ರಾಜ್ಯಮಟ್ಟದ ಶ್ರಮಿಕ ರತ್ನ ಪ್ರಶಸ್ತಿಗೆ ವೈ,ಎಫ್.ಶಾನುಭೋಗ ಆಯ್ಕೆ

Must Read

ಮುನವಳ್ಳಿಃ ಪಟ್ಟಣದ ನಿವೃತ್ತ ಶಿಕ್ಷಕ ಹಾಗೂ ಕಲಾವಿದ ಸಾಹಿತಿ ವಾಯ್.ಎಫ್.ಶಾನುಭೋಗ ರಾಜ್ಯಮಟ್ಟದ ಶ್ರಮಿಕರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

     ಸಮಾಜದ ವಿವಿಧ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಸಾಧಕರಿಗೆ ನೀಡುವ ರಾಜ್ಯಮಟ್ಟದ ಶ್ರಮಿಕರತ್ನ ಪ್ರಶಸ್ತಿ ಇದಾಗಿದೆ.     

      ರೋಷನ್ ಕೇರ್ ಪೌಂಢೇಶನ್ ಬೆಂಗಳೂರು ಹಾಗೂ ಧಾರವಾಡದ ಸಾಧನಾ ಮಹಿಳಾ ಮತ್ತು ಮಕ್ಕಳ ಮಾನವ ಹಕ್ಕುಗಳ ಸಂರಕ್ಷಣಾ ಕೇಂದ್ರದ ಆಶ್ರಯದಲ್ಲಿ ಫೆ.೨೪ರಂದು ಧಾರವಾಡದ ಪಾಟೀಲ ಪುಟ್ಟಪ್ಪ ಸಭಾಭವನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಇವರಿಗೆ ರಾಜ್ಯಮಟ್ಟದ ಶ್ರಮಿಕ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ. ಇವರು ರಚಿಸಿದ ಸಂಗೊಳ್ಳಿ ರಾಯಣ್ಣ ನಾಟಕ ಶಾಲಾ ಮಕ್ಕಳಿಂದ ರಂಗ ಪ್ರಯೋಗಗೊಂಡು ಯಶಸ್ವಿಯಾಗಿದೆ.ಇಷ್ಟರಲ್ಲೇ ಮುದ್ರಣ ಕೂಡ ಕಾಣಲಿದೆ.ಇದೇ ಸಂದರ್ಭದಲ್ಲಿ ವೈ.ಬಿ.ಕಡಕೋಳ ಸಂಪಾದಿತ ಭಜನಾಕಾರ ದಿವಂಗತ ಚಂದ್ರಪ್ಪ ಚಲವಾದಿ ಕೃತಿ ಕೂಡ ಲೋಕಾರ್ಪಣೆಯಾಗುವುದು ಎಂದು ಕಾರ್ಯಕ್ರಮ ಸಂಘಟಿತ ಶಿಕ್ಷಕ ಎಲ್.ಐ.ಲಕ್ಕಮ್ಮನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group