spot_img
spot_img

ಉತ್ತಮ ಆರೋಗ್ಯಕ್ಕಾಗಿ ಉತ್ತಮ ಪರಿಸರ ಕಾಯಬೇಕು

Must Read

spot_img
- Advertisement -

ಮೂಡಲಗಿ: ‘ಸರಳ ಆಹಾರ ಪದ್ಧತಿ, ನಿತ್ಯ ವಾಯು ವಿಹಾರ ಮತ್ತು ಸಕಾರಾತ್ಮಕವಾದ ಚಿಂತನೆಗಳು ಇದ್ದರೆ ಮಧುಮೇಹ ಬಾಧಿಸಲಾರದು’ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಜೋಸ್ ಪ್ರಾನ್ಸಿಸ್ಕೋ ಅರ್ಲೆ ಬ್ರಿಟೋ ಹೇಳಿದರು.

ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಹಾಗು ಗಿರಡ್ಡಿ ಮಲ್ಟಿಸ್ಪೇಶಾಲಿಟಿ ಹಾಸ್ಪಿಟಲ್ ಇವರ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಉಚಿತ ಮಧುಮೇಹ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನಲ್ಲಿ ಉತ್ತಮ ಪರಿಸರವನ್ನು ಕಾಯ್ದುಕೊಳ್ಳಬೇಕು ಎಂದರು.

ಲಯನ್ಸ್ ಕ್ಲಬ್ ಮೂಡಲಗಿ ಪರಿವಾರವು ಅನ್ನದಾಸೋಹ, ಸಸಿ ನೆಡುವುದು, ಉಚಿತ ಆರೋಗ್ಯ ತಪಾಸಣೆ ಸೇರಿದಂತೆ ಜನಪರವಾದ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುವುದರ ಮೂಲಕ ಶ್ಲಾಘನೀಯ ಕಾರ್ಯಗಳನ್ನು ಮಾಡುತ್ತಲಿದೆ ಎಂದರು. 

- Advertisement -

ಲಯನ್ ಅಧ್ಯಕ್ಷ ಶ್ರೀಶೈಲ ಲೋಕನ್ನವರ, ಕಾರ್ಯದರ್ಶಿ ಸುಪ್ರೀತ ಸೋನವಾಲಕರ ವೇದಿಕೆಯಲ್ಲಿದ್ದರು. 

ಈರಣ್ಣ ಕೊಣ್ಣೂರ, ಸಂಜಯ ಮೋಕಾಶಿ, ಕೃಷ್ಣಾ ಕೆಂಪಸತ್ತಿ,  ಡಾ. ತಿಮ್ಮಣ್ಣ ಗಿರಡ್ಡಿ, ಶಿವಾನಂದ ಗಾಡವಿ, ಸಂಗಮೇಶ ಕೌಜಲಗಿ, ಡಾ. ಯಲ್ಲಾಲಿಂಗ ಮುಳವಾಡ, ಡಾ.ರವಿ ಕಂಕಣವಾಡಿ, ಡಾ. ಲಕ್ಷ್ಮಣ ಕಂಕಣವಾಡಿ, ಡಾ. ಸಂಜಯ ಶಿಂಧಿಹಟ್ಟಿ, ಡಾ. ಸಚೀನ ಟಿ, ಮಹಾವೀರ ಸಲ್ಲಾಗೋಳ, ಶಿವಬಸು ಈಟಿ, ವೆಂಕಟೇಶ ಪಾಟೀಲ, ಗಿರೀಶ ಆಸಂಗಿ, ಸೋಮಶೇಖರ ಹಿರೇಮಠ ಭಾಗವಹಿಸಿದ್ದರು. 

ಶಿಬಿರದಲ್ಲಿ 200ಕ್ಕೂ ಅಧಿಕ ಜನರು ಮಧುಮೇಹ ರಕ್ತ ತಪಾಸಣೆ ಮಾಡಿಕೊಂಡರು.

- Advertisement -
- Advertisement -

Latest News

ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮಾಜಿ ಸೈನಿಕರ ಸಂಘದ ಬೆಂಬಲ

ಮೂಡಲಗಿ - ಮೂಲಭೂತ ಬೇಡಿಕೆಗಳ ಈಡೇರಿಕೆಗಾಗಿ ಇದೇ ದಿ. ೧೦ ರಿಂದ ಗ್ರಾಮ ಆಡಳಿತ ಅಧಿಕಾರಿಗಳು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಅಖಿಲ ಕರ್ನಾಟಕ ಮಾಜಿ ಸೈನಿಕರ...
- Advertisement -

More Articles Like This

- Advertisement -
close
error: Content is protected !!
Join WhatsApp Group