ಎನ್. ಪಿ. ಎಸ್. ಶಾಲೆಯ ನಾಮಫಲಕದಲ್ಲಿ ಕನ್ನಡಕ್ಕೆ ತಿಲಾಂಜಲಿ ; ಸೂಕ್ತ ಕ್ರಮಕ್ಕೆ ಆದೇಶ

Must Read

ಮೈಸೂರಿನ ವಿಜಯನಗರ ಬಡಾವಣೆಯ  ಎನ್. ಪಿ. ಎಸ್.  ಶಾಲೆಯ ನಾಮಫಲಕದಲ್ಲಿ ಕನ್ನಡಭಾಷೆ  ಬಳಸುವಂತೆ ಸೂಕ್ತ ಆದೇಶ ನೀಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಮೈಸೂರು ಮಹಾನಗರಪಾಲಿಕೆ ಆಯುಕ್ತರಿಗೆ ಸೂಚಿಸಿದ್ದಾರೆ.

ಮೈಸೂರಿನ ವಿಜಯ ನಗರ ಬಡಾವಣೆಯ  ನಾಲ್ಕನೇ ಹಂತದಲ್ಲಿ ಎನ್.ಪಿ. ಎಸ್. ಇಂಟರ್ ನ್ಯಾಷನಲ್ ಶಾಲೆಯ ನಾಮಫಲಕದಲ್ಲಿ ಆಂಗ್ಲಭಾಷೆಯನ್ನು ಬಳಸಲಾಗಿದೆ. ಕನ್ನಡ ಭಾಷೆಯ ಬಗ್ಗೆ ತಾತ್ಸಾರ ತೋರಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ  ಡಾ ಭೇರ್ಯ ರಾಮಕುಮಾರ್ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು ನೀಡಿದ್ದರು.

ವಿಜಯನಗರ ಬಡಾವಣೆಯ ಮುಖ್ಯ ರಸ್ತೆಯಲ್ಲಿರುವ ಈ ಶಾಲೆಯಲ್ಲಿ ಇಲ್ಲಿ ಒಂದನೇ ತರಗತಿಯಿಂದ ಹನ್ನೆರಡನೇ  ತರಗತಿವರೆಗೆ ತರಗತಿಗಳು ನಡೆಯುತ್ತಿವೆ.ಈ ಶಾಲೆ ಮೈಸೂರಿನ ಪ್ರಮುಖ ಭಾಗದಲ್ಲಿದ್ದರೂ ಶಾಲೆಯ ನಾಮಫಲಕ ಆಂಗ್ಲ ಭಾಷೆಯಲ್ಲಿದೆ. ಶಾಲೆಯ ನಾಮಫಲಕದಲ್ಲಿ ಕನ್ನಡ ಭಾಷೆ ಬಗ್ಗೆ ನಿರ್ಲಕ್ಷ್ಯ ತೋರಿಸಲಾಗಿದೆ. ಸದರಿ ಶಾಲೆಯ ನಾಮಫಲಕದಲ್ಲಿ  ಕನ್ನಡ ಭಾಷೆ ಬಳಸುವಂತೆ ಕನ್ನಡ ಅಭಿವೃದ್ದಿ ಪ್ರಾಧಿಕಾರ ಸೂಚನೆ ನೀಡಬೇಕು ಎಂದವರು ಒತ್ತಾಯಿಸಿದ್ದರು.

ಒಂದೆಡೆ ಜಯಲಕ್ಷ್ಮಿ ಪುರಂ ಬಡಾವಣೆಯಲ್ಲಿರುವ  ಸೆಂಟ್ ಜೋಸೆಫ್ ಸೆಂಟ್ರಲ್ ಶಾಲೆಯ ನಾಮಫಲಕದಲ್ಲಿ ಕನ್ನಡ ಭಾಷೆ  ಅನ್ನು  ಆದ್ಯತೆ ನೀಡಿ ಬಳಸಲಾಗಿದೆ. ಆದರೆ ಎನ್. ಪಿ. ಎಸ್. ಇಂಟರ್ ನ್ಯಾಷನಲ್  ಶಾಲೆಯ  ನಾಮಫಲಕದಲ್ಲಿ  ಕನ್ನಡ ಭಾಷೆಗೆ ತಿಲಾಂಜಲಿ  ನೀಡಲಾಗಿದೆ. ಕನ್ನಡ ಬಳಸದೆ ಇರುವ ಎನ್. ಪಿ. ಎಸ್. ಆಡಳಿತ ಮಂಡಳಿ ವಿರುದ್ಧ ಶಿಸ್ತಿನ  ಕ್ರಮ ಕ್ಯೆಗೊಳ್ಳಬೇಕೆಂದು ಭೇರ್ಯ ರಾಮಕುಮಾರ್ ಆಗ್ರಹಪಡಿಸಿದ್ದರು.

ರಾಜ್ಯ ಸರ್ಕಾರದ ಭಾಷನೀತಿಯ ಅನ್ವಯ ಮೈಸೂರು ನಗರದ ವಿಜಯನಗರ ಬಡಾವಣೆಯ ಎನ್. ಪಿ. ಎಸ್.ಶಾಲೆಯ ನಾಮಫಲಕದಲ್ಲಿ ಕನ್ನಡವನ್ನು ಪ್ರಧಾನವಾಗಿ ಬಳಸುವಂತೆ ಶಾಲೆಯ ಆಡಳಿತ ಮಂಡಳಿಗೆ ಸ್ಪಷ್ಟ ಸೂಚನೆ ನೀಡುವಂತೆ ಮೈಸೂರು ಮಹಾನಗರಪಾಲಿಕೆ ಆಯುಕ್ತರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ  ಕಾರ್ಯದರ್ಶಿಯವರು  ಸೂಚಿಸಿದ್ದಾರೆ.

Latest News

ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.

ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...

More Articles Like This

error: Content is protected !!
Join WhatsApp Group