spot_img
spot_img

ರಾಜ್ಯದಿಂದ ಬರುವ ಪತ್ರಕರ್ತ ಮಿತ್ರರಿಗೆಲ್ಲ ದಾವಣಗೆರೆ ಬೆಣ್ಣೆ ದೋಸೆ ಬಡಿಸಿ ಆತಿಥ್ಯಕ್ಕೆ ಚಾಲನೆ

Must Read

- Advertisement -

ರಾಜ್ಯಮಟ್ಟದ ಪತ್ರಕರ್ತರ ಬೃಹತ್ ಸಮ್ಮೇಳನ ಆರಂಭ

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಇದೆ ಪ್ರಥಮ ಬಾರಿಗೆ 31 ವರ್ಷಗಳ ನಂತರ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವ ಹಾಗೂ ದಾವಣಗೆರೆ ಜಿಲ್ಲಾ ಕಾನಿಪ ಸಂಘದ ಆತಿಥ್ಯ ಮತ್ತು ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಸಹಯೋಗದಲ್ಲಿ ನಗರದಲ್ಲಿ 38ನೇ ರಾಜ್ಯಮಟ್ಟದ ಪತ್ರಕರ್ತರ ಬೃಹತ್ ಸಮ್ಮೇಳನದ ಕ್ಷಣ ಗಣನೆ ಆರಂಭವಾಗಿದೆ ಎಂದು ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಇ. ಎಂ. ಮಂಜುನಾಥ್ ತಿಳಿಸಿದರು.

ದಾವಣಗೆರೆ ನಗರದ ಕಾರ್ಯಕ್ರಮ ನಡೆಯುವ ಸ್ಥಳವಾದ ಶಾಮನೂರ್ ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಸ್ಥಳ ಪರಿಶೀಲನೆ ನಡೆಸಿದರು. 

- Advertisement -

ಈ ವೇಳೆ ಮಾತನಾಡಿದ ಇ.ಎಂ. ಮಂಜುನಾಥ್, ಹಿಂದೆ ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ದಾವಣಗೆರೆಯು ತಾಲ್ಲೂಕು ಆಗಿದ್ದಾಗ 1992ರಲ್ಲಿ ನಡೆದಿತ್ತು. ಇದೀಗ ದಾವಣಗೆರೆ ಜಿಲ್ಲೆಯಾದ ಮೇಲೆ ಪ್ರಥಮ ಬಾರಿಗೆ ರಾಜ್ಯಮಟ್ಟದ ಸಮ್ಮೇಳನದ ಮೂಲಕ ರಾಜ್ಯದ ಎಲ್ಲಾ ಪತ್ರಕರ್ತರ ಮಿತ್ರರ ಸಮ್ಮಿಲನವಾಗುವಂತಹ ಕಾರ್ಯಕ್ರಮ ಇದಾಗಿದೆ.

ಫೆಬ್ರವರಿ 3 ಮತ್ತು 4ರಂದು ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಏರ್ಪಾಡಾಗಿರುವ ಈ ಸಮ್ಮೇಳನದಲ್ಲಿ ರಾಜ್ಯದ 31 ಜಿಲ್ಲೆಗಳಿಂದ ಸುಮಾರು ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಮಾಧ್ಯಮ ಮಿತ್ರರು ಭಾಗವಹಿಸಲಿದ್ದು, ಈಗಾಗಲೇ ನೋಂದಣಿ ಕಾರ್ಯ ಆರಂಭವಾಗಿದೆ. ಸಮ್ಮೇಳನದಲ್ಲಿ ಭಾಗವಹಿಸಲು ರಾಜ್ಯದಿಂದ ಪತ್ರಕರ್ತರು ಈಗಾಗಲೇ ದಾವಣಗೆರೆಗೆ ಆಗಮಿಸಿದ್ದಾರೆ. ರಾಜ್ಯದಿಂದ ಬರುವ ಪತ್ರಕರ್ತರ ಮಿತ್ರರಿಗೆಲ್ಲ ಆತಿಥ್ಯ ನೀಡಲು ಸಜ್ಜುಗೊಂಡಿದ್ದೇವೆ.

ಫೆಬ್ರವರಿ 3ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಅದಕ್ಕೂ ಮುನ್ನ ಬೆಳಗ್ಗೆ 9 ಗಂಟೆಗೆ ಪತ್ರಕರ್ತರ ಬೃಹತ್ ಮೆರವಣಿಗೆ ನಡೆಯಲಿದೆ. ಪತ್ರಕರ್ತರಿಗೆ ಸಂಬಂಧಿಸಿದಂತೆ ನಾನಾ ವಿಶೇಷ ಗೋಷ್ಠಿಗಳು ಹಿರಿಯ ಪತ್ರಕರ್ತರಿಂದ ನಡೆಯಲಿವೆ ಎಂದು ಸಮ್ಮೇಳನ ಕಾರ್ಯಕ್ರಮದ ಕುರಿತಾಗಿ ವಿವರಣೆ ನೀಡಿದರು.

- Advertisement -

ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ಕೆ ಏಕಾಂತಪ್ಪ ಮಾತನಾಡಿ, ಬರುವ ಫೆಬ್ರವರಿ 3 ಮತ್ತು 4ರಂದು ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಏರ್ಪಾಡಾಗಿರುವ ಈ ಸಮ್ಮೇಳನದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸುಮಾರು ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಮಾಧ್ಯಮ ಮಿತ್ರರು ಭಾಗವಹಿಸಲಿದ್ದು, ಒಟ್ಟಿನಲ್ಲಿ ಈ ಸಮ್ಮೇಳನವು ಪತ್ರಕರ್ತರ ಹಬ್ಬ – ಜಾತ್ರೆ ಎಂತಾಗಲಿದೆ ಎಂದು ಅವರು ಬಣ್ಣಿಸಿದರು.

ಸಮ್ಮೇಳನವು 31 ವರ್ಷಗಳ ಹಿಂದೆ ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ತಾಲ್ಲೂಕು ಆಗಿದ್ದ ದಾವಣಗೆರೆಯಲ್ಲಿ 1992ರಲ್ಲಿ ರಾಜನಹಳ್ಳಿ ಹನುಮಂತಪ್ಪ ಧರ್ಮಶಾಲೆಯಲ್ಲಿ ನಡೆದಿತ್ತು. ಈಗ ದಾವಣಗೆರೆ ರಚನೆಯಾದ ನಂತರ ಇದೇ ಪ್ರಪ್ರಥಮ ಬಾರಿಗೆ ಸಮ್ಮೇಳನ ನಡೆಯುತ್ತಿರುವುದು ದಾವಣಗೆರೆ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.

ರಾಜ್ಯದಿಂದ ಆಗಮಿಸಿರುವ ಪತ್ರಕರ್ತರಿಗೆ ಮುಂಜಾನೆ ಉಪಹಾರಕ್ಕೆ ದಾವಣಗೆರೆಯ ಬೆಣ್ಣೆ ದೋಸೆ ಬಡಿಸುವ ಮೂಲಕ ಸ್ವಾಗತಿಸಲಾಯಿತು.

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group