spot_img
spot_img

ಕಾಂಗ್ರೆಸ್ ನ ಅನೇಕರ ತ್ಯಾಗದಿಂದ ಸ್ವಾತಂತ್ರ್ಯ ಬಂದಿದೆ – ಎಂ ಬಿ ಪಾಟೀಲ

Must Read

- Advertisement -

ಸಿಂದಗಿ: ಕಾಂಗ್ರೆಸ್ ಪಕ್ಷದ ಅನೇಕ ಮಹನೀಯರ ತ್ಯಾಗ ಬಲಿದಾನದಿಂದ ಬ್ರಿಟಿಷ್ ಸಂಕೋಲೆಯಿಂದ ದೇಶವನ್ನು ಸಂರಕ್ಷಿಸಿದ್ದರಿಂದಲೇ ಎಲ್ಲ ಪಕ್ಷಗಳಿಗೆ ಸ್ವತಂತ್ರವಾಗಿ ಮಾತನಾಡುವ ಹಕ್ಕು ದೊರೆತಿದೆ 60 ವರ್ಷಗಳ ಕಾಲ ಆಳಿದ ಪಕ್ಷ ನಮ್ಮದು ಅದನ್ನು ಮರೆತ ಬಿಜೆಪಿ ಪಕ್ಷ 10 ವರ್ಷದಲ್ಲೇ ನಾವೇ ಎಲ್ಲವನ್ನೂ ಮಾಡಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿರುವುದು ಎಷ್ಟು ಸರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ.ಪಾಟೀಲ ಚಾಟಿ ಬೀಸಿದರು.

ಪಟ್ಟಣದ ಮಾಂಗಲ್ಯ ಭವನದಲ್ಲಿ ಲೋಕಸಭಾ ಚುನಾವಣೆ ನಿಮಿತ್ತ ಕಾಂಗ್ರೆಸ್ ಸಮಿತಿವತಿಯಿಂದ ಹಮ್ಮಿಕೊಂಡ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಅನೇಕ ಕಂಪನಿಗಳನ್ನು ಹುಟ್ಟು ಹಾಕಿ ಯುವಕರಿಗೆ ಉದ್ಯೋಗ ನೀಡಿದ್ದು ಕಾಂಗ್ರೆಸ್ ಪಕ್ಷ. ಕೇಂದ್ರದಲ್ಲಿ ಪಕ್ಷ ಅದಿಕಾರಕ್ಕೆ ಬಂದರೆ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗುವಂತೆ, ಅಲ್ಲದೆ ರೈತರ ಸಾಲ ಮನ್ನಾ ಮಾಡುತ್ತೇವೆ, ವಿದ್ಯಾವಂತರಾಗಿರುವ ರಾಜು ಅಲಗೂರ ಅವರಿಗೆ ಆಯ್ಕೆ ಮಾಡಿ ಪ್ರತಿ ತಿಂಗಳು ತಾಲೂಕುವಾರು ಅಹವಾಲು ಸ್ವೀಕರಿಸಿ ಸಮಸ್ಯೆಗೆ ಸ್ಪಂಧಿಸುವಂತೆ ಮಾಡಲು ಸಹಕರಿಸಿ ಎಂದರು.

ಅಭ್ಯರ್ಥಿ ರಾಜು ಆಲಗೂರ ಮಾತನಾಡಿ,  10 ವರ್ಷ ಆಳಿದ ಬಿಜೆಪಿ ಸರಕಾರ ನಿರೂದ್ಯೋಗಿಗಳಿಗೆ ಪ್ರತಿ ವರ್ಷ 2 ಕೋಟಿ ಉದ್ಯೋಗ, ವಿದೇಶದಲ್ಲಿರುವ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗಳಿಗೆ ರೂ 15 ಲಕ್ಷ ಹಾಕುತ್ತೇವೆ ಎಂದು ಬರೀ ಸುಳ್ಳಿನ ರಾಜಕಾರಣ ಮಾಡಿದೆ ವಿನಃ ಯಾವ ಅಭಿವೃದ್ಧಿ ಪರ ಚಿಂತನೆ ಮಾಡಿಲ್ಲ ಇಂತಹ ಸರಕಾರ ಇರಬೇಕಾ?. ಅಲ್ಲದೆ 3 ಬಾರಿ ಜಿಲ್ಲೆಯ ಸಂಸದರಾಗಿರುವ ಜಿಗಜಿಣಗಿ ಅವರು ಒಂದೆ ಒಂದು ಬಾರಿಯು ಸದನದಲ್ಲಿ ಜಿಲ್ಲೆಯ ಅಭಿವೃದ್ಧಿಪರ ಪ್ರಶ್ನೆ ಎತ್ತದೇ ನ ಖಾವುಂಗಾ ನ ಖಾನೆ ದೂಂಗಾ ಎನ್ನುವ ಸಂದೇಶ ನಿಜಕ್ಕೂ ಪಾಲಿಸುತ್ತ ಪ್ರವಾಸಿ ತಾಣವನ್ನು ಹಾಳುಗೆಡವಿದ್ದಾರೆ ಈ ಬಾರಿ ನನಗೆ ಮತ ನೀಡಿ ಜಿಲ್ಲೆಯನ್ನು ಅಭಿವೃದ್ಧಿ ಪಡಿಸಿ ತೊರಿಸುತ್ತೇನೆ ಎಂದು ಭರವಸೆ ನೀಡಿದರು.

- Advertisement -

ಸಚಿವ ಶಿವಾನಂದ ಪಾಟೀಲ ಮಾತನಾಡಿ, ದೇಶದ 15 ಜಿಲ್ಲೆಗಳಲ್ಲಿ ಬರಗಾಲದ ಛಾಯೇ ಆವರಿಸಿದ್ದರಿಂದ ಸುಮಾರು 38 ಸಾವಿರ ಕೋಟಿಯ ಬೆಳೆ ಹಾನಿಯಾಗಿದೆ ಅದಕ್ಕೆ ಸರಕಾರದಿಂದ ನೀಡುತ್ತಿರುವ 430 ಲಕ್ಷ ಕೋಟಿ ತೆರಿಗೆ ಹಣದಲ್ಲಿ 18 ಸಾವಿರ ಕೋಟಿ ರೈತರಿಗೆ ಬೆಳೆ ಪರಿಹಾರ ಕೊಡಿ ಎಂದು ಕೇಂದ್ರಕ್ಕೆ ಮನವಿ ಮಾಡಿಕೊಂಡರೂ ಸಹ ನೀಡಿಲ್ಲ ಎಂದು ನ್ಯಾಯಾಲಯ ಮೊರೆ ಹೋಗಿದ್ದೇವೆ ನ್ಯಾಯಾಲಯವು ಕೇಂದ್ರಕ್ಕೆ ಕಿವಿ ಹಿಂಡುವ ಕೆಲಸ ಮಾಡಿದೆ. ಜನರ ಹಣ ಜನರ ಕೈಗೆ ಕೊಡಬೇಕಾದರೆ ಅಂತಹ ಸದೃಢ ಮನಸ್ಥಿತಿ ಇರಬೇಕು ಅಂತೆಯೇ ಚುನಾವಣೆ ಸಂದರ್ಭದಲ್ಲಿ ನೀಡಿದ ವಾಗ್ದಾನದಂತೆ 5 ಗ್ಯಾರೆಂಟಿಗಳನ್ನು ನೀಡಿ ನುಡಿದಂತೆ ನೆಡದುಕೊಂಡಿದ್ದೇವೆ ಕಾರಣ ಭವಿಷ್ಯ ಬರೆಯತಕ್ಕ ಈ ಲೋಖಸಭಾ ಚುನಾವಣೆ ಯಾಗಿದೆ. ಸರಕಾರದ ಹಣದಲ್ಲಿ ರಾಜ್ಯದ ಎಲ್ಲ ತಾಯಂದಿರನ್ನು ಸಾಕತಕ್ಕ ಕಾರ್ಯ ಮಾಡಿದ್ದು ಕರ್ನಾಟಕ ಸರಕಾರವಾಗಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಪುನಃ ರೂ 8 ಸಾವಿರ ಮಹಿಳೆಯರ ಖಾತೆಗೆ ಬಂದು ಸೇರುತ್ತವೆ ಎಂದು ಆಶಯ ವ್ಯಕ್ತಪಡಿಸಿದರು.

ನೇತೃತ್ವ ವಹಿಸಿದ ಶಾಸಕ ಅಶೋಕ ಮನಗೂಳಿ ಮಾತನಾಡಿ, ಜಾತಿ, ಕೋಮು, ಧರ್ಮ ಬದಿಗಿಟ್ಟು ಕಾಂಗ್ರೆಸ್ ಅಭಿವೃದ್ಧಿ ಪರವಾಗಿ ಇಂದು ಚುನಾವಣೆ ಎದುರಿಸುತ್ತಿರುವುದು ನಮಗೆ ಸಂತಸವಿದೆ. ಆದರೆ ಬಿಜೆಪಿ ಕೇವಲ ಒಬ್ಬ ವ್ಯಕ್ತಿ ಹಾಗೂ ಧರ್ಮವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತದೆ. ಮೂವತ್ತು ವರ್ಷ ಕಾಲ ರಾಜಕಾರಣದಲ್ಲಿದ್ದು ಸದನದಲ್ಲಿ ಒಂದೇ ಒಂದು ಪ್ರಶ್ನೆ ಕೆಳದೆ ಜಿಗಜಿಣಗಿಯವರು ತಮ್ಮ ಆಸ್ತಿ ದುಪ್ಪಟ್ಟು ಮಾಡಿಕೊಂಡಿದ್ದಾರೆ ವಿನಃ ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡಲಿಲ್ಲ ಇಂತವರು ಮತ್ತೇ ಆಯ್ಕೆ ಆಗಬೇಕಾ? ಎಂದರು.

ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಮಾಜಿ ಶಸಕ ಶರಣಪ್ಪ ಸುಣಗಾರ, ವಿದ್ಯಾರಾಣಿ ತುಂಗಳ, ಡಾ. ಮಹೆಂದ್ರ ನಾಯಕ ಮಾತನಾಡಿದರು.
ವೇದಿಕೆ ಮೇಲೆ ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ವಿಠ್ಠಲ ಕೋಳೂರ, ಎಂ.ಎನ್.ಸಾಲಿ,  ಅಲಮೇಲ ಬ್ಲಾಕ್ ಅಧ್ಯಕ್ಷ ಸಾದಿಕ್ ಸುಂಬಡ ಮಹಿಳಾ ಅದ್ಯಕ್ಷೆ ಜಯಶ್ರೀ ಹದನೂರ ಸೇರಿದಂತೆ ಅನೇಕರು ಇದ್ದರು
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ ಸ್ವಾಗತಿಸಿದರು. ಕಾಂತೂಗೌಡ ಪಾಟೀಲ ಸುರಗಿಹಳ್ಳಿ ನಿರೂಪಿಸಿದರು.

- Advertisement -
- Advertisement -

Latest News

ಕವಿ ಸಿದ್ಧಲಿಂಗಯ್ಯಾ ಹಿರೇಮಠ ಅವರಿಗೆ ಸನ್ಮಾನ

ಗೋಕಾಕ - ಬಸವ ಸಮಿತಿ 2024 ನೇ ಸಾಲಿನ ವಿಶ್ವಬಸವ ಜಯಂತಿ ಪ್ರಯುಕ್ತ ಆಯೋಜಿಸಿದ್ದ ರಾಜ್ಯ ಮಟ್ಟದ ಕವನ ಸ್ಪರ್ದೆಯಲ್ಲಿ ಭಾಗವಹಿಸಿದ ಬೆಳಗಾವಿ ಜಿಲ್ಲೆಯ ಗೋಕಾಕ...
- Advertisement -

More Articles Like This

- Advertisement -
close
error: Content is protected !!
Join WhatsApp Group