spot_img
spot_img

ಶರಣರ ಚರಿತ್ರೆ ಆಲಿಸುವದರಿಂದ ಜೀವನ ಪಾವನ; ಹಂಗರಗಿ

Must Read

- Advertisement -

ಸಿಂದಗಿ: ಪುರಾಣ ಎಂಬುದು ಪುಂಡರಗೋಷ್ಠಿಯಲ್ಲ ಪುರಾಣ ಎಂದರೆ ಅಧ್ಯಾತ್ಮ ಶರಣರ ಬದುಕಿನ ಅರ್ಥ ತಿಳಿದುಕೊಂಡು ಅವರ ಹಾದಿಯಲ್ಲಿ ಸಾಗುವ ನಡೆ ಕಲಿಸುವ ಧರ್ಮದ ಪಾಠಶಾಲೆ ಇದ್ದಂತೆ ಅದಕ್ಕೆ ಶರಣರ ಸಂತರ ಸತ್ಪುರುಷರ ದಾರ್ಶನಿಕರ ಮಹಾತ್ಮರ ಚರಿತ್ರೆ ಆಲಿಸುವದರಿಂದ ಜೀವನ ಪಾವನವಾಗುವುದು ಎಂದು ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಎಂ.ಎಂ.ಹಂಗರಗಿ ಹೇಳಿದರು.

ತಾಲೂಕಿನ ಮೋರಟಗಿ ಗ್ರಾಮದಲ್ಲಿ ಸಿದ್ದರಾಮೇಶ್ವರ ಜಾತ್ರಾ ನಿಮಿತ್ಯ 14ದಿನಗಳ ಪರ್ಯಂತ ಹಮ್ಮಿಕೊಂಡ ಜಗದ್ಗುರು ರೇವಣಸಿದ್ಧೇಶ್ವರ ಹಾಗೂ ಸೊನ್ನಲಗಿ ಶಿವಯೋಗಿ ಸಿದ್ಧರಾಮೇಶ್ವರ ಪುರಾಣ ಮಂಗಲ ಹಾಗೂ ಧರ್ಮಸಭೆಯಲ್ಲಿ ಮಾತನಾಡಿ, ಅವಿಭಕ್ತ ಕುಟುಂಬಗಳು ಮರೆಯಾಗಿ ಚಿಕ್ಕ ಚಿಕ್ಕ ಸಂಸಾರಗಳು ಉದ್ಭವಾಗುತ್ತಿರುವುದು ಸಂಬಂಧಗಳ ಬೆಲೆ ತಿಳಿಸಿ ರಕ್ತ ಸಂಬಂಧಗಳ ಅರ್ಥ ಭೋದಿಸುವ ಪಾವನ ಸ್ಥಳಗಳು. ದೇವಾಲಯಗಳು ಅತ್ತೆ ಮಾವ ಮೈದುನ ಸಹೋದರ ಸಹೋದರಿ ಪತಿ ಪತ್ನಿಯರ ಅಂತರಂಗದ ತೊಳಲಾಟ ಹೋಗಲಾಡಿಸುವ ದಿವ್ಯ ಶಕ್ತಿ ಶರಣರ ಜೀವನ ಚರಿತ್ರೆಯಲ್ಲಿ ಇರುವುದು ಇಂತಹ ಅದ್ಭುತ ಶಕ್ತಿ ಶರಣರ ಜೀವನ ಚರಿತ್ರೆಯಲ್ಲಿ ಇದೆ. ಧರ್ಮದ ರಕ್ಷಣ ಹಿರಿಯರ ಸಂಪ್ರದಾಯ ನಮ್ಮ ಭಾರತೀಯ ಪರಂಪರೆ ಉಳಿಯಬೇಕಾದರೆ ಧರ್ಮದಿಂದ ನಡೆದು ಬದುಕಿನ ಮಹತ್ವ ಸಾರಿದ ಶರಣರ ಆದರ್ಶದ ಬದುಕು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಅದು ಸಾರ್ಥಕ ಬದುಕು ಆಗುವುದು.ಹುಟ್ಟು ಸಾವಿನ ಮಧ್ಯೆ ಸಾಧಕರಾಗಲು ಶರಣರು ಕಾಯಕ ಮಾಡುತ್ತ ಧರ್ಮ ಹಿಡಿದು ಅಧರ್ಮ ಹೋಗಲಾಡಿಸುವ ವಚನ ಸಾಹಿತ್ಯದ ಮೂಲಕ ಜನ ಜಾಗೃತಿ ಮೂಡಿಸಿ ಮಹಾತ್ಮರ ಚರಿತ್ರೆ ಅರಿಯಬೇಕು ಎಂದರು.

ಜಗದ್ಗುರು ರೇವಣಸಿದ್ಧೇಶ್ವರ ಹಾಗೂ ಸೊನ್ನಲಗಿ ಶಿವಯೋಗಿ ಸಿದ್ಧರಾಮೇಶ್ವರ ಪುರಾಣ ಮಂಗಲ ಹಾಗೂ ಧರ್ಮಸಭೆಗೆ ಓಂ ಪ್ರಸಾದ ತಿವಾರಿ ಚಾಲನೆ ನೀಡಿದರು.

- Advertisement -

ಜೇರಟಗಿ ಶ್ರೀಮಠದ ಶ್ರೀ ಮಹಾಂತ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು

ಪುರಾಣ ಪ್ರಚನಕಾರರಾದ ಹೂನಳ್ಳಿ ಗುರುಲಿಂಗಯ್ಯ ಸ್ವಾಮಿ, ನಿಂಗನಗೌಡ ಪಾಟೀಲ, ಚನ್ನಬಸಪ್ಪಗೌಡ ಪಾಟೀಲ, ಡಾ.ಆರ್.ಬಿ.ಕುಲಕರ್ಣಿ, ಶ್ರೀಶೈಲ ಕೋಣಶಿರಗಿ, ರೇವಣಸಿದ್ಧ ಮಸಳಿ, ತಾಪಂ ಮಾಜಿ ಸದಸ್ಯ ಪ್ರಕಾಶ ಅಡಗಲ್ಲ, ಅನೀಲಗೌಡ ಪಾಟೀಲ, ಮಲ್ಲಪ್ಪಗೌಡ ಕುಂಬಾರ, ಶರಣಗೌಡ ಮಾಲಿಪಾಟೀಲ, ಶಿವಗೊಂಡಪ್ಪ ಮಾಲಿಪಾಟೀಲ, ಪತ್ರಕರ್ತರ ಸಂಘದ ಅಧ್ಯಕ್ಷ ಪಂಡಿತ ಯಂಪೂರೆ, ಕಾಂಗ್ರೆಸ್ ಮುಖಂಡ ರಮೇಶ ನಡುವಿನಕೇರಿ, ಕುಪೇಂದ್ರ ಆಹೇರಿ ಭಾಗಣ್ಣ ವಾಲಿಕಾರ, ಆಕಾಶ ನಡುವಿನಕೇರಿ ಸೇರಿದಂತೆ ಹಲವರು ಇದ್ದರು.

ಪತ್ರಕರ್ತ ಈರಣ್ಣ ವಿಶ್ವಕರ್ಮ ಸ್ವಾಗತಿಸಿ ನಿರೂಪಿಸಿದರು. ಪತ್ರಕರ್ತ ವಿದ್ಯಾಧರ ಮಳಗಿ ವಂದಿಸಿದರು.

- Advertisement -
- Advertisement -

Latest News

ಕೃತಿ ಪರಿಚಯ

ಕೃತಿ ಪರಿಚಯ: ಬೈಲಹೊಂಗಲ ಸಾಂಸ್ಕೃತಿಕ ಪರಂಪರೆ ಲೇಖಕ : ಸಿ. ವೈ. ಮೆಣಸಿನಕಾಯಿ ಪ್ರಕಾಶಕರು: —ಶೀರಾಮ್ ಬುಕ್ ಸೆಂಟರ್ ಮಂಡ್ಯ “ಬೈಲಹೊಂಗಲ ನಾಡ ಚಂದ, ಗಂಗಾಳ ಮಾಟ ಚಂದ ಗಂಗೆಯ...
- Advertisement -

More Articles Like This

- Advertisement -
close
error: Content is protected !!
Join WhatsApp Group