ಕವನ: ಪ್ರತೀಕ್ಷೆಯ ಲಹರಿ….

Must Read

ಪ್ರತೀಕ್ಷೆಯ ಲಹರಿ….

ಮೀನಾಕ್ಷಿಯ ಮನದೊಳು
ಪ್ರತೀಕ್ಷೆಯ ನೆರಳು
ಸಾಗುತಿದೆ ಹಗಲಿರುಳು
ಸುಂದರ ಕನಸಿನೊಳು||

ಕಟ್ಟೆಯೊಡೆದ ಭಾವನೆಗೆ
ಚೆಡಪಡಿಸಿದಳು ಭಾಮೆಯು
ನೀಲಸೀರೆ ಧರಿಸಿ ತನುವಿಗೆ
ಸ್ವರ್ಣಹಾರ ಹಾಕಿ ಚೆಲುವೆಯು||

ಮನೆದೇವರಿಗೆ ದೀಪ ಹಚ್ಚಿ
ಮನದೇವರಿಗೆ ಕಾದಳು ನೆಚ್ಚಿ
ಗಿಣಿಮೂಗಿಗೆ ನತ್ತನು ಚುಚ್ಚಿ
ಜೇನಧರಗಳಿಗೆ ಕೆಂಬಣ್ಣ ಹಚ್ಚಿ||

ಪ್ರತಿನಿಮಿಷ ಮನಹರುಷ
ಹೃದಯದಲಿ ಮಹಾಪುರುಷ
ಆಶೆಕಂಗಳಲಿ ನಲ್ಲನುತ್ಸಾಹ
ನಲ್ಲೆಯಲಿಲುಲ್ಬಣಿಸಿದೆ ಮೋಹ||

ಸಂಧ್ಯಾಕಾಲದಿ ಬಾಗಿಲತೆರೆದು
ನೂಪುರಸದ್ದದು ನಲ್ಲನಿಗೆ ತಲುಪಿ
ಗೋಪುರ ಗಂಟೆಯು ಮೊಳಗಿತು
ಚೆಂದದ ಚಂದ್ರಮ ಬಂದಿಹನು ||

ನೊಂದಿಹ ಮನದಿ ಪ್ರೀತಿಚಿಲುಮೆ
ತಂದಿಹ ನಲ್ಲೆಗೆ ಸವಿ ಜೇನಿನೊಲುಮೆ
ಹೂವಲಿ ಗಂಧವು ಬೆರೆತಂತೆ
ಹಾಲಲಿ ಸಕ್ಕರೆ ಕಲೆತಂತೆ ಬೆರೆತರು
ಪ್ರೇಮಿಗಳು ಜಗವ ಮರೆತಂತೆ.||

ಶ್ರೀ ಈರಪ್ಪ ಬಿಜಲಿ

1 COMMENT

  1. ಈ ಸಾಮಾಜಿಕ ಜಾಲತಾಣದ ಸಂಪಾದಕರಿಗೆ.ಕವನವನ್ನು ಪ್ರಕಟ ಮಾಡಿದ್ದಕ್ಕಾಗಿ ಹೃತ್ಪೂರ್ವಕವಾದ ಧನ್ಯವಾದಗಳು👏ಸರ

Comments are closed.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group