ಬೆಳಗಾವಿ. – ಡಾ ಫ ಗು ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿನಾಂಕ 10 ರಂದು ಡಾ ಹೇಮಾ ಸೊನೊಳ್ಳಿ ಅವರು ವಚನಗಳಲ್ಲಿ ಮಾನವೀಯ ಮೌಲ್ಯಗಳು ಕುರಿತು ಮಾತನಾಡಿದರು.
ಸಮಾಜದಲ್ಲಿ ಜಾತಿ ಧಮ೯ಮೇಲು ಕೀಳು ತೊಡೆದು ಹಾಕಲು ಶರಣರು ಸಾಕಷ್ಟು ಶ್ರಮಿಸಿದ್ದರು.ಎಂದು ಹೇಳಿದರು
ವಚನಗಳು ನಿಸ್ವಾರ್ಥದಿಂದ ಸಾಮಾಜಿಕ ಕಳಕಳಿಯ ಕಾಯ೯ಗಳನ್ನು ಮಾಡುವ ಪ್ರವೃತ್ತಿ ರೂಢಿಸಿಕೊಂಡು ಮಾನವೀಯತೆ ಮೈಗೂಡಿಸಿಕೊಳ್ಳಬೇಕೆಂಬ ಸಂದೇಶ ವಚನಗಳು ಸೇರುತ್ತವೆ. ದಾನ ಮಾಡುವ ಗುಣ ಇರಬೇಕು.ಹಿಂದೆ ಗುರು ಇರಬೇಕು ಮುಂದೆ ಗುರಿ ಇರಬೇಕು ಎಂದರು.
ಅಧ್ಯಕ್ಷತೆಯನ್ನು ಈರಣ್ಣಾ ದೇಯಣ್ಣವರ ಅಧ್ಯಕ್ಷರು ಲಿಂಗಾಯತ ಸಂಘಟನೆ ಅವರು ವಹಿಸಿದ್ದರು. ವಾರ ವಾರವೂ ಆಮಂತ್ರಣ ನೋಡಿ ಆಗಮಿಸಿ ಪ್ರಾಥ೯ನೆ ಮಾಡುವುದು ವಚನ ವಾಚಿಸುವುದು. ಹೀಗೆ ಶರಣರು ಶರಣೆಯರು ಆಗಮಿಸಿರಿ ಎಂದರು.
ಉಪನ್ಯಾಸಕರ ಪರಿಚಯ ಶರಣ ಎಂ ವೈ ಮೆಣಸಿನಕಾಯಿ ಅವರು ಮಾಡಿದರು. ಸುರೇಶ ನರಗುಂದ ಸ್ವಾಗತಿಸಿದರು ಸದಾಶಿವ ದೇವರಮನಿ ಕಾಯ೯ಕ್ರಮ ನಿರೂಪಿಸಿದರು. ಆನಂದ ಕಕಿ೯ ವಂದಿಸಿದರು.ಪ್ರಾರಂಭದಲ್ಲಿ ಶರಣ ಶರಣೆಯರ ವಾಚನ ಮಾಡಿದರು.ವಿ.ಕೆ ಪಾಟೀಲ.ಗದಿಗೆಪ್ಪ ತಿಗಡಿ ಬಾಳಗೌಡ ಬಂಗಿ, ಇಂದಿರಾ ಮೋಟೆಬೆನ್ನೂರ, ಶಶಿಭೂಷಣ ಪಾಟೀಲ, ಲಕ್ಷಿಕಾಂತ ಗುರವ, ಚವಲಗಿ ಮೆಡಂ ಇತರರು ಉಪಸ್ಥಿತರಿದ್ದರು