ಸಿಂದಗಿ- ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಚಿಗುರು- ಚಿಲಿಪಿಲಿ ಚೈತ್ರದ ಶಿಬಿರ ಹಮ್ಮಿಕೊಳ್ಳಲಾಗಿದೆ.
ಎಪ್ರಿಲ್ 27ರಿಂದ 29 ರವರೆಗೆ ಪ್ರತಿದಿನ ಬೆಳಿಗ್ಗೆ 10 ರಿಂದ 4 ಗಂಟೆವರೆಗೆ ಜರುಗಲಿರುವ ಶಿಬಿರದಲ್ಲಿ ಮಾರ್ಗದರ್ಶನ ನೀಡಲು ಬಾಗಲಕೋಟೆಯ ಬಿ ಕೆ ನಾಗರತ್ನಕ್ಕನವರು, ಎಂ ಕೆ ಹುಬ್ಬಳ್ಳಿಯ ಬಿಕೆ ಜ್ಯೋತಿ ಅಕ್ಕನವರು ಬಿ ಕೆ ಗಾಯತ್ರಿ ಅಕ್ಕನವರು, ಶಿಕ್ಷಣ ತಜ್ಞ ಎಚ್ ಟಿ ಕುಲಕರ್ಣಿ, ವ್ಯಂಗ್ಯ ಚಿತ್ರಕಲಾ ಶಿಕ್ಷಕ ಶರಣು ಚಟ್ಟಿ, ಚಿತ್ರಕಲಾ ಶಿಕ್ಷಕ ಎಂ ಬಿ ಅಲ್ದಿ, ಗುಂಡಣ್ಣ ಕುಂಬಾರ, ಸಂಗೀತ ನಿರ್ದೇಶಕ ರೇಣುಕ ಗವಾಯಿ, ದೈಹಿಕ ಶಿಕ್ಷಕ ಸಿದ್ದಲಿಂಗ ಚೌದರಿ ಭಾಗವಹಿಸುವರು.
ಶಿಬಿರದಲ್ಲಿ ಯೋಗಾಸನ, ಧ್ಯಾನ,ಕ್ರಾಫ್ಟ್, ಸ್ಪೋಕನ್ ಇಂಗ್ಲೀಷ, ವ್ಯಂಗ್ಯ ಚಿತ್ರಕಲೆ, ನೃತ್ಯ, ಸ್ವಾನುಭೂತಿ, ಸ್ವಯಂ ಜಾಗೃತಿ, ತಾರ್ಕಿಕ ಶಕ್ತಿಯ ವೃದ್ಧಿ, ಜ್ಞಾನದ ಮಹತ್ವ ಮತ್ತು ಸ್ಮರಣ ಶಕ್ತಿಯನ್ನು ಹೆಚ್ಚಿಸುವ ವಿಧಿ ಕುರಿತು ಮಾರ್ಗದರ್ಶನ ನೀಡಲಿದ್ದಾರೆ.
6ನೇ ತರಗತಿಯಿಂದ 9ನೇ ತರಗತಿಯ ವಿದ್ಯಾರ್ಥಿಗಳು ಶಿಬಿರದ ಲಾಭ ಪಡೆದುಕೊಳ್ಳಬೇಕು. ಶಿಬಿರಕ್ಕೆ ಉಚಿತ ಪ್ರವೇಶವಿದ್ದು ಮಕ್ಕಳು ತಮ್ಮ ಹೆಸರನ್ನು ಕೂಡಲೇ ನೋಂದಾಯಿಸಿಕೊಂಡು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಸಿಂದಗಿ ಸೇವಾ ಕೇಂದ್ರದ ಬ್ರಹ್ಮಾಕುಮಾರಿ ರಾಜಯೋಗಿನಿ ಪವಿತ್ರ ಅಕ್ಕನವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ 8095065687 ಸಂಪರ್ಕಿಸಲು ಕೋರಲಾಗಿದೆ.