- Advertisement -
“ಕಲೆಯ ಲೀಲೆ”
ಲೀಲಾವತಿ ಎಂದರೆ
ಕಲೆಯ ಕಡಲು
ನಟನೆಯಲ್ಲಿ
- Advertisement -
ಕೈಗೆಟುಕದ ಮುಗಿಲು
ಮರೆಯದ
ಕಲಾವಿದೆ ಇವರು
- Advertisement -
ಮರೆತರು ಇವರ
ಇವರಿಂದ ಬೆಳೆದವರು
ಸಾರುತ್ತಿದ್ದವು ಮೌಲ್ಯ
ಇವರ ಚಿತ್ರಗಳು
ಕಲಿಸುತ್ತಿದ್ದವು ಪಾಠ
ಇವರ ಹಾಡುಗಳು
ಜೀವನವೇ ಇರುತ್ತಿತ್ತು
ಇವರ ಸಿನಿಮಾದಲ್ಲಿ
ಬದುಕುತ್ತಿದ್ದರು ಸಿನಿಮಾದಂತೆ
ಜನರು ಜೀವನದಲ್ಲಿ
ಬಡವಾಯಿತು ಸಿನಿಮನೆ
ಹಿರಿಯ ಕಲೆ
ತಲೆಗಳಿಲ್ಲದೆ
ಚಿತ್ರರಂಗ ಸಾಗಿದೆ
ಕಲೆ ಎಂಬುದೇ ಇಲ್ಲದೆ
ಸಾವೇ ಬಂದೆಯಾ
ಇವರನ್ನೂ ಕರೆದೊಯ್ಯಲು
ಎಷ್ಟು ಸಾವಾಗಬೇಕು
ನಿನ್ನ ಹೊಟ್ಟೆ ತುಂಬಲು
ಬದುಕು ಇಷ್ಟೇ
ಬರಬೇಕು ಹೋಗಬೇಕು
ಉಸಿರು ಸತ್ತರೂ
ಹೆಸರು ಬದುಕಬೇಕು.
ಎಂ.ಸಂಗಪ್ಪ.
ಲಿಂಗಸುಗೂರು