ಧಾರವಾಡ: ರವಿವಾರ ಬೆಳಿಗ್ಗೆ 9.30 ಕ್ಕೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ, ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ, ಚೇತನ ಫೌಂಡೇಶನ್ ಕರ್ನಾಟಕ ವತಿಯಿಂದ ಅಖಿಲ ಕರ್ನಾಟಕ ಶಿಕ್ಷಕರ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಫೌಂಡೇಶನ್ ನ ಅಧ್ಯಕ್ಷರಾದ ಚಂದ್ರಶೇಖರ ಮಾಡಲಗೇರಿ ಹೇಳಿದರು.
ಧಾರವಾಡದ ಜರ್ನಲಿಸ್ಟ ಗಿಲ್ಡನಲ್ಲಿ ಮಾದ್ಯಮ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಸಂಪಾದಿತ ಕೃತಿ ದಿವ್ಯ ದರ್ಶನ (ಡಾ.ಪ್ರಹ್ಲಾದ್ ಬೋಯಿಯವರ ಷಷ್ಠ್ಯಬ್ಧಿ ಸಮಾರಂಭದ ನಿಮಿತ್ತ)ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಬಿಡುಗಡೆ ಮಾಡುವರು. ಆ ದಿನ ಬೆಳಿಗ್ಗೆ 9.30 ಕ್ಕೆ ಸಮ್ಮೇಳನವನ್ನು ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಹಾಪೋಷಕರಾದ ಎಂ ಐ ಮುನವಳ್ಳಿ ಉದ್ಘಾಟಿಸುವರು, ಸಮ್ಮೇಳನದ ಅಧ್ಯಕ್ಷತೆಯನ್ನು ಶಿಕ್ಷಕ ಸಾಹಿತಿ ನವಲಗುಂದ ತಾಲೂಕಿನ ಮೊರಬ ಗ್ರಾಮದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯ ಶಿಕ್ಷಕ ಮಲ್ಲಿಕಾರ್ಜುನ ಉಪ್ಪಿನ ವಹಿಸುವರು, ಧಾರವಾಡ ನಗರದ ಕ್ಷೇತ್ರಶಿಕ್ಷಣಾಧಿಕಾರಿ ಅಶೋಕಕುಮಾರ ಸಿಂದಗಿ, ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನ ಧಾರವಾಡದ ಡಯಟ್ ಉಪನ್ಯಾಸಕರು ಡಾ,ರೇಣುಕಾ ಅಮಲಝರಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಜಯಶ್ರೀ ವರೂರ ಕರ್ನಾಟಕ ಸರಕಾರಿ ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯ ಗೌರವಾದ್ಯಕ್ಷರಾದ ಎಲ್ ಐ ಲಕ್ಕಮ್ಮನವರ ರಾಜ್ಯಾದ್ಯಕ್ಷರಾದ. ಅಶೋಕ ಸಜ್ಜನ ಮಲ್ಲಯ್ಯ ಹಿರೇಮಠ ಡಾ, ಪಂಡಿತ ಶ್ರೀಕಾಂತ್ ಚಿಮಲ್ ಆರ್ ಎಂ ಕಮ್ಮಾರ ಎಂ ಆರ್ ಕಬ್ಬೇರ ಶಿವಮೊಗ್ಗದ ಹಾಲೇಶ ನವುಲೆ ಸತೀಶ ಪಿಕೆ ಶಂಕರ ಘಟ್ಟಿ ಪಿರೋಜ ಗುಡೇನಕಟ್ಟಿ ನಾರಾಯಣ ಎನ್ ವಾಯ್ ಬಿ ಕಡಕೋಳ ಡಾ, ಪ್ರಹ್ಲಾದ ಭೋಯಿ ಎಂ ಎಸ್ ಪಾಟೀಲ ಮುಂತಾದವರು ಉಪಸ್ಥಿತರಿರುವರು. ಡಾ, ಪ್ರಹ್ಲಾದ ಭೋಯಿ ಅವರ ಅಭಿನಂದನಾ ಗ್ರಂಥವನ್ನು , ಶಿಕ್ಷಕರತ್ನ ಪ್ರಶಸ್ತಿಯನ್ನು ಬೆಂಗಳೂರಿನ, ಸಾಧನಾ ಐಎಎಸ್ ಕೋಚಿಂಗ ಕೇಂದ್ರದ ಮುಖ್ಯಸ್ಥರು ಕೆ ಸಿ ಜೋತಿ ನೆರವೇರಿಸುವರು, ಸಮ್ಮೇಳನದಲ್ಲಿ ಗುರುವಂದನ ಕವಿಘೋಷ್ಠಿ ಜರುಗಲಿದೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗರಮಡುವು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಳೆಇಟಗಿ, ಸರಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆ ಚಿಕಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಧರ್ಮಾಕಾಲನಿ ಮುಂಡಗೋಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಡಹಳ್ಳಿ ಈ ಶಾಲೆಗಳಿಗೆ ಅತ್ಯುತ್ತಮ ಶಾಲೆ ಪ್ರಶಸ್ತಿ ಮತ್ತು ಬಾಗಲಕೋಟೆಯ ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಸುನಂದಾ ಜಾಲವಾದಿ, ವಿದ್ಯಾ ಸಣ್ಣಕ್ಕಿ ಶರಣಪ್ಪಗೌಡ ಚಿಕ್ಕನಗೌಡರ ಶೈಲಾ ಶಂಕರ ಬಡಿಗೇರ ಇ ಎನ್ ತಿಪ್ಪೇಸ್ವಾಮಿ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಜನ ಶಿಕ್ಷಕರಿಗೆ ಶಿಕ್ಷಕರತ್ನ ಗೌರವ ಪ್ರಶಸ್ತಿ ಪ್ರಧಾನ ಮಾಡಲಾಗುದು ಎಂದು ಚಂದ್ರಶೇಖರ ಮಾಡಲಗೇರಿ ತಿಳಿಸಿದರು.
ಮಾದ್ಯಮ ಗೋಷ್ಠಿಯಲ್ಲಿ ಎಲ್ ಐ ಲಕ್ಕಮ್ಮನವರ ಭಾಗ್ಯಶ್ರೀ ರಜಪೂತ ವಿದ್ಯಾ ದೇವಗಿರಿ ನಂದಕುಮಾರ ದ್ಯಾಪೂರ, ಸಂತೋಷ ಭದ್ರಾಪೂರ ಇದ್ದರು.