- Advertisement -
ಅಯೋಧ್ಯಾ – ಬರಲಿರುವ ೨೨ ನೇ ಜನವರಿಯಂದು ಸಂಜೆ ಇಡೀ ದೇಶ ಝಗಮಗಿಸಬೇಕು. ಅಂದು ಎಲ್ಲಾ ದೇಶವಾಸಿಗಳು ಅಯೋಧ್ಯಾ ನಗರಕ್ಕೆ ಆಗಮಿಸಲು ಸಾಧ್ಯವಾಗುವುದಿಲ್ಲ ಆದ್ದರಿಂದ ಎಲ್ಲರೂ ತಂತಮ್ಮ ಮನಗಳಲ್ಲಿ ದೀಪ ಬೆಳಗಿಸಿ ಅಂದಿನ ಸಂಜೆ ಝಗಮಗಿಸುವಂತೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ದೇಶವಾಸಿಗಳಲ್ಲಿ ಮನವಿ ಮಾಡಿಕೊಂಡರು.
ಉತ್ತರ ಪ್ರದೇಶದ ಅಯೋಧ್ಯಾ ನಗರಿಯಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಬೃಹತ್ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಜ. ೧೪ ಮಕರ ಸಂಕ್ರಮಣದ ದಿನದಿಂದ ರಾಮ ಮಂದಿರ ಉದ್ಘಾಟನಾ ದಿನವಾದ ದಿ. ೨೨ ರವರೆಗೆ ಇಡೀ ದೇಶದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಬೇಕು, ದೇಶದ ಪ್ರತಿಯೊಂದು ದೇವ ಮಂದಿರವೂ ಸ್ವಚ್ಛಗೊಳ್ಳಬೇಕು ಎಂದು ಕರೆ ನೀಡಿದರು.