ಮೂಡಲಗಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಕಾರ್ಯ ನಿರ್ವಹಿಸಿ ಚುನಾವಣಾ ನಿಮಿತ್ತ ಬಾಗಲಕೋಟೆ ಜಿಲ್ಲೆಯ ತೇರದಾಳ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡ ಪಿ ಎಸ್ ಐ ಹಾಲಪ್ಪ ವಾಯ್ ಬಾಲದಂಡಿ ಅವರು ಕರ್ನಾಟಕ ಲೋಕಾಯುಕ್ತ ಇಲಾಖೆಯಲ್ಲಿ ಸಿಪಿಐ ಹುದ್ದೆಗೆ ಮುಂಬಡ್ತಿ ಹೊಂದಿ ಬೆಂಗಳೂರು ಲೋಕಾಯುಕ್ತ ಇಲಾಖೆಗೆ ಅಧಿಕಾರ ಸ್ವೀಕರಿಸಲು ಮಂಗಳವಾರ ಸಂಜೆ ತೆರಳುತ್ತಿರುವ ಸಂದರ್ಭದಲ್ಲಿ ಹಾಲಪ್ಪ ಬಾಲದಂಡಿ ಅವರನ್ನು ಮೂಡಲಗಿಯಲ್ಲಿ ಮೂಡಲಗಿ ಪತ್ರಕರ್ತರ ಬಳಗದಿಂದ ಸತ್ಕರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮೂಡಲಗಿ ಪಿಎಸ್ಐ ಚಂದ್ರಶೇಖರ ಹೆರಕಲ್ಲ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣಪ್ಪ ಗಿರೆಣ್ಣವರ, ಪ್ರಧಾನ ಕಾರ್ಯದರ್ಶಿ ಮಲ್ಲು ಬೋಳನವರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷ ಭಗವಂತ ಉಪ್ಪಾರ, ಜಿಲ್ಲಾ ಕಾರ್ಯದರ್ಶಿ ಭೀಮಶಿ ತಳವಾರ, ಪತ್ರಕರ್ತರಾದ ಚಂದ್ರಶೇಖರ ಪತ್ತಾರ, ಈಶ್ವರ ಡವಳೇಶ್ವರ, ಲಕ್ಷ್ಮಣ ಮಳ್ಳಿಗೇರಿ, ಸುನಿಲ ಗಸ್ತಿ, ವಿನೋದ ಎಮ್ಮಿ ಮತ್ತು ಪ್ರಜ್ವಲ ಪುಟಾಣಿ ಇದ್ದರು