ಗ್ರಾಮ ಪಂಚಾಯತ ಗ್ರಂಥಾಲಯಗಳಿಗೆ ಇ- ಉಪಕರಣಗಳು

Must Read

ಬೆಳಗಾವಿ – ಬೈಲಹೊಂಗಲ ಹಾಗೂ ಕಿತ್ತೂರು ತಾಲೂಕಿನ 15 ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ಒಂದು ಸ್ಮಾರ್ಟ್ ಫೋನ್ ಸ್ಪೀಕರ್ ಮತ್ತು ಡೆಲ್ ಬೋರ್ಡ್ ಗಳನ್ನು ಶಿಕ್ಷಣ ಪೌಂಡೇಶನದಿಂದ ಬೈಲಹೊಂಗಲ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಸ್.ಎಸ್.ಸಂಪಗಾಂವಿ ಇವರಿಂದ ವಿತರಣೆ ಮಾಡಲಾಯಿತು. 

2022-23 ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯಿಂದ ಒಟ್ಟು 99 ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಗ್ರಾಮ ಡಿಜಿ ವಿಕಾಸನ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿದ್ದು ಬೈಲಹೊಂಗಲದ 10, ಕಿತ್ತೂರಿನ 5 ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಗ್ರಾಮ ಡಿಜಿ ವಿಕಸನ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿದ್ದು ಈಗಾಗಲೇ ಆಯ್ಕೆಯಾದ 15 ಗ್ರಾಮ ಪಂಚಾಯತಿ ಗ್ರಂಥಾಲಯಗಳಿಗೆ ಒಂದು ಸ್ಮಾರ್ಟ್ ಫೋನ್ ಮತ್ತು ಸ್ಪೀಕರ್ ಹಾಗೂ ಡೆಲ್ ಬೋರ್ಡ್ ಗಳನ್ನು ವಿತರಣೆ ಮಾಡಲಾಯಿತು.

ಗ್ರಾಮೀಣ ಭಾಗದ ಮಕ್ಕಳಿಗೆ ಡಿಜಿಟಲ್ ಕೌಶಲ್ಯಗಳನ್ನು ಪಡೆದುಕೊಳ್ಳಲು ಸಹಾಯ ಮಾಡುವ ನಿಟ್ಟಿನಲ್ಲಿ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ಆರ್‌ಡಿಪಿಆರ್, ಡೆಲ್ ಹಾಗೂ ಶಿಕ್ಷಣ ಫೌಂಡೇಶನ್ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಈಗಾಗಲೇ ಗ್ರಾಮ ಪಂಚಾಯತಿ ಗ್ರಂಥಾಲಯಗಳಿಗೆ ನೀಡಿರುವ ಮೊಬೈಲ್ ಮತ್ತು ಲ್ಯಾಪ್ಟಾಪ್ ಗಳಲ್ಲಿ ಶಿಕ್ಷಣ ಪೇಡಿಯಾ

ಅಪ್ಲಿಕೇಶನ್ ಅಳವಡಿಸಲಾಗಿದ್ದು ಈ ಅಪ್ಲಿಕೇಶನ್ ಮುಖಾಂತರ ಗ್ರಾಮೀಣ ಭಾಗದ ಮಕ್ಕಳಿಗೆ 8 ,9, 10ನೇ ತರಗತಿ ಮತ್ತು ಪಿಯುಸಿ ಪಠ್ಯಕ್ರಮ  ಅಳವಡಿಸಲಾಗಿದೆ ಮತ್ತು ಡಿಜಿಟಲ್ ಕೌಶಲ್ಯ ಸಂಬಂಧಪಟ್ಟಂತ ಮಾಹಿತಿಗಳನ್ನ ಅಪ್ಲಿಕೇಶನ್ ಅಳವಡಿಸಲಾಗಿದ್ದು ಗ್ರಾಮೀಣ ಭಾಗದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಮತ್ತು ತಮ್ಮ ವೃತ್ತಿ ಜೀವನಕ್ಕೆ ತುಂಬಾ ಉಪಯುಕ್ತವಾದ ಮಾಹಿತಿಯನ್ನು ಅಳವಡಿಸಲಾಗಿದೆ ಇದರ ಮುಖಾಂತರ ಗ್ರಾಮೀಣ ಭಾಗದ ಮಕ್ಕಳು ಪ್ರಯೋಜನವನ್ನು ಪಡೆದುಕೊಳ್ಳಲು ಸಹಕಾರಿಯಾಗಿದೆ.

 ಈ ಸಂದರ್ಭದಲ್ಲಿ ತಾ ಪಂ ವ್ಯವಸ್ಥಾಪಕರು ಎಮ್ ಎ ಇಂಚಲಮಠ, ಶಿಕ್ಷಣ ಪೌಂಡೇಶನದ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ಜಿಲ್ಲಾ ಸಂಯೋಜಕರು ಶ್ರೀಶೈಲ ಅಥಣಿ, ಚನ್ನಬಸಪ್ಪ ಲಿಂಬೆನ್ನವರ, ಮತ್ತು ತಾಲೂಕು ಸಂಯೋಜಕರಾದ ಗೀತಾ ಗುಜನಾಳ, ಶ್ರೀದೇವಿ ಪೂಜೇರ,ಲೆಕ್ಕ ಸಹಾಯಕಿ ಕವಿತಾ ನಾಯಕ, ತಾಲೂಕಿನ ಗ್ರಾಮ ಪಂಚಾಯತ ಗ್ರಂಥಪಾಲಕರು ಚನ್ನಪ್ಪ ಕಳಸನ್ನವರ, ಮಹಾರುದ್ರಯ್ಯ ಕೆಂಜೆಡಿಮಠ, ಅಲಿಸಾಬ ಹುಬ್ಬಳ್ಳಿ, ಪದ್ಮಶ್ರೀ ಕರಡಿ, ಹೇಮಾ ಗೋಣಿ, ಬಸವರಾಜ ಮಾಳಗಿ, ಮಂಜುನಾಥ ಹಡಪದ, ಗೀತಾ ಉಪ್ಪಾರ, ರಾಮಕ್ಕ ಚರಂತಿಮಠ, ಶಂಕರೆಪ್ಪ ಭದ್ರಶೆಟ್ಟಿ, ರತ್ನಾ ಉಳ್ಳಿಗೇರಿ, ಗಂಗಾಬಿಕಾ ಕಡಬಿ, ಮಂಜುನಾಥ ಕುಂದಾಲ ಎಸ್ ಎನ್ ಪಾಟೀಲ, ತಾಲೂಕು ಪಂಚಾಯತ ಎಲ್ಲ ಸಿಬ್ಬಂದಿ ಉಪಸ್ಥಿತರಿದ್ದರು

Latest News

ಸಮನ್ವಯದ ಶತಮಾನದ ಕವಿ ಡಾ ಜಿ ಎಸ್ ಶಿವರುದ್ರಪ್ಪನವರು

ಕನ್ನಡ ಸಾಹಿತ್ಯದಲ್ಲಿ ವಿಶೇಷ ಸ್ಥಾನಮಾನ ಪಡೆದುಕೊಂಡ ಸಮನ್ವಯ ಕವಿ ನವೋದಯ ನವ್ಯ ಬಂಡಾಯ ಸಾಹಿತ್ಯ ಪ್ರಕಾರಗಳಲ್ಲಿ ಸೈ ಎನಿಸಿಕೊಂಡ ಭಾವ ಗೀತೆಗಳ ಕವಿ ಬೆಳಕಿನ ಕವಿ...

More Articles Like This

error: Content is protected !!
Join WhatsApp Group