spot_img
spot_img

ಅಬ್ಬಿಗೇರಿ ದಂಪತಿಗಳ ಸಾಹಿತ್ಯ ಸೇವೆ ಎಲ್ಲರಿಗೂ ಮಾದರಿ

Must Read

- Advertisement -

ಅಬ್ಬಿಗೇರಿ ದಂಪತಿಗಳ 15 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಚಾರ್ಯ, ಹಿರಿಯ ಸಾಹಿತಿಗಳ ಅಭಿನುಡಿ  

ಅಬ್ಬಿಗೇರಿ ದಂಪತಿಗಳು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸುತ್ತಿರುವ ಸೇವೆ ಅನನ್ಯ. ಈ ಸೇವೆ ನಿತ್ಯ ನಿರಂತರವಾಗಿರಲಿ ಎಂದು ಬೆಳಗಾವಿ ಜಿಲ್ಲಾ ವಿಶ್ರಾಂತ ಪ್ರಾಚಾರ್ಯ, ಹಿರಿಯ ಸಾಹಿತಿಗಳಾದ ಬಿ. ಎಸ್ ಗವಿಮಠ ಅವರು ಹೇಳಿದರು. 

ಅವರು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಜಿಲ್ಲಾ ಲೇಖಕಿಯರ ಸಂಘ ಬೆಳಗಾವಿ ಹಾಗೂ ಲೋಕವಿದ್ಯಾ ಪ್ರಕಾಶನ ಸಂಕೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ  ಉಪನ್ಯಾಸಕಿ,ಲೇಖಕಿ, ಅಂಕಣಕಾರ್ತಿ, ಚಿಂತಕಿ, ವಾಗ್ಮಿ ಜಯಶ್ರೀ ಮತ್ತು ಜಯಪ್ರಕಾಶ ಅಬ್ಬಿಗೇರಿ ದಂಪತಿಗಳ 15 ಕೃತಿಗಳ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

- Advertisement -

ಪ್ರಸ್ತುತ ದಿನಮಾನಗಳಲ್ಲಿ ಸಾಹಿತ್ಯ ಓದುಗರ ಸಂಖ್ಯೆ ತುಂಬಾ ಕ್ಷೀಣಿಸಿದೆ. ಇಂತಹ ಸಮಯದಲ್ಲಿ ವೃತ್ತಿ ಬದುಕಿನೊಂದಿಗೆ ಸಾಹಿತ್ಯ ಕೃತಿಗಳನ್ನು ರಚಿಸಿ ಪ್ರಕಟಿಸುವುದು ತುಂಬಾ ಅಭಿನಂದನಾರ್ಹ ಕಾರ್ಯವಾಗಿದೆ. ಈ ಕಾರ್ಯಕ್ರಮದಲ್ಲಿ 15 ಕೃತಿಗಳು ಬಿಡುಗಡೆಯಾಗಿದ್ದು, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಇಷ್ಟೊಂದು ಕೃತಿಗಳು ಬಿಡುಗಡೆಯಾಗಿದ್ದು ಅಭಿಮಾನದ ಸಂಗತಿ ಎಂದರು.

ಕೃತಿ ಪರಿಚಯ ಮಾಡಿದ ಇಂಗ್ಲಿಷ್‌ ಅಧ್ಯಾಪಕಿ ಗುರುದೇವಿ ಹುಲೆಪ್ಪನವರಮಠ, ಜಯಶ್ರೀ ಅಬ್ಬಿಗೇರಿ ಅವರ ಕೃತಿಗಳಲ್ಲಿ ಒಂದು ಚೈತನ್ಯ ತುಂಬುವ ಶಕ್ತಿ ಇದೆ. ಕೈಲಾಗದೇ ನನಗೆ ಏನನ್ನೂ ಮಾಡಲು ಸಾಧ್ಯವೇ ಇಲ್ಲ ಎಂದು ಕುಳಿತಿರುವ ಅದೆಷ್ಟೋ ಜನರಿಗೆ ಸ್ಫೂರ್ತಿ ತುಂಬುವ ತಾಕತ್ತು ಅಬ್ಬಿಗೇರಿ ಅವರ ಕೃತಿಗಳಲ್ಲಿ ಅಡಗಿದೆ. ಕನಸನ್ನೇ ಕಾಣದೇ ಇರುವವರಿಗೆ ಕನಸು ಕಾಣಿಸಿ, ಆ ಕನಸುಗಳ ಕನಸು ಮಾಡಲು ಏನು ಮಾಡಬೇಕು ಎಂಬುದನ್ನು ಅದ್ಭುತವಾಗಿ ಬರೆದಿದ್ದಾರೆ. ಅಷ್ಟೇ ಅಲ್ಲದೇ ಜೀವನ ಪ್ರಸಂಗಗಳನ್ನು ದೃಷ್ಟಾಂತಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಹೀಗಾಗಿ ಯುವ ಮನಸುಗಳ ಪರಿವರ್ತನೆಗೆ ಈ ಪುಸ್ತಕಗಳು ಸಹಕಾರಿ. ಹಾಗಾಗಿ ಈ ಪುಸ್ತಕಗಳನ್ನು ಅಬ್ಬಿಗೇರಿ ದಂಪತಿಗಳು ಗ್ರಂಥಾಲಯಗಳಿಗೆ ಉಚಿತವಾಗಿ ನೀಡಿದರೆ ಒಳಿತು ಎಂದು ಅಭಿಪ್ರಾಯಪಟ್ಟರು.

ಗೌರವ ಉಪಸ್ಥಿತಿ ವಹಿಸಿದ್ದ ವಿಶ್ರಾಂತ ಅಧ್ಯಾಪಕ ಪಿ.ಜಿ.ಕೆಂಪಣ್ಣವರ ಮಾತನಾಡಿ, ಸತಿ-ಪತಿಗಳು ಸಾಹಿತ್ಯ ಕ್ಷೇತ್ರಕ್ಕೆ ಸೇವೆ ಸಲ್ಲಿಸುವುದು ತುಂಬಾ ವಿರಳ. ಬೆಳಗಾವಿಯಲ್ಲಿ ಜಗಜಂಪಿ ದಂಪತಿಗಳು ಮಾತ್ರ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಅವರನ್ನು ಬಿಟ್ಟರೇ ಸಾಹಿತ್ಯ ಕ್ಷೇತ್ರ ಸಾಧಕ ದಂಪತಿಗಳು ಎಂದರೆ ಅಬ್ಬಿಗೇರಿ ದಂಪತಿ. ಜಯಪ್ರಕಾಶ ಅಬ್ಬಿಗೇರಿ ಅವರ ಕೃತಿಗಳಲ್ಲಿ ಹಾಸ್ಯ ಪ್ರಜ್ಞೆ ಅಡಗಿದೆ ಎಂದರು.

- Advertisement -

ಕೃತಿ ಲೋಕಾರ್ಪಣೆಯನ್ನು ವಿಶ್ರಾಂತ ಪ್ರಾಚಾರ್ಯ ಬಿ.ಎಸ್‌.ಗವಿಮಠ ಮಾಡಿದರು. ಸಾಹಿತಿ ಸುನಂದಾ ಎಮ್ಮಿ, ಪ್ರಾಚಾರ್ಯ ಡಾ.ನಿರ್ಮಲಾ ಬಟ್ಟಲ ಕೃತಿ ಪರಿಚಯ ಮಾಡಿದರು. ಬೆಳಗಾವಿ ಜಿಲ್ಲಾ‌ ಲೇಖಕಿಯರ ಸಂಘದ ಅಧ್ಯಕ್ಷರಾದ ಜಯಶೀಲಾ ಬ್ಯಾಕೋಡ ಅಧ್ಯಕ್ಷತೆ ವಹಿಸಿದ್ದರು.

ಆಶಾ ಯಮಕನಮರಡಿ ನಿರೂಪಿಸಿದರು.ಡಾ ನಿಖಿತಾ ಪಂಚಮಪಾಟೀಲ ಪ್ರಾರ್ಥಿಸಿದರು. ಡಾ ಅನ್ನಪೂರ್ಣ ಹಿರೇಮಠ ವಂದಿಸಿದರು.

ಬಿಡುಗಡೆಯಾದ ಕೃತಿಗಳು:

ಲೇಖಕಿ, ಉಪನ್ಯಾಸಕಿ ಜಯಶ್ರೀ ಅಬ್ಬಿಗೇರಿ ಅವರ,  ನಿಮ್ಮನ್ನು ನೀವು ಯಶಸ್ವಿ ವ್ಯಕ್ತಿ ಎಂದು ಭಾವಿಸಿ, ಮೆಲ್ಲ ಮೆಲ್ಲ ಈ ಪ್ರೀತಿ ಮೆಲ್ಲುವಾ, ಜೀವನದಿ, ಜೀವ ನೀಡುವ ಜೀವ ಅಪಾಯದಲ್ಲಿದೆ, ವಚನ ವಾಹಿನಿ, ಸೋಲಿನ ಸುಳಿಯಲ್ಲಿ ಗೆಲುವಿನ ತುದಿ ಇದೆ, ಕುಂತರೂ ನಿಂತರೂ ನಿನ್ನದೇ ತುಂತುರು, ಹಬ್ಬ ಬಂತು ಹಬ್ಬ, ಸೋಲು ಒಪ್ಪಿಕೊಳ್ಳುವ ಮುನ್ನ ಕೊಂಚ ಪ್ರಶ್ನಿಸಿಕೊಳ್ಳಿ, ಮನೋಲ್ಲಾಸ ಭಾಗ-1, ಮನೋಲ್ಲಾಸ ಭಾಗ-2 ಹಾಗೂ ಜಯಪ್ರಕಾಶ ಅವರ, ಶ್ರೀಮತಿಗಳ ಶೃಂಗಸಭೆಗಳು, ಬಾನುಲಿ ನಗೆ, ಹೃದಯವೀಣೆ ಮಿಡಿದಾಗ ಡಾ. ಸಿದ್ದನಗೌಡ ಪಾಟೀಲ ಕೃತಿಗಳು ಲೋಕಾರ್ಪಣೆಗೊಂಡವು.

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group