spot_img
spot_img

ವಾರ್ಷಿಕ ಸ್ನೇಹ ಸಮ್ಮೇಳನ ವಿದ್ಯಾಭ್ಯಾಸದ ಅವಲೋಕನ ವೇದಿಕೆಯಾಗಬೇಕು

Must Read

- Advertisement -

ಸಿಂದಗಿ: ವಾರ್ಷಿಕ ಸ್ನೇಹ ಸಮ್ಮೇಳನ ಎನ್ನುವುದು ಕುಣಿತಕ್ಕೆ ಚೀರಾಟಕ್ಕೆ ವೇದಿಕೆಯಾಗದೆ ಕಾಲೇಜಿನಲ್ಲಿ ನಡೆದ ವಿದ್ಯಾಭ್ಯಾಸದ ಅವಲೋಕನ ಮಾಡುವ ಸಮ್ಮಿಲನಕ್ಕೆ ವೇದಿಕೆಯಾಗಬೇಕು ಎಂದು ಮುತ್ತಗಿಯ ರಾಮನರಸಿಂಹ ಸಂಸ್ಕೃತ ವಿದ್ಯಾಲಯದ ಕುಲಪತಿ ನರಹರಿ ಆಚಾರ್ಯ ಮುತ್ತಗಿ ಹೇಳಿದರು.

ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯಅತಿಥಿಗಳಾಗಿ ಅವರು ಮಾತನಾಡಿ, ಸಂಸ್ಕೃತದಲ್ಲಿ ಸಂ.ಎಂದರೆ ಚೆನ್ನಾಗಿ ಎಂದರ್ಥ. ಇಂಗ್ನೀಷ ನ ಸಮ್ ಎಂದರೆ ಕೆಲವು ಎಂದರ್ಥ. ನಮ್ಮಲ್ಲಿ ಕೆಲವು ವಿಷಯಗಳು ವಿಲೀನವಾಗಿ ಬದಲಾವಣೆ ಆದಾಗ ಮಾತ್ರ ವಾರ್ಷಿಕ ಸ್ನೇಹ ಸಮ್ಮೇಳನವು ಸಾರ್ಥಕವಾಗುತ್ತದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅನೇಕ ವಿಷಯಗಳ ಬಗ್ಗೆ ಅಧ್ಯಯನ ಮಾಡಬೇಕು. ಪುಸ್ತಕದ ವಿದ್ಯೆ ಮಸ್ತಕಕ್ಕೆ ಬಂದರೆ ಅವನು ವಿದ್ಯಾವಂತ ಆದರೆ ಮಸ್ತಕಕ್ಕೆ ಬಂದ ವಿದ್ಯೆ ಸಿದ್ಧಿ ಮಾಡಿಕೊಂಡರೆ ಮಾತ್ರ ಅವನು ಜ್ಞಾನಿ. ಇಂತಹ ಅನೇಕ ವಿಷಯಗಳು ವಿಲೀನವಾಗಬೇಕು ಆದರೆ ಇಂದಿನ ಸಮಾಜದಲ್ಲಿ ನಾವು ಕೇವಲ ವಿದ್ಯಾವಂತರಾಗೋದಕ್ಕೆ ಮಾತ್ರ ಬದುಕುತ್ತಿದ್ದೇವೆ ವಿನಹ ಜ್ಞಾನದ ಕಡೆಗೆ ಹೋಗುತ್ತಿಲ್ಲ. ಆದಕಾರಣ ಜ್ಞಾನಿಗಳಾಗಬೇಕೆ ಹೊರತು ಕೇವಲ ವಿದ್ಯಾವಂತರಾಗಬಾರದು ಆ ನಿಟ್ಟಿನಲ್ಲಿ ನಮ್ಮ ಹೆಜ್ಜೆ ಸಾಗಬೇಕು. ಹತ್ತಾರು ಶಿಕ್ಷಕರಲ್ಲಿ ಹತ್ತಾರು ವಿದ್ಯಾರ್ಥಿಗಳಿರುತ್ತಾರೆ ಹಾಗೆ ಹತ್ತಾರು ಕಲ್ಲುಗಳಲ್ಲಿ ಒಂದು ಕಲ್ಲು ಮಾತ್ರ ರಾಮನ ಅಯೋಧ್ಯೆಗೆ ಮೂರ್ತಿ ಪ್ರತಿಷ್ಠಾಪನೆ ಮಾಡಲಿಕ್ಕೆ ಸಾಧ್ಯವಾಯಿತು. ಹಾಗೆ ಹತ್ತಾರು ವಿದ್ಯಾರ್ಥಿಗಳು ಒಬ್ಬೊಬ್ಬ ರಾಮನಂತೆ ಗೋಚರಿಸಬೇಕು. ಹತ್ತಾರು ವಿದ್ಯಾರ್ಥಿಗಳ ಬದುಕು ಸಾರ್ಥಕವಾಗಬೇಕು ಎಂದು ಸಲಹೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಸಾರಂಗಮಠದ ಗುರುಕುಲ ಭಾಸ್ಕರ, ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿ ವಿದ್ಯಾರ್ಥಿ ಜೀವನವನ್ನು ವಿಶ್ವಾಸದಿಂದ ಗೆಲ್ಲಬೇಕು ವಿಶ್ವಾಸ ಇಲ್ಲದೆ ಹೋದರೆ ವಿದ್ಯಾರ್ಥಿ ಜೀವನದಲ್ಲಿ ಏನೂ ಸಾಧನೆ ಮಾಡಲು ಸಾಧ್ಯವಿಲ್ಲ ಯಾವ ವಿದ್ಯಾರ್ಥಿಯಲ್ಲಿ ವಿಶ್ವಾಸವಿರುತ್ತದೆಯೋ ಆ ವಿದ್ಯಾರ್ಥಿ ದಿನನಿತ್ಯ ಯಶಸ್ಸನ್ನು ಕಾಣಲಿಕ್ಕೆ ಸಾಧ್ಯವಾಗುತ್ತದೆ. ನಮ್ಮ ಗುರಿ ಸಾಧನೆಗೆ ಆತ್ಮವಿಶ್ವಾಸ ಬಹಳ ಮುಖ್ಯ ಎಂದರು.

- Advertisement -

ಈ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ವಿಮಲಕಾಂತ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಪ.ವಿ.ವ.ಸಂಸ್ಥೆಯ ನಿರ್ದೇಶಕರಾದ ನೆಹರು ಪೋರವಾಲ, ಡಾ. ಬಿ.ಸಿ.ಉಪ್ಪಿನ, ಸಮ್ಮೇಳನದ ಕಾರ್ಯಾಧ್ಯಕ್ಷ ಸುರೇಶ ಜಾಧವ, ಪ್ರಧಾನ ಕಾರ್ಯದರ್ಶಿ ಐಶ್ವರ್ಯ ಯಂಕಂಚಿ ವೇದಿಕೆ ಮೇಲಿದ್ದರು.

ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ಎನ್.ಜಿ.ಸಜ್ಜನ, ಕೆ.ಎಚ್.ಸೋಮಾಪೂರ, ಹಿರಿಯ ಉಪನ್ಯಾಸಕರಾದ ಬಿ.ಎಂ.ಸಿಂಗನಳ್ಳಿ, ಎನ್.ಬಿ.ಪೂಜಾರಿ, ಶಿವಶರಣ ಬೂದಿಹಾಳ, ಡಾ. ಶರಣು ಜೋಗೂರ, ಪಿ.ವಿ.ಮಹಲಿನಮಠ, ವ್ಹಿ.ಪಿ.ನಂದಿಕೋಲ, ಎಸ್.ಜಿ.ಮಾರ್ಸನಳ್ಳಿ, ಬಿ.ಬಿ.ಜಮಾದಾರ, ಸಂಗಮೇಶ ಚಾವರ್, ರೋಹಿತ ಸುಲ್ಪಿ, ಎನ್.ಎಂ.ಶೆಳ್ಳಗಿ, ಚಂದ್ರು ಬಬಲೇಶ್ವರ, ಅಡಿವೆಪ್ಪಾ ದಸ್ಮಾ, ಆರ್.ಎಂ.ಕೊಳ್ಳೂರೆ, ಐ.ಎಸ್.ಶಿವಸಿಂಪಿಗೇರ್, ಗವಿಸಿದ್ದಪ್ಪ ಆನೆಗುಂದಿ, ರಾಹುಲ ನಾರಾಯಣಕರ್, ಪ್ರಸನ್ನ ಜೋಗೂರ, ಪಿ.ಎಸ್.ಸರನಾಡಗೌಡ, ಎಂ.ಐ.ಮುಜಾವರ್, ವ್ಹಿ.ಕೆ.ಹಿರೇಮಠ, ಮೇಘಾ ಕಮರಡ್ಡಿ, ಸುನೀಲ ಪಾಟೀಲ, ಲಕ್ಷ್ಮೀ ಕನ್ನೊಳ್ಳಿ, ಸ್ನೇಹಾ ಕುಲಕರ್ಣಿ, ಪ್ರಿಯಾಂಕ ಪಡಶೆಟ್ಟಿ ಸೇರಿದಂತೆ ಇನ್ನಿತರರು ಇದ್ದರು.

- Advertisement -
- Advertisement -

Latest News

ವಚನ ವಿಶ್ಲೇಷಣೆ : ಕಾಯದ ಜೀವದ ಹೊಲಿಗೆ

*ಕಾಯದ ಜೀವದ ಹೊಲಿಗೆ* ----------------------------------- ದೇಹಭಾವವಳಿದಲ್ಲದೆ ಜೀವಭಾವವಳಿಯದು. ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು. ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು. ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಇದು ಕಾರಣ; ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ ಗುಹೇಶ್ವರಲಿಂಗದ...
- Advertisement -

More Articles Like This

- Advertisement -
close
error: Content is protected !!
Join WhatsApp Group