‘ನಿತ್ಯೋತ್ಸವ ಕವಿ’ ಎಂದೇ ಪ್ರಸಿದ್ಧರಾದ ನಿಸಾರ್ ಅಹಮದ್ ರವರು ನವೋದಯ ಹಾಗೂ ನವ್ಯ ಕಾವ್ಯ ಪರಂಪರೆಗಳಲ್ಲಿ ಉತ್ತಮ ಅಂಶಗಳನ್ನು ಪಡೆದು, ತಮ್ಮ ಕಾವ್ಯಗಳಲ್ಲಿ ಪ್ರಯೋಗಿಸಿ ತಮ್ಮದೇ ಆದ ವೈಶಿಷ್ಟ್ಯವನ್ನು ಬೆಳೆಸಿದ ಶ್ರೇಷ್ಠ ಕವಿಗಳಲ್ಲೊಬ್ಬರಾಗಿದ್ದಾರೆ.
1974 ರಲ್ಲಿ ಪ್ರಕಟವಾದ ‘ನಿತ್ಯೋತ್ಸವ’ ಕವನ ಸಂಕಲನ, ನಿಸಾರ್ ರಿಗೆ ಬಹಳ ಜನಪ್ರಿಯತೆ ತಂದು ಕೊಟ್ಟಿದೆ. ಇಂದು ಕೂಡ ಕನ್ನಡದ ಹಬ್ಬ ಎಲ್ಲೇ ನಡೆದರು ನಿತ್ಯೋತ್ಸವ ಕವಿತೆಯ ಗಾಯನವಿಲ್ಲದೆ ಅದು ಅಪೂರ್ಣ.
ನಿಸಾರರ ಅನೇಕ ಕವಿತೆಗಳು ಸುಗಮ ಸಂಗೀತದ ಧ್ವನಿ ಸುರುಳಿಗಳ ಮೂಲಕ ಕನ್ನಡಿಗರನ್ನು ತಲುಪಿವೆ. ಜನಪ್ರಿಯತೆ ಗಳಿಸಿರುವ ‘ಸುಮಧುರ’ ಮತ್ತು ‘ನವೋಲ್ಲಾಸ’ ಕನ್ನಡದ ಮೊದಲ ಜೋಡಿ ಧ್ವನಿ ಸುರುಳಿಗಳು. ಈವರೆಗೆ ಅವರ ಕವನಗಳ ಏಳು ಧ್ವನಿ ಸುರುಳಿಗಳು ಬಿಡುಗಡೆಗೊಂಡಿವೆ. ಇವರ
ನಿಜನಾಮ ಕೊಕ್ಕರೆ ಹೊಸಳ್ಳಿ ಶೇಖಹೈದರ್ ನಿಸಾರ್ ಅಹಮದ್.
- ಜನನ: ಫೆಬ್ರವರಿ 5, 1936.
- ನಿಧನ: ಮೇ 3, 2020
1978 ರಲ್ಲಿ ನಿಸಾರ್ ಅವರ ಮೊದಲ ಕ್ಯಾಸೆಟ್ ‘ನಿತ್ಯೋತ್ಸವ’ ಹೊರಬಂತು. ನಿಸಾರ್ ರಚನೆಯ ಕವನಗಳನ್ನು ಹೊತ್ತು 13 ಆಡಿಯೊ ಆಲ್ಬಂಗಳು ಪ್ರಕಟವಾಗಿವೆ.
🌷ಪ್ರಶಸ್ತಿ – ಪುರಸ್ಕಾರಗಳು.
☘ 1981 ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ
☘ 1991 ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ
☘ 1994 ಕರ್ನಾಟಕ ನಾಟಕ ಅಕಾಡಮಿ ಫೆಲೋಷಿಪ್
☘ 2003 ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ನಾಡೋಜ ‘ ಪುರಸ್ಕಾರ
☘ 2005 ಧಾರವಾಡ ವಿಶ್ವವಿದ್ಯಾಲಯದಿಂದ – ಗೌರವ ಡಾಕ್ಟರೇಟ್
☘ 2006 ‘ ಮಾಸ್ತಿ ‘ ಪ್ರಶಸ್ತಿ
☘ 2006 ಕರ್ನಾಟಕ ಸರ್ಕಾರ ನೀಡುವ ಡಿ.ದೇವರಾಜ ಅರಸು ಪ್ರಶಸ್ತಿ .
☘ 2008 ಪದ್ಮಶ್ರೀ ಪ್ರಶಸ್ತಿ
☘ 2017 ಪಂಪಾ ಪ್ರಶಸ್ತಿ
☘ ಶಿವಮೊಗ್ಗದಲ್ಲಿ ನಡೆದ 73ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ