ನಗರ ಕೇಂದ್ರ ಗ್ರಂಥಾಲಯದಲ್ಲಿ ವಿಶ್ವ ಮಾನವ ಹಕ್ಕುಗಳ ದಿನ ಆಚರಣೆ

0
293

ಬೆಳಗಾವಿ: ಮನುಷ್ಯ ಬದುಕಿನ ಹಕ್ಕುಗಳ ಮಹತ್ವವನ್ನು ಸಾರುವ ದಿನ ಮಾನವ ಹಕ್ಕುಗಳ ದಿನ. ಪ್ರತಿವರ್ಷ ಡಿಸೆಂಬರ್‌ 10 ರಂದು ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. 1948ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಮಾನವ ಹಕ್ಕುಗಳ ದಿನದ ಆಚರಣೆಯ ಬಗ್ಗೆ ಅನುಮೋದನೆ ನೀಡಲಾಯಿತು. ಈಗ ನಾವು ಸುವರ್ಣ ಸಂಭ್ರಮದಲ್ಲಿ ಇದ್ದೇವೆ ಎಂದು ನಗರ ಕೇಂದ್ರ ಗ್ರಂಥಾಲಯ ಬೆಳಗಾವಿ ಉಪನಿರ್ದೇಶಕರಾದ ಶ್ರೀ ರಾಮಯ್ಶಾ ಅವರು ಹೇಳಿದರು.ಅವರು ಗ್ರಂಥಾಲಯದಲ್ಲಿ ವಿಶ್ವ ಮಾನವ ಹಕ್ಕುಗಳ ದಿನ ಆಚರಣೆ ಸಂಧರ್ಭದಲ್ಲಿ ಮಾತನಾಡುತ್ತಿದ್ದರು.

ಈ ಮಾನವ ಹಕ್ಕುಗಳ ದಿನದಂದು ಪ್ರತಿಯೊಬ್ಬ ವ್ಯಕ್ತಿಗೂ ಮಾನವ ಹಕ್ಕುಗಳ ಮೂಲಭೂತ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸೋಣ ಮತ್ತು ಎಲ್ಲರಿಗೂ ನ್ಯಾಯ, ಸಮಾನತೆ, ಶಾಂತಿ ಮತ್ತು ಸ್ವಾತಂತ್ರ್ಯವನ್ನು ಅನುಸರಿಸಲು ಅವಕಾಶವನ್ನು ಕಲ್ಪಿಸುವ ಪಣ ತೊಡೋಣ ಎನ್ನುವ ಶಪಥ ಮಾಡೋಣ ಎಂದು ಪ್ರಕಾಶ ಇಚಲಕರಂಜಿ ಅವರು ಶಪಥವನ್ನು ಓದಿ ಹೇಳಿದರು.ಎಲ್ಲ ಸಿಬ್ಬಂದಿ,ಓದುಗರು ಶಪಥ ಮಾಡಿದರು.ಸ್ವಾತಂತ್ರ್ಯ, ಸಮಾನತೆ ಹಾಗೂ ಎಲ್ಲರಿಗೂ ನ್ಯಾಯ ಒದಗಿಸುವುದು 2023ರ ಮಾನವ ಹಕ್ಕುಗಳ ದಿನ ಥೀಮ್‌ ಆಗಿದೆ.

ಈ ಸಂಧರ್ಭದಲ್ಲಿ ಸರಸ್ವತಿ, ಲಕ್ಷ್ಮಿ, ದ್ರಾಕ್ಷಾಯಿಣಿ, ವಿಧ್ಯಾರ್ಥಿಗಳುಮತ್ತು ಸಾರ್ವಜನಿಕ ಓದುಗರು ಹಾಜರಿದ್ದರು.