರಲ್ಲ ಸಬಲರು ಅವರಿಂದ ಸಮಾಜಕ್ಕೆ. ದೇಶಕ್ಕೆ ಮಹತ್ತರ ಕೊಡುಗೆ ಸಲ್ಲಲಿ ಎನ್ನುವಸದುದ್ದೇಶದಿಂದ ಮಹಿಳೆಯರಿಗೆ ವಿವಿಧ ಕಾರ್ಯಕ್ರಮ, ವಿವಿಧ ರಂಗಗಳಲ್ಲಿ ಸಾಧನೆಗೈದ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 

ಇಂದಿನ ಮಗು ನಾಳಿನ ಪ್ರಜೆ ಎನ್ನುವಂತೆ ಚಿಕ್ಕ ಮಕ್ಕಳಿಗಾಗಿ ಆರೋಗ್ಯವಂತ ಶಿಶು ಸ್ಪರ್ಧೆ, ಮಕ್ಕಳ ಆರೋಗ್ಯ ತಪಾಸಣೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಆರೋಗ್ಯ ಕ್ಷೇತ್ರದಲ್ಲಿ ರಕ್ತದಾನ, ಎಲುಬು ಕೀಲು ತಪಾಸನೆ, ಮಧುಮೇಹ, ದಂತ ಚಿಕಿತ್ಸೆ, ಉಚಿತ ಔಷಧಿ ವಿತರಣೆ, ಮೊಣಕಾಲು ನೋವಿಗೆ ಆಯಸ್ಕಾಂತ ಚಿಕಿತ್ಸೆ, ಮೊದಲಾದ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವರು.

ಕಾರ್ಮಿಕ ದಿನಾಚರಣೆಯಂದು ಬಸ್ ನಿಲ್ದಾಣದಲ್ಲಿ ಹಮಾಲರಿಗೆ ಸನ್ಮಾನ, ಎ.ಪಿ.ಎಂ.ಸಿ. ಯಾರ್ಡನಲ್ಲಿ ಪ್ರತಿವರ್ಷ ಹಮಾಲರಿಗೆ ವಸ್ತ್ರದಾನ, ಮಹಿಳಾ ಕಾರ್ಮಿಕರಿಗೆ ಸನ್ಮಾನಿಸಿರುವರು. 

ಅಂಚೆ ದಿನದಂದು ಅಂಚೆಯನ್ನರಿಗೆ ಸನ್ಮಾನ ಮಾಡಿರುವರು.

ಧಾರ್ಮಿಕ ಕ್ಷೇತ್ರದಲ್ಲೂ ಜೈಂಟ್ಸ್ ಗ್ರೂಪ್ ಕಾರ್ಯ ನಿರ್ವಹಿಸಿದೆ. ಮುಸಲ್ಮಾನರ ಪವಿತ್ರ ಹಬ್ಬ ರಮಜಾನ್ ತಿಂಗಳಲ್ಲಿ ರೋಜಾ (ಉಪವಾಸ)ಮಾಡಿದವರಿಗಾಗಿ ಮಸೀದೆಗಳಿಗೆ ಹೋಗಿ ಖರ್ಜೂರ ವಿತರಣೆ.. ಶ್ರಾವಣ ಮಾಸದಲ್ಲಿ ಪುಣ್ಯಚರಿತ್ರಾ ಶ್ರವಣವಾಗಬೇಕೆಂದು ಅನುಭಾವಿಗಳಿಂದ ಧಾರ್ಮಿಕ ಪ್ರವಚನಹೆಣ್ಣು ಭ್ರೂಣ ಹತ್ಯೆ ತಡೆಯಲು ಪ್ರತ್ಯೇಕ ವಿಭಾಗ ಮಾಡಿಕೊಂಡು ಜಾಗೃತಿ ಕಾರ್ಯಕ್ರಮ.

ಹೀಗೆ 2006 ರಿಂದ ಇಲ್ಲಿಯವರೆಗೆ ಹತ್ತು ಹಲವು ರಚನಾತ್ಮಕ ಕಾರ್ಯಗಳಲ್ಲಿ ಜೈಂಟ್ಸ್ ಹಾಗೂ ರಾಣಿ ಚನ್ನಮ್ಮ ಸಂಘಟನೆ ತೊಡಗಿರುವುದು. ಜಿಲ್ಲೆಯಲ್ಲಿ ವಿಶೇಷ ಎಂದರೆ ಅತಿಶಯೋಕ್ತಿಯಲ್ಲ.

ಒಟ್ಟಾರೆ ಸಮಾಜದ ವಿವಿಧ ರಂಗಗಳನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಶ್ರಮವಹಿಸಿದ ಜನರಿಗೆ ಸನ್ಮಾನ ವಿವಿಧ ರಂಗದ ಪ್ರತಿಭೆಗಳ ಸನ್ಮಾನ ಕೆಳ.ಮಧ್ಯಮ ವರ್ಗದ ಜನರಿಗೆ ಸಹಾಯ ಇತ್ಯಾದಿ ಕಾರ್ಯ ಚಟುವಟಿಕೆಗಳನ್ನು ೨೦೦೬ ರಿಂದ ಇಲ್ಲಿಯವರೆಗೂ ಹಮ್ಮಿಕೊಂಡು ತನ್ನದೇ ಆದ ದಿಸೆಯಲ್ಲಿ ಮುನವಳ್ಳಿ ಜೈಂಟ್ಸ್ ಗ್ರೂಪ್ ತನ್ನ ಸೇವೆಯಲ್ಲಿ ತೊಡಗಿರುವುದು. ಇದರ ಎಲ್ಲ ಸದಸ್ಯರೂ ಸೇವಾ ಮನೋಭಾವವುಳ್ಳವರಾಗಿದ್ದು ರಚನಾತ್ಮಕ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಮುನವಳ್ಳಿ ಅಷ್ಟೇ ಅಲ್ಲ ಜಿಲ್ಲೆಯಾದ್ಯಂತ ಜೈಂಟ್ಸ್ ಗ್ರೂಪ್ ಹೆಸರನ್ನು ಖ್ಯಾತಿಗೊಳಿಸಿರುವರು.


ವೈ.ಬಿ.ಕಡಕೋಳ

- Advertisement -
- Advertisement -

Latest News

ಬೆಳಗಾವಿ ಜಿಲ್ಲೆಯ ಒಂದೇ ಮನೆಯ ಇಬ್ಬರು ಪಿ ಎಸ್ ಐ ಹುದ್ದೆಗೆ ಆಯ್ಕೆ

ಮೂಡಲಗಿ : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಇಟ್ನಾಳ ಗ್ರಾಮದ ಶಿವಾನಂದ ಬೆನ್ನಳ್ಳಿ ಮತ್ತು ಅವರ ಸಹೋದರನ ಮಗಳು ಶಿಲ್ಪಾ ಪ್ರವೀಣ ಬೆನ್ನಳ್ಳಿ ಇವರು ಪೋಲಿಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group