spot_img
spot_img

ವೇದಾಂತ ಫೌಂಡೇಶನ್ ನ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ ಸಮಾರಂಭ

Must Read

spot_img
- Advertisement -

ದಿ.17ಶನಿವಾರದಂದು ಪೊಲೀಸ್, ಶಿಕ್ಷಕರು ಮತ್ತು ಪತ್ರಕರ್ತರಿಗೆ ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನ.

ಬೆಳಗಾವಿ: ವೇದಾಂತ ಫೌಂಡೇಶನ್ ವತಿಯಿಂದ ನೀಡಲಾಗುವ “ವೇದಾಂತ ಎಕ್ಸಲೆನ್ಸ್ ಅವಾರ್ಡ್ ” ಪ್ರದಾನ ಕಾರ್ಯಕ್ರಮವನ್ನು ಶನಿವಾರ ದಿ.17ರಂದು ಬೆಳಗ್ಗೆ 11.30ಕ್ಕೆ ಆಯೋಜಿಸಲಾಗಿದೆ. 

ಅಧ್ಯಕ್ಷ ಸ್ಥಾನದಲ್ಲಿ ವಿಶ್ವ ಭಾರತ ಸೇವಾ ಸಮಿತಿಯ ಅಧ್ಯಕ್ಷ ಶ್ರೀ ವಿಜಯ ನಂದಿಹಳ್ಳಿಯವರು ಉಪಸ್ಥಿತರಿರುವರು. ಕಾರ್ಯಕ್ರಮವನ್ನು ಮಹಿಳಾ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಗಿದೆ.

- Advertisement -

ಕಾರ್ಯಕ್ರಮ ದ  ಉದ್ಘಾಟನೆಯನ್ನು ಸಮೃದ್ಧಿ ಸೇವಾ ಸಂಸ್ಥೆಯ ಕಾರ್ಯದರ್ಶಿಗಳಾದ  ವೀರೇಶ ಕಿವಡಸಣ್ಣವರ, ಶಿಕ್ಷಕ ಸಂಘಟನೆಯ ಜಿಲ್ಲಾಧ್ಯಕ್ಷರಾದ  ಜಯಕುಮಾರ ಹೆಬ್ಬಳಿಯವರು ನೆರವೇರಿಸಲಿರುವರು. ಮಾರ್ಕಂಡೆಯ  ಸಕ್ಕರೆ ಕಾರ್ಖಾನೆಯ ಸಂಚಾಲಕರಾದ ಅವಿನಾಶ ಪೋತದಾರ್ ಮಾರ್ಗದರ್ಶನ ಮಾಡುವರು.

ಮುಖ್ಯ ಅತಿಥಿಗಳಾಗಿ ರಮೇಶ ಅನಂದಾಚೆ, ಬೆಳಗಾವಿ ನಗರವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಲೀಲಾವತಿ ಹಿರೇಮಠ, ನಗರ ಶಿಕ್ಷಣ ಸಂಘಟನೆಯ ಅಧ್ಯಕ್ಷರಾದ ಬಾಬು ಸೊಗಲನ್ನವರ, ಐ. ಡಿ. ಹಿರೇಮಠ್, ಪ್ರಾಂಶುಪಾಲರಾದ ಕವಿತಾ ಪರಮಾಣಿಕ ಮುಂತಾದವರು ಉಪಸ್ಥಿತರಿರುವರು.

- Advertisement -

ಈ ಸಂಧರ್ಭದಲ್ಲಿ ವೇದಾಂತ ಫೌಂಡೇಶನ್ ನಿಂದ ನವರತ್ನ ಗಳಿಗೆ ಪ್ರಶಸ್ತಿಗಳನ್ನು ನೀಡಲಾಗುವುದು. ಈ ಸಮಾವೇಶದಲ್ಲಿ ಶಿಕ್ಷಕರು, ಪೊಲೀಸರು, ಪತ್ರಕರ್ತರು ಭಾಗವಹಿಸುವರು.

ಪುರಸ್ಕೃತ ಶಿಕ್ಷಕರು : ಸಿ. ವೈ. ಪಾಟೀಲ್ (ಟಿಳಕವಾಡಿ ಹೈ ಸ್ಕೂಲ್ ), ಬೇಬಿ ಅಸ್ಮಾ ನಾಯಿಕ್ (ಸ. ಪ್ರಾ. ಶಾ. ಶಾಹೂನಗರ್ )ಅನುರಾಧ ತಾರೀಹಾಳಕರ (ಸ. ಪ್ರಾ. ಶಾ. ಬಸುರ್ತೆ ), ಸುಜಾತಾ ಲೋಖಂಡೇ (ಸ. ಪ್ರಾ. ಶಾ. ನಂ.24). ಪತ್ರಕರ್ತರು :ರಾಜಶೇಖರ ಪಾಟೀಲ್ (ಇನ್ ನ್ಯೂಸ್ ವಾಹಿನಿ, ಬೆಳಗಾವಿ ), ಶಿವಾಜಿ ಶಿಂಧೆ (ದೈ. ಪುಢಾರಿ ), ಸುನಿಲ್ ಪಾಟೀಲ್( ದ ನ್ಯೂ. ಇಂಡಿಯನ್ ಎಕ್ಸ್ ಪ್ರೆಸ್ ),

ಪೊಲೀಸರು :ಕೆಂಪಣ್ಣ ದೊಡಮನಿ (ಎ. ಪಿ. ಎಂ. ಸಿ ಪೊಲೀಸ್ ಠಾಣೆ ), ಕಾಶಿನಾಥ್ ಇರಗಾರ (ಉತ್ತರ ವಿಭಾಗ ರಹದಾರಿ ಪೊಲೀಸ್ ಠಾಣೆ )

ಪುರಸ್ಕಾರವು ಸನ್ಮಾನ ಪತ್ರ, ಶಾಲು, ಹಾರ ಮತ್ತು ನಗದು ಹಣವನ್ನು ಹೊಂದಿದೆ ಎಂದು ಫೌಂಡೇಶನ್ ನ ಅಧ್ಯಕ್ಷ ಶ್ರೀ ಸತೀಶ್ ಪಾಟೀಲ್, ಉಪಾಧ್ಯಕ್ಷ ಎನ್. ಡಿ. ಮಾದರ್, ಹಾಗೂ ಈಶ್ವರ ಪಾಟೀಲ್ ಮಾಹಿತಿ ನೀಡಿದರು.

- Advertisement -
- Advertisement -

Latest News

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group