ಸಿಂದಗಿ: ಸಿಂದಗಿಯನ್ನು ಜಿಲ್ಲೆ ಮಾಡುವ ದಿಸೆಯಲ್ಲಿ ಹತ್ತು ಜನರ ನಿಯೋಗ ಮಾಡಿಕೊಂಡು ಸಿಎಂ ಮತ್ತು ಡಿಸಿಎಂ ಅವರನ್ನು ಭೇಟಿಯಾಗುವ ಕಾರ್ಯವಾಗಲಿ ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಹೇಳಿದರು.
ಪಟ್ಟಣದ ಬಸವ ಮಂಟಪದಲ್ಲಿ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ನಿಲುವು ಒಂದೇ ಸಿಂದಗಿ ಜಿಲ್ಲೆಯಾಗಬೇಕು. ಸಿಎಂ ಮತ್ತು ಡಿಸಿಎಂ ಅವರ ಮೇಲೆ ಸಿಂದಗಿ ಜಿಲ್ಲೆ ಮಾಡುವ ನಿಟ್ಟಿನಲ್ಲಿ ಒತ್ತಡ ತರುವ ಕಾರ್ಯ ನಾವೆಲ್ಲರೂ ಸೇರಿ ಮಾಡೋಣ. ಪಕ್ಷಾತೀತವಾಗಿ ಹೋರಾಟ ಮಾಡಿ ಸರಕಾರದ ಕಣ್ಣು ತೆರೆಸುವ ಕಾರ್ಯ ಮಾಡಬೇಕು. ಜಿಲ್ಲಾ ಹೋರಾಟ ಸಮಿತಿ ರಚನೆಯಾಗಬೇಕು. ಇಂದು ಅಧಿಕಾರ ಬರುತ್ತೆ ಹೋಗುತ್ತೆ ಆದರೆ ಜನಪ್ರತಿನಿದಿನಗಳ ನಿರ್ಧಾರ ಮಾತ್ರ ಕಠೋರವಾಗಿರಬೇಕು. ಹಾಗೆಯೇ ಸಿಂದಗಿ ಜನಸಂಖ್ಯೆಯಲ್ಲೂ ಸಿಂದಗಿ ಮುಂದೆಯಿದೆ. ವಿವಿಧ ತಾಲೂಕುಗಳನ್ನು ಪರಿಗಣಿಸಿದರೇ ಸಿಂದಗಿಯೇ ಹೆಚ್ಚಿದೆ. ಮುಂಬರುವ ಜ.5ರಂದು ಸಿಎಂ ಮತ್ತು ಡಿಸಿಎಂ ಅವರನ್ನು ಭೇಟಿಯಾಗುವ ಒಂದು ನಿಯೋಗ ತಯಾರಿ ಆಗಲಿ ಎಂದು ಹೇಳಿದರು.
ಈ ವೇಳೆ ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ಸಿಂದಗಿ ಭೌಗೋಳಿಕವಾಗಿ ಎಲ್ಲದರಲ್ಲಿಯೂ ಮುಂದಿದೆ. ಹಾಲಿ ಮತ್ತು ಮಾಜಿ ಶಾಸಕರು ಸೇರಿ ಸಿಂದಗಿ ಜಿಲ್ಲೆ ಮಾಡುವುದೇ ನಮ್ಮ ಧ್ಯೇಯವಾಗಿರಬೇಕು ಎಂದು ಹೇಳಿದರು.
ಈ ವೇಳೆ ಮಾಜಿ ವಿಪ ಸದಸ್ಯ ಅರುಣ ಶಹಾಪುರ ಮಾತನಾಡಿ, ಗೋಕಾಕ ಚಳವಳಿಯ ಕಹಳೆ ಊದಿದ್ದು ನಮ್ಮ ಸಿಂದಗಿ. ಸಿಂದಗಿ ಇತಿಹಾಸದ ಅಧ್ಯಯನವಾಗಬೇಕು. ನಮ್ಮ ತಾಲೂಕಿಗೆ ದೇಹ ಬೆಸೆದಿರುವುದು ನಾಲ್ಕು ತಾಲೂಕುಗಳು. ಇದು ತಾರ್ಕಿಕ ಹಂತದವರೆಗೆ ಹೋಗಲಿ. ಸಿಂದಗಿ ಅಭಿವೃದ್ಧಿ ಆಗುವವರೆಗೂ ನಾವ್ಯಾರು ನಿಲ್ಲುವುದು ಬೇಡ. ಮುಂದಿನ ಪೀಳಿಗೆಯ ಪ್ರಶ್ನೆಗಳಿಗೆ ಉತ್ತರ ನೀಡಲೂ ನಾವೆಲ್ಲರೂ ಸಿಂದಗಿ ಜಿಲ್ಲೆಯಾಗಬೇಕು ಎಂಬ ಕೂಗನ್ನು ಗಟ್ಟಿಯಾಗಿ ಹೇಳಬೇಕು ಎಂದು ಹೇಳಿದರು.
ಈ ವೇಳೆ ಸಾಹಿತಿ ಡಾ.ಚನ್ನಪ್ಪ ಕಟ್ಟಿ, ಕಾನಿಪ ಸಂಘದ ಅಧ್ಯಕ್ಷ ಆನಂದ ಶಾಬಾದಿ, ಶಿವಾನಂದ ಕಲಬುರಗಿ, ಶಿವಾಜಿ ಮೇಟಗಾರ, ರಾಜಶೇಖರ ಕೂಚಬಾಳ, ಶೈಲಜಾ ಸ್ಥಾವರಮಠ, ಮಹಾನಂದ ಬಮ್ಮಣ್ಣಿ, ಸಿದ್ದು ಪಾಟೀಲ ಹೂವಿನಹಳ್ಳಿ, ಅಶೋಕ ಅಲ್ಲಾಪುರ, ಮಾತನಾಡಿ, ಸಿಂದಗಿ ತಾಲೂಕು ಜಿಲ್ಲೆಯಾಗುವ ಎಲ್ಲ ಲಕ್ಷಣಗಳಿವೆ. ಸಿಂದಗಿ ಜಿಲ್ಲೆಯನ್ನಾಗಿ ಮಾಡಲು ಬೆಂಗಳೂರು ಮಟ್ಟದವೆರೆಗೂ ಹೋರಾಟ ಮಾಡೋಣ. ಎಲ್ಲ ತಾಲೂಕುಗಳಿಗೂ ಹೋಗಿ ಅಭಿಪ್ರಾಯ ಸಂಗ್ರಹಣೆ ಮಾಡಬೇಕು. ಚಕ್ಕಬಂದಿ ತೆಗೆದುಕೊಳ್ಳಬೇಕು. ನೇತೃತ್ವ ವಹಿಸಿಕೊಂಡವರು ಮುಂಚೂಣಿಯಲ್ಲಿದ್ದರೆ ನಾವು ಹಗಲು ರಾತ್ರಿ ಕಾರ್ಯನಿರ್ವಹಿಸುತ್ತೇವೆ. 371ಕಾಯ್ದೆಯ ಹೋರಾಟಕ್ಕೂ ಬೆಂಬಲ ಸೂಚಿಸಿದ್ದೇವೆ. ಮಹಿಳೆಯರ ಸಹಕಾರವು ನಿಮ್ಮ ಜೊತೆ ಯಾವತ್ತೂ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ವೇಳೆ ಆದಿಶೇಷ ಮಠದ ನಾಗರತ್ನ ರಾಜಯೋಗಿ ವಿರರಾಜೇಂದ್ರ ಸ್ವಾಮೀಜಿಗಳು, ಮುತ್ತು ಶಾಬಾದಿ, ಅಶೋಕ ವಾರದ, ಶಬ್ಬೀರಪಟೇಲ್ ಬಿರಾದಾರ, ಕಿರಣ ಕೋರಿ, ಆರ್. ಆರ್.ಪಾಟೀಲ, ಮಹಾಂತೇಶ ಪಟ್ಟಣಶೆಟ್ಟಿ, ಶಿವಾನಂದ ಬಡಾನೂರ, ಆನಂದ ಶಾಬಾದಿ, ಗೊಲ್ಲಪ್ಪಗೌಡ ಪಾಟೀಲ ಗೋಲಗೇರಿ, ಮಲ್ಲಿಕಾರ್ಜುನ ಸಾವಳಸಂಗ, ಜಗದೀಶ ಕಲಬುರಗಿ, ಭೀಮಾಶಂಕರ ತಾರಾಪುರ, ಮಲ್ಲು ಅಲ್ಲಾಪುರ, ಶ್ರೀಶೈಲ ಯಳಮೇಲಿ, ಚಂದ್ರಶೇಖರ ದೇವರೆಡ್ಡಿ, ಮಹಾದೇವಿ ಹಿರೇಮಠ, ಶರಣಗೌಡ ಪಾಟೀಲ, ಸಂತೋಷ ಮಣಿಗೀರಿ, ಶ್ಯಾಮಲಾ ಮಂದೇವಾಲ್, ಶಿವಪ್ಪಗೌಡ ಬಿರಾದಾರ, ಎಂ.ಎಂ ಹಂಗರಗಿ, ಪ್ರವೀಣ ಹಾಲಹಳ್ಳಿ, ಡಾ.ದಸ್ತಗೀರ ಮುಲ್ಲಾ, ಮುತ್ತು ಪಟ್ಟಣಶೆಟ್ಟಿ, ಶೇಖರಗೌಡ ಹರನಾಳ, ಮುತ್ತು ಮುಂಡೇವಾಡಗಿ, ಸೇರಿದಂತೆ ತಾಲೂಕಿನ ವಿವಿಧ ಕನ್ನಡ ಪರಸಂಘಟನೆಯ ಪ್ರಮುಖರು, ಗುರು ಹಿರಿಯರು,ತಾಲೂಕಿನ ಜನತೆಗೆ ಭಾಗವಹಿಸಿದ್ದರು.