spot_img
spot_img

ಹಳೆಯ ಎತ್ತು, ಮೇಕೆ ಮತ್ತು ಬೆಳಗಾವಿ ಭಾಜಪಾ

Must Read

- Advertisement -

ಒಂದೂರಲ್ಲಿ ಒಬ್ಬ ರೈತ ಇದ್ದ ಆತನ ಬಳಿ ಕುದುರೆ ಆಕಳು ಎತ್ತು ಹೋರಿ ಆಡು ಎಲ್ಲ ಇದ್ದವು.

ಎತ್ತು ಹಳೆಯದಾಗಿತ್ತು. ಒಂದು ಬಾರಿ ಮಾಲಿಕ ಮೇವು ಕಡಿಮೆ ಇದ್ದ ಕಾರಣ ಹೊಲದಲ್ಲಿ ಉಳುವ ಹೋರಿಗೆ ಮೇವು ಹಾಕಿ, ಹಳೆ ಎತ್ತಿಗೆ ಬೇರೆ ಮೇವು ಬರುತ್ತಿದೆ ಅದು ಬರುವವರೆಗೆ ಕಾಯಲು ತಿಳಿಸಿದ. ಇದರಿಂದ ಹಳೆಯ ಎತ್ತು ಹತಾಶಗೊಂಡಿತು.

ಆ ಸಮಯದಲ್ಲಿ ಹಳೆಯ ಎತ್ತಿಗೆ ಪಕ್ಕದ ಹೊಲದಲ್ಲಿ ಮೇವು ಇರುವುದು ಕಂಡು ಆಸೆ ಪಟ್ಟಿತು. ಆ ಹೊಲದ ಮಾಲಿಕನು ಎತ್ತಿನ ಮಾಲಿಕನ ಮೇಲಿನ ದ್ವೇಷದ ಕಾರಣ ಈ ಎತ್ತನ್ನು ಹಳೆಯ ಮಾಲಿಕನ ವಿರುದ್ಧ ಎತ್ತಿ ಕಟ್ಟಿ ಪುಸಲಾಯಿಸಿ ಒಂದೆರಡು ದಿನ ಒಳ್ಳೆಯ ಮೇವು ಹಾಕಿ ನಂತರ ಕಡಿಮೆ ಆಹಾರ ನೀಡುತ್ತಾ ವಿಪರೀತ ದುಡಿಸಿಕೊಳ್ಳಲು ಆರಂಭಿಸಿದ.

- Advertisement -

ಆಗೊಂದು ದಿನ ಹಳೆಯ ಮಾಲಿಕನ ಬಳಿ ಇದ್ದ ಈತರ ಪ್ರಾಣಿಗಳು ಹಳೆಯ ಎತ್ತನ್ನು ಭೇಟಿಯಾದವು ಅದರಲ್ಲೂ ವಿಶೇಷವಾಗಿ ಮೇಕೆ ತುಂಬ ವಿಶೇಷ ಕಾಳಜಿ ವಹಿಸಿ ನೋಡು ನಮ್ಮ ಮಾಲಿಕ ತುಂಬ ಒಳ್ಳೆಯವನು…

ಆ ಪರಿಸ್ಥಿತಿಲಿ ಸದ್ಯ ಉಳಬೇಕಾದ ಭೂಮಿ ತುಂಬ ಬಿರಸು (ಗಟ್ಟಿ) ಇದ್ದ ಕಾರಣ ಅನಿವಾರ್ಯವಾಗಿ ಹೋರಿಗೆ ಮೇವು ನೀಡಿ ನೆಲ ಉತ್ತಲು ತಯಾರಿ ಮಾಡಬೇಕಿತ್ತು. ಆ ಸಮಯ ಮೇವಿನ ಕೊರತೆ ಕೂಡ ಇತ್ತು ನಿನಗೆ ಸುಲಭವಾಗುವ ಕೆಲಸ ನಿರ್ಧರಿಸಿ ಮೇವು ಬರುವವರೆಗೆ ಕಾಯುತಿದ್ದ.

ಆದರೆ ನೀನು ಅವಸರ ಮಾಡಿ ತಪ್ಪು ಮಾಡಿದೆ. ಈಗ ನೋಡು ಹೊಸ ಮಾಲಿಕ ನಿನ್ನ ಹೇಗೆ ವಿಪರೀತ ದುಡಿಸಿಕೊಳ್ಳತಿದಾನೆ, ಒಳ್ಳೆಯ ಆಹಾರ ಕೂಡ ನೀಡತಿಲ್ಲ ಅಂತ ಮನವೊಲಿಸಿ ಹಳೆ ಮಾಲಿಕನ ಬಳಿ ಕರೆತಂದವು. 

- Advertisement -

ಹೀಗೆ ಹಳೆಯ ಎತ್ತನ್ನು ಪುನಃ ಹಳೆಯ ಮಾಲಿಕನ ಬಳಿ ತರುವಲ್ಲಿ ಮೇಕೆಯ ಪಾತ್ರ ಅತಿ ಮಖ್ಯವಾಗಿತ್ತು. ಮೇಕೆ ಒಳಗೊಳಗೆ ಈ ಮಹತ್ತರ ಕೆಲಸಕ್ಕಾಗಿ ಮಾಲಿಕ ನನಗೆ ಹೆಚ್ಚು ಹೆಚ್ಚು ಮೇವು ನೀಡುತ್ತಾನೆ ಎಂದು ತುಂಬ ಹರ್ಷಚಿತ್ತವಾಗಿತ್ತು.

ತೋಟಕ್ಕೆ ಹೋಗಿದ್ದ ಮಾಲಿಕ ಕೆಲಸ ಮುಗಿಸಿ ಸಂಜೆ ವಾಪಸ್ ಮನೆಗೆ ಬಂದು ಕೊಟ್ಟಿಗೆಯೆಡೆಗೆ ನೋಡಿದಾಗ ಹಳೆಯ ಎತ್ತು ಮರಳಿ ಬಂದದ್ದು ನೋಡಿ ಖುಷಿಪಟ್ಟ.

ಕೂಡಲೆ ಹಳೆಯ ಎತ್ತಿಗೆ ಸಿಕ್ಕಾಪಟ್ಟೆ ರಸಭರಿತ ಹಸಿ ಮೇವು ಹಾಕಿ ತನ್ನ ಮನೆಯವರಿಗೆ ಹೇಳಿದ ನೋಡಿ ಹಳೆ ಎತ್ತು ಮರಳಿ ಬಂದ ಖುಷಿಗಾಗಿ ಪಾರ್ಟಿ ಮಾಡೋಣ ಆ ಮೇಕೆಯನ್ನು ಹಿಡಿದು ಕೊಯ್ಯಿರಿ ಅಂದ.

ಆಗ ಮೇಕೆ, ಇದು ಉಪಕಾರ ಮಾಡುವವರಿಗೆ ಕಾಲವಲ್ಲ ನಾನು ಮಾಲಿಕನಿಂದ ಏನು ಬಯಸಿದ್ದೆ ನನಗೇನು ಸಿಕ್ಕಿತು. ಅಯ್ಯೋ ದುರ್ವಿಧಿಯೆ ಎಂದು ಮಮ್ಮಲ ಮರುಗತೊಡಗಿತು.

ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಬೆಳಗಾವಿ ಭಾಜಪ ನಾಯಕರ ಕಥೆ ಇದಕ್ಕಿಂತಲೂ ಭಿನ್ನವೆನಲ್ಲ.


ಮಲ್ಲಿಕಾರ್ಜುನ ಚೌಕಾಶಿ

ವಕೀಲರು

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group