spot_img
spot_img

ಹಾಲುಮತ ಸಮಾಜದವರು ಹಾಲಿನಷ್ಟೆ ಪವಿತ್ರ; ಅಶೋಕ ಮನಗೂಳಿ

Must Read

- Advertisement -

ಸಿಂದಗಿ: ಹಾಲುಮತಸ್ಥರು ಹಾಲಿನಷ್ಟೆ ಪವಿತ್ರರು ವಿಷ ಕೊಟ್ಟವರಿಗೆ ಹಾಲು ಉಣಿಸುವ ಸಮಾಜ ಹಾಲುಮತ ಸಮಾಜ ಎಂದು ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಬಣ್ಣಿಸಿದರು.

ತಾಲೂಕಿನ ಚಾಂದಕವಟೆ ಗ್ರಾಮದಲ್ಲಿ ರವಿವಾರ ಹಮ್ಮಿಕೊಂಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ವೃತ್ತ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿ, ಕಿತ್ತೂರ ರಾಣಿ ಚನ್ನಮ್ಮನ ಆಜ್ಞೆಯನ್ನು ಚಾಚೂ ತಪ್ಪದೆ ಪಾಲಿಸುತ್ತ ಅತ್ಯಂತ ಪ್ರಾಮಾಣಿಕವಾಗಿ ಹೋರಾಡಿ ಬ್ರಿಟೀಷರ ನೂರಾರು ರುಂಡಗಳನ್ನು ಚೆಂಡಾಡಿ ಬ್ರಿಟೀಷರಿಗೆ ಚಳಿ ಬಿಡಿಸಿದ ಕೀರ್ತಿ ರಾಯಣ್ಣರಿಗೆ ಸಲ್ಲುತ್ತದೆ ನಮ್ಮ ನಾಡು ನುಡಿಗಾಗಿ ಹೋರಾಡಿ ದೇಶಕ್ಕಾಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಸೂರ ಸಂಗೊಳ್ಳಿ ರಾಯಣ್ಣನವರ ಆದರ್ಶಗಳನ್ನು ನಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಆ ನಿಟ್ಟಿನಲ್ಲಿ ಹಾಲುಮತ ಸಮಾಜ ಭಾಂದವರು ಯುವ ಪೀಳಿಗೆಗೆ ರಾಯಣ್ಣರ ಆದರ್ಶ ತಿಳಿಸುವುದರ ಜೊತೆಗೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದು ಮನವಿ ಮಾಡಿದ ಅವರು  ತಾವೆಲ್ಲರೂ ಒಗ್ಗಟ್ಟಿನಿಂದ ವೃತ್ತ ನಿರ್ಮಿಸುತ್ತಿರುವುದು ಸಂತೋಷ ತಂದಿದೆ  ನಾನು ಕೂಡ ತಮ್ಮ ಜೊತೆ ಪಾಲ್ಗೊಂಡು ವೃತ್ತ ನಿರ್ಮಾಣಕ್ಕೆ ವೈಯಕ್ತಿಕ ಸಹಾಯಹಸ್ತ ನೀಡುವುದಾಗಿ ಭರವಸೆ ನೀಡಿದರು.

     ಗ್ರಾಮದಲ್ಲಿ ಕಳೆದ ತಿಂಗಳಲ್ಲಿ ಪ್ರಸೂತಿಯಲ್ಲಿ ಬಿಪಿ ಕಡಿಮೆಯಾಗಿ ಶಾಯಿದ ರಿಯಾಜ ಅರಕೇರಿ ಮಹಿಳೆ ಮೃತಪಟ್ಟಿದ್ದು  ಕಾರ್ಯಕರ್ತರೊಂದಿಗೆ ಮನೆಗೆ ಭೇಟಿನೀಡಿ  ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದರು.

- Advertisement -

    ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಮಲ್ಲಣ್ಣ ಸಾಲಿ, ಮಾಜಿ ಜಿ, ಪಂ,ಸದಸ್ಯ ಗುರುರಾಜ ಪಾಟೀಲ್, ಸಂಗನಗೌಡ ಬಿರಾದಾರ, ಶರಣಗೌಡ ಮುದ್ದಾಪ್ಪಗೋಳ , ಅಂಜುಮನ್ ಕಮೀಟಿ ಅಧ್ಯಕ್ಷ ಚಾಂದಸಾಬ ಬಾಗವಾನ, ದುಂಡಪ್ಪ ನಡದಿ, ಮಾಜಿ ತಾ. ಪಂ. ಸದಸ್ಯ ಮಡ್ದಪ್ಪ ಸೊನ್ನದ, ಶಿವಲಿಂಗ ವಗ್ಗಿ, ಸಿದ್ದಗೊಂಡ ಹಿರೇಕುರುಬರ, ಪರಸು ಹಿರೇಕುರುಬರ ಸೇರಿದಂತೆ ಗ್ರಾಮಸ್ಥರು ಇದ್ದರು.

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group