- Advertisement -
ಬೀದರ: ಸತ್ತಾನಪ್ಪಾ ಸತ್ತಾನೋ ಅನಂತಕುಮಾರ ಹೆಗಡೆ ಸತ್ತಾನೋ…, ಹಂಗ್ ಮಾಡ್ರೊ, ಹಿಂಗ್ ಮಾಡ್ರೋ ಅನಂತಕುಮಾರ್‌ನ ಮಣ್ಣ ಮಾಡ್ರೋ.. ಎಂಬ ಕಟು ಹೇಳಿಕೆಗಳ ಮೂಲಕ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆಯನ್ನು ಖಂಡಿಸಿ ಬೀದರ್‌ನಲ್ಲಿ ದಲಿತ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಸಂವಿಧಾನ ವಿರೋಧಿ ಅನಂತಕುಮಾರ ಹೆಗಡೆಗೆ ಹೇಳಿ ಧಿಕ್ಕಾರ ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಅನಂತಕುಮಾರ ಹೆಗಡೆ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದು ಅನಂತಕುಮಾರ್‌ಗೆ ಕೇಂದ್ರ ಸರ್ಕಾರ ಕುಮ್ಮಕ್ಕು ನೀಡ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ದವೂ ಆಕ್ರೋಶ ವ್ಯಕ್ತಪಡಿಸಿದರು.
- Advertisement -
ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಯಿತು.
ವರದಿ: ನಂದಕುಮಾರ ಕರಂಜೆ, ಬೀದರ