ಮೂಡಲಗಿ: ಫೆ. 22ರಂದು ‘ಭಾವಸ್ವರ ಸೌರಭ’ ಸುಗಮ ಸಂಗೀತೋತ್ಸವ

Must Read

ಮೂಡಲಗಿ: ಬೆಂಗಳೂರಿನ ಇಂಡಿಯನ್ ಮ್ಯೂಜಿಕ್ ಅಸೋಸಿಯೇಶನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೂಡಲಗಿ ಲಯನ್ಸ್ ಕ್ಲಬ್ ಪರಿವಾರ ಇವರ ಸಂಯುಕ್ತ ಆಶ್ರಯದಲ್ಲಿ ಫೆ. 22ರಂದು ಸಂಜೆ 5ಕ್ಕೆ ಮೂಡಲಗಿಯ ಬಸವ ಮಂಟಪದಲ್ಲಿ ಖ್ಯಾತ ಗಾಯಕರಿಂದ ‘ಭಾವಸ್ವರ ಸೌರಭ’ ಸುಗಮ ಸಂಗೀತೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಿರುವರು.

ಶಬ್ಬೀರ ಡಾಂಗೆ
ಶಬ್ಬೀರ ಡಾಂಗೆ

ಬೆಂಗಳೂರಿನ ಚಲನಚಿತ್ರ ಹಿನ್ನೆಲೆ ಗಾಯಕ ರವೀಂದ್ರ ಸೊರಗಾಂವಿ, ಚಲನಚಿತ್ರ ಹಿನ್ನೆಲೆ ಗಾಯಕಿ ಅರ್ಪಿತಾ ವೇಣು, ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ ಬಸವರಾಜ ಮುಗಳಖೋಡ, ಜೀಟಿವಿ ಸರಿಗಮಪ ಸಂಗೀತ ಸ್ಪರ್ಧೆಯ ವಿಜೇತ ಗಾಯಕ ಓಂಕಾರ ಪತ್ತಾರ, ಜಾನಪದ ಗಾಯಕ ಶಬ್ಬೀರ ಡಾಂಗೆ, ಹೊಂಬೆಗೌಡ ಹೆಚ್, ಸುಷ್ಮಾ ನಂದಗಾಂವಿ, ಮಧುರಖಂಡಿಯ ಬಸವಲಿಂಗಯ್ಯ ಹಿಡಕಲ್, ಐಶ್ವರ್ಯ ತಳವಾರ, ಶಿವಾನಂದ ಬಿದರಿ, ಅಕ್ಕಮಹಾದೇವಿ ಮಾದರ,  ಮೇಘಾ ಸೊರಗಾಂವಿ ಕಲಾವಿದರು ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಉದ್ಘಾಟನೆ:

ಫೆ. 22ರಂದು ಸಂಜೆ 5 ಗಂಟೆಗೆ ಜರಗುವ ಸಂಗೀತ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದ ಸಾನ್ನಿಧ್ಯವನ್ನು ದತ್ತಾತ್ರೇಯಬೋಧ ಸ್ವಾಮೀಜಿ ಹಾಗೂ ಶ್ರೀಧರಬೋಧ ಸ್ವಾಮೀಜಿ ವಹಿಸುವರು. 

ಬೆಂಗಳೂರಿನ ಹಿರಿಯ ರಂಗಕರ್ಮಿ ಹಾಗೂ ರಂಗ ನಿರ್ದೇಶಕ ವಿಠ್ಠಲ ಕೊಪ್ಪದ ಉದ್ಘಾಟಿಸುವರು. ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಅಧ್ಯಕ್ಷ ಶ್ರೀಶೈಲ ಲೋಕನ್ನವರ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಬಿ.ಎಸ್. ಕಡಕಬಾವಿ, ತಾಲೂಕಾ ಇಒ ನವೀನಪ್ರಸಾದ, ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ಶಿಶು ಅಭಿವೃದ್ಧಿ ಅಧಿಕಾರಿ ಯಲ್ಲಪ್ಪ ಗದಾಡಿ, ಸಿಪಿಐ ಅಬ್ದುಲ್ ವಾಜೀದ, ಪಿಎಸ್‍ಐ ಚಂದ್ರಶೇಖರ ಹೆರಕಲ್, ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ಮೋಹನ ಕಮತ, ಲಯನ್ಸ್ ಸಂಸ್ಥಾಪಕ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಕಸಾಪ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ಭಾಗವಹಿಸುವರು ಎಂದು ಲಯನ್ಸ್ ಕ್ಲಬ್ ಕಾರ್ಯದರ್ಶಿ ಸುಪ್ರೀತ ಸೋನವಾಲಕರ ಖಜಾಂಚಿ ಕೃಷ್ಣಾ ಕೆಂಪಸತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಸಿಂದಗಿ : ಆರೆಸ್ಸೆಸ್ ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ

ಸಿಂದಗಿ; ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದ ಹಾಗೂ ದೀಪಾವಳಿ ಉತ್ಸವದ ಅಂಗವಾಗಿ ಸಾವಿರಕ್ಕೂ ಹೆಚ್ಚು ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.ಶನಿವಾರ...

More Articles Like This

error: Content is protected !!
Join WhatsApp Group