ಅನೈತಿಕ ಸಂಬಂಧಕ್ಕೆ ಗಂಡ ಬಲಿ ; ಪತಿಗೆ ದೌರ್ಭಾಗ್ಯವಾದ ಭಾಗ್ಯಶ್ರೀ

Must Read

ಬೀದರ – ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿಸಿದ ಭೀಕರ ಘಟನೆಯೊಂದು ಬೀದರನಲ್ಲಿ ನಡೆದಿದ್ದು ಈ ಸಲದ ದೀಪಾವಳಿ ಹಬ್ಬ ಭಯಾನಕವೆನ್ನಿಸಿದೆ.

ಅಂದು ರಾತ್ರಿ ಬೀದರ ಜಿಲ್ಲಾದ್ಯಂತ ಜನರು ದೀಪಾವಳಿ ಹಬ್ಬದ ಸಡಗರ ಸಂಭ್ರಮದಿಂದ ತಮ್ಮ ತಮ್ಮ ಅಂಗಡಿ ಯಲ್ಲಿ ಪೂಜಾ ಮಾಡುವವರಲ್ಲಿ ಬಿಜಿ ಇದ್ದರೆ ಇನ್ನೊಂದು ಕಡೆ ಜಿಲ್ಲೆಯ ಹುಮನಬಾದ ಪಟ್ಟಣದಲ್ಲಿರುವ ಟೀಚರ್ಸ್ ಕಾಲೋನಿಯಲ್ಲಿ ನಡೆದ ಭಯಂಕರ ಕೊಲೆಯೊಂದು ನಡೆದು ಹೋಗಿತ್ತು. ಪತ್ನಿಯ ಅನೈತಿಕ ಸಂಬಂಧಕ್ಕೆ ಗಂಡ ಬಲಿಯಾಗಿದ್ದ. 

ಸಂಕ್ಷಿಪ್ತ ಕ್ರೈಮ್ ಸ್ಟೋರಿ ಇಲ್ಲಿದೇ ನೋಡಿ:

 ಆ ಸುಂದರವಾದ ಕುಟುಂಬ ತನ್ನ ಕೆಲಸ ಆಯಿತು ತಾನಾಯಿತು ಎಂದು ಇಬ್ಬರು ಗಂಡ ಹೆಂಡತಿ ಖಾಸಗಿ ಫೈನಾನ್ಸ್ ಲೇವಾದೇವಿ ಸ್ವಸಹಾಯ ಗುಂಪುಗಳಿಗೆ ಸಾಲ ನೀಡುವ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತ ಇರುತ್ತಾರೆ.

ಹೆಂಡತಿ ಒಂದು ಖಾಸಗಿ ಸಂಸ್ಥೆ ಯಲ್ಲಿ ..ಗಂಡ ಇನ್ನೊಂದು ಖಾಸಗಿ ಸಂಸ್ಥೆ ಯಲ್ಲಿ ಕೆಲಸವನ್ನು ಮಾಡಿಕೊಂಡು ಇದ್ದಾಗ ಸುಖ ಸಂಸಾರ ದಲ್ಲಿ ಬಿರುಗಾಳಿ ಎಬ್ಬಿಸಿದ ವೀರೇಶ ಎಂಬ ಮೂಲತ ಭಾಲ್ಕಿ ತಾಲ್ಲೂಕಿನ ಕೊಟಗ್ಯಾಳ ಗ್ರಾಮದ ಯುವಕ ವಿಲನ್ ಆಗಿ ಬಂದಿದ್ದ.

ರೇವಣಸಿದ್ದಪ್ಪ ಮದುವೆ ಆಗಿ ಎರಡು ವರ್ಷ ಆಗಿದ್ದು  ಹುಮನಾಬಾದ ಪಟ್ಟಣದಲ್ಲಿ  ಹೆಂಡತಿ ಭಾಗ್ಯಶ್ರೀ ಜೊತೆ ಕೆಲಸ ಮಾಡಿಕೊಂಡು ಸುಖ ಜೀವನ ನಡೆಸುತ್ತಿದ್ದರು. ಸುಮಾರು ಒಂದು ವರ್ಷದಿಂದ ಹುಮಾನಾಬಾದ ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಈ ಇಬ್ಬರು ಗಂಡ ಹೆಂಡತಿ ಸುಖ ಸಂಸಾರದಲ್ಲಿ ದೀಪಾವಳಿ ಹಬ್ಬವೇ ಕರಾಳ ದಿನ ಆಗಿದ್ದು ಮಾತ್ರ ವಿಪರ್ಯಾಸ. ಈ ಮಧ್ಯೆ ರೇವಣಸಿದ್ದಪ್ಪನ ಧರ್ಮಪತ್ನಿ ಭಾಗ್ಯಶ್ರೀ ಜೊತೆ ಕೆಲಸ ಮಾಡುವ ವಿರೇಶನ ಜೊತೆ ಕದ್ದು ಮುಚ್ಚಾಲೆ ಆಟ ಆಡುವ ವಿಷಯ ತಿಳಿದುಬರುತ್ತದೆ. ಇನ್ನು ತಮ್ಮ ಅನೈತಿಕ ಸಂಬಂಧಕ್ಕೆ ಉಳಿಗಾಲ ಇಲ್ಲವೆಂದು ಅರಿತುಕೊಂಡ ಪ್ರೇಮಿಗಳಿಬ್ಬರೂ ಮನೆಯಲ್ಲಿಯೇ ಗಂಡನಿಗಾಗಿ ಸ್ಕೆಚ್ ಹಾಕಿದ್ದರು

ದೀಪಾವಳಿ ಹಬ್ಬದಲ್ಲಿ ಎಲ್ಲರೂ ಮನೆಯಲ್ಲಿ ದೀಪಾ ಅಲಂಕಾರ ಮಾಡಿ ಹಬ್ಬದ ಆಚರಣೆಯಲ್ಲಿ ತೊಡಗಿದ್ದರೆ ಭಾಗ್ಯಶ್ರೀ ಮಿಂಡನಿಗೆ ರಾತ್ರಿ ಮನೆಗೆ ಕರೆಸಿಕೊಂಡು ಗಂಡನಿಗೆ ಕುತ್ತಿಗೆಗೆ ಹಗ್ಗ ಹಾಕಿ ಯಮಲೋಕದ ದಾರಿ ಕಲ್ಪಿಸಿಕೊಟ್ಟರು. ಆತನನ್ನು ಆಸ್ಪತ್ರೆ ಗೆ ಒಯ್ಯುವ ನೆಪ ಮಾಡಿ ಬೈಕ್ ಮೇಲೆ ಹೊತ್ತೊಯ್ದು ಊರ ಹೊರಗಿನ ಸೇತುವೆ ಮೇಲೆ ಹೆಣ ಬಿಸಾಕಿ ಪರಾರಿಯಾಗಿದ್ದಾರೆ

ಈ ಇಬ್ಬರನ್ನೂ ಹಿಡಿಯಲು ಜಿಲ್ಲಾ ಪೊಲೀಸ್ ಇಲಾಖೆ ವಿಶೇಷ ತಂಡ ರಚಿಸಿದ್ದು ತನಿಖೆ ಬಿರುಸಿನಿಂದ ನಡೆಯುತ್ತಿದೆ.

ವರದಿ: ನಂದಕುಮಾರ ಕರಂಜೆ, ಬೀದರ

Latest News

ಸಾಮೂಹಿಕ ಪ್ರಾರ್ಥನೆ ವಚನ ವಿಶ್ಲೇಷಣೆ ಕಾರ್ಯಕ್ರಮ

ಬೆಳಗಾವಿ - ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶ ನಗರ ಲಿಂಗಾಯತ ಸಂಘಟನೆ ಬೆಳಗಾವಿಯಲ್ಲಿ ದಿನಾಂಕ.09.11.2025ರಂದು ಸಾಮೂಹಿಕ ಪ್ರಾರ್ಥನೆ ವಚನ ವಿಶ್ಲೇಷಣೆ,...

More Articles Like This

error: Content is protected !!
Join WhatsApp Group