spot_img
spot_img

ರುಕ್ಮಿಣಿ ನಗರ ಕನ್ನಡ ಶಾಲೆ: ಮುಖ್ಯೋಪಾಧ್ಯಾಯರ ಸ್ವಾಗತ, ಸನ್ಮಾನ

Must Read

ಬೆಳಗಾವಿ: ಬೆಳಗಾವಿ ನಗರದ ರುಕ್ಮಿಣಿ ನಗರದ ಸರಕಾರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿoದು ಮಧ್ಯಾಹ್ನ ಶಾಲೆಗೆ ನಿಯುಕ್ತಿಯಾಗಿ ಮುಖ್ಯೋಪಾಧ್ಯಾಯರಾಗಿ ಹಾಜರಾಗಿರುವ ಅರ್ಜುನ ಸೊಂಟಕ್ಕಿ ಯವರ ಸ್ವಾಗತ ಹಾಗೂ ಸಾಹಿತಿ, ಸಂಘಟಕ, ಮಾಸ್ತಮರಡಿಯ ಮಾದರಿ ಪ್ರಾಥಮಿಕ ಕನ್ನಡ ಶಾಲೆಯ ಹಿರಿಯ ಮುಖ್ಯೋಪಾಧ್ಯಾಯರಾದ ಬಸವರಾಜ ಸುಣಗಾರರವರು ಸೇವೆಯಲ್ಲಿ 33ವರ್ಷ ಪೂರ್ತಿ ಗೊಳಿಸಿದ ಹಿನ್ನಲೆಯಲ್ಲಿ ಸನ್ಮಾನ ಮಾಡಿ ಅಭಿನಂದಿಸಲಾಯಿತು.

ಶಿಕ್ಷಕರ ಸಂಘದ ಪ್ರತಿನಿಧಿ ಎಮ್ ಎಸ್ ವಾಲಿ ಯವರು ಅಭಿನಂದಿಸಿದರು.

ಸನ್ಮಾನ ಮಾಡಿ ಮಾತನಾಡಿದ ಹಿರಿಯ ಮುಖ್ಯೋಪಾಧ್ಯಾಯರಾದ ಡಿ ಎಸ್ ಪೂಜಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಳಗಾವಿ ನಗರ ಘಟಕದ ಗೌರವಾಧ್ಯಕ್ಷರಾದ ಕುಮಾರಸ್ವಾಮಿ ಚರಂತಿಮಠ ರವರು ಸೊಂಟಕ್ಕಿ ಯವರನ್ನು ಸ್ವಾಗತಿಸಿ, ಬಸವರಾಜ ಸುಣಗಾರ ರವರ ಶೈಕ್ಷಣಿಕ ಸಾಧನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಅವರು ಸಂಘಟನೆಯಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಚಟುವಟಿಕೆ ಮಾಡಲೆಂದರು.

ಅವರ ಜೊತೆಗೆ ಅವರಿಗೆ ಬೆಂಬಲಿಸಿ ಕಾರ್ಯ ಮಾಡಲು ಗೆಳೆಯರ ಅಪಾರ ಬಳಗವಿದೆ,ತಾವು ಸಹ ಮುಂದೆಯೂ ಅವರಿಗೆ ಸಹಾಯ ಸಹಕಾರ ಬೆಂಬಲ ನೀಡುವದಾಗಿ ಹೇಳಿದರು.

ಕಾರ್ಯಕ್ರಮ ವತಿಯಿಂದ ಸನ್ಮಾನ ಮಾಡಿದ ಗೆಳೆಯ ಮುಖ್ಯೋಪಾಧ್ಯಾಯರ ಪ್ರೀತಿಗೆ ಕೃತಜ್ಞತೆ ವ್ಯಕ್ತಪಡಿಸಿ ಸನ್ಮಾನಿತರಾದ ಅರ್ಜುನ ಸೊಂಟಕ್ಕಿ, ಬಸವರಾಜ ಸುಣಗಾರ ಮಾತನಾಡಿ, ತಮ್ಮ ಸೇವಾವಧಿಯ ಸ್ಮರಣೀಯ ಘಟನೆಗಳನ್ನು ಸ್ಮರಿಸಿ ತಾವು ಮುಂದಿನ ದಿನಮಾನಗಳಲ್ಲಿ ಶೈಕ್ಷಣಿಕ ಕಾರ್ಯಗಳಲ್ಲಿ ನಿಷ್ಠೆ, ಪ್ರಾಮಾಣಿಕತೆ ಯಿಂದ ಕೆಲಸ ಮಾಡುವದಾಗಿ ಹೇಳಿದರು. ಶಾಲೆಗಳ ಸರ್ವತೋಮುಖ ಸುಧಾರಣೆಗೆ ಶ್ರಮಿಸುವ ಸಂಕಲ್ಪ ಮಾಡೋಣ ಎಂದರು.

ಕಾರ್ಯಕ್ರಮದಲ್ಲಿ ನಗರ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾದ ಅರ್ಜುನ ಡಿ ಸಾಗರ, ಶಿಕ್ಷಕಿಯರಾದ ಸುಮಾ ದೊಡಮನಿ, ಗೀತಾ ಜಮಖಂಡಿ , ಆರ್ ಆಯ್ ಯ್ ಮೆಟ್ಯಾಲಮಠ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಘಟಕರಾದ ಕುಮಾರಸ್ವಾಮಿ ಚರಂತಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.ಹಿರಿಯ ಶಿಕ್ಷಕರಾದ ರಾಜೇಂದ್ರಕುಮಾರ ಗೋಶ್ಯಾನಟ್ಟಿ ಸ್ವಾಗತಿಸಿದರು. ನಗರದ ಮುಖ್ಯೋಪಾಧ್ಯಾಯರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ಹಟ್ಟಿಹೊಳಿ ವಂದಿಸಿದರು. ಅಶೋಕ ನಗರ ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಾನಂದ ಹಿತ್ತಲಮನಿ ಕಾರ್ಯಕ್ರಮ ನಿರ್ವಹಿಸಿದರು.

- Advertisement -
- Advertisement -

Latest News

ಉಂಡು ಮಲಗಿದ ಮೇಲೂ ಗಂಡ ಹೆಂಡಿರ ಜಗಳ !

ಸಂಸಾರದ ಬಂಡಿ ಸರಾಗವಾಗಿ ಸಾಗಬೇಕಾದರೆ ಗಂಡ ಹೆಂಡತಿ ಎನ್ನುವ ಎರಡು ಗಾಲಿಗಳು ಸಮಸಮವಾಗಿ ಚಲಿಸಬೇಕು. ಎರಡೂ ಗಾಲಿಗಳಿಗೆ ಪ್ರಾಧಾನ್ಯತೆಯಿದೆ. ಒಂದು ಹೆಚ್ಚು ಒಂದು ಕಡಿಮೆ ಇಲ್ಲ....
- Advertisement -

More Articles Like This

- Advertisement -
close
error: Content is protected !!