spot_img
spot_img

ಡಾ.ರಾಜ್‍ಕುಮಾರ್ ಕಲಾ ಸೇವಾ ಟ್ರಸ್ಟ್ ವತಿಯಿಂದ ಡಾ.ರಾಜ್ ಕಲಾ ಸೇವಾರತ್ನ ಪ್ರಶಸ್ತಿ

Must Read

- Advertisement -

ಮೈಸೂರು -ಡಾ.ರಾಜ್‍ಕುಮಾರ್‍ರವರ 96ನೇ ಹುಟ್ಟುಹಬ್ಬದ ಪ್ರಯುಕ್ತ ಒಂದು ವಾರಗಳ ಕಾಲ ನಾದಬ್ರಹ್ಮ ಸಭಾಂಗಣದಲ್ಲಿ ನಗರದ ಡಾ.ರಾಜ್‍ಕುಮಾರ್ ಕಲಾ ಸೇವಾ ಟ್ರಸ್ಟ್ ವತಿಯಿಂದ ಮೈಸೂರು ಜಯರಾಂರವರ ಸಾರಥ್ಯದಲ್ಲಿ ಆಯೋಜಿಸಿರುವ ಕಾರ್ಯುಕ್ರಮದಲ್ಲಿ ಏ.25 ರಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹತ್ತು ಮಂದಿ ಕಲಾವಿದರನ್ನು ಗುರುತಿಸಿ ಡಾ.ರಾಜ್ ಕಲಾ ಸೇವಾರತ್ನ ಪ್ರಶಸ್ತಿಯನ್ನು ವಿತರಿಸಲಾಯಿತು.

ಡ್ರಂ ವಾದಕ ಸಿ.ಆರ್.ರಾಘವೇಂದ್ರ ಪ್ರಸಾದ್, ಗಾಯಕರುಗಳಾದ ಶಾರದಮ್ಮ, ಸರ್ವಮಂಗಳ, ತಬಲಾ ವಾದಕ ಎಂ.ಸಿ.ಜಗದೀಶ್, ರಂಗಭೂಮಿ ಕಲಾವಿದೆ ಮೇರಿವಸಂತ, ರಿದಂ ಪ್ಯಾಡ್ ವಾದಕ ಆಂಡ್ರೊ,   ಗಾಯಕರಾದ ರಾ.ಬಿ.ನಾಗರಾಜು, ರಮೇಶ್ ವೈ., ನೃತ್ಯ ನಿರ್ದೇಶಕ ಮೈಸೂರು ರಾಜು, ಗಾಯಕ ರವಿ ಆರ್. ಇವರುಗಳು ಡಾ.ರಾಜ್ ಕಲಾ ಸೇವಾರತ್ನ ಪ್ರಶಸ್ತಿಗೆ ಭಾಜನರಾದರು.

ಡಾ.ರಾಜ್‍ಕುಮಾರ್‍ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಉದ್ಯಮಿ ರವಿಗೌಡರು ನಾನು ನನ್ನ ತಂದೆ-ತಾಯಿಗಳಿಂದ ಏನು ಕಲಿತೆ ಗೊತ್ತಿಲ್ಲ. ಆದರೆ ಅಣ್ಣಾವ್ರ ಚಿತ್ರಗಳನ್ನು ನೋಡಿ ಅದರಿಂದ ಪ್ರಭಾವಿತನಾಗಿ ಸಾಕಷ್ಟು ಕಲಿತಿದ್ದೇನೆ. ಕೆಂಟಕಿ ಕರ್ನಲ್ ಪ್ರಶಸ್ತಿ ದಕ್ಷಿಣ ಭಾರತದ ಕೆಲವೇ ಕೆಲವು ಕಲಾವಿದರಿಗೆ ಸಿಗುವ ಪ್ರಶಸ್ತಿ. ಅದು ಡಾ.ರಾಜ್‍ರವರಿಗೆ ಸಿಕ್ಕಿರುವುದು ನಿಜಕ್ಕೂ ಶ್ಲಾಘನೀಯ. ಮೈಸೂರು ಜಯರಾಂರವರು ಇಂತಹ ಕಾರ್ಯಕ್ರಮ ಆಯೋಜನೆಗೊಳಿಸಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. 2028ಕ್ಕೆ ಡಾ.ರಾಜ್‍ಕುಮಾರ್‍ರವರ ‘ಶತಮಾನೋತ್ಸವ ಸಂಭ್ರಮ’ (100 ವರ್ಷ)ದ ಸಂದರ್ಭದಲ್ಲಿ ಮೈಸೂರಿನಲ್ಲಿ ಒಂದು ತಿಂಗಳ ಕಾಲ ನಿರಂತರವಾಗಿ ಡಾ.ರಾಜ್‍ಕುಮಾರ್‍ರವರ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಮೈಸೂರು ಜಯರಾಂರವರಿಗೆ ಶುಭ ಕೋರಿದರು.

- Advertisement -

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಯಕ್ರಮದ ಆಯೋಜಕರಾದ ಮೈಸೂರು ಜಯರಾಂ, ನನಗೆ ಎಷ್ಟೇ ಕಷ್ಟ ಬಂದರೂ ಕಾರ್ಯಕ್ರಮ ಮಾತ್ರ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ನಾನು ಸರ್ಕಾರಿ ವೃತ್ತಿಯಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡವನು. ನನ್ನನ್ನು ಸಾಕಷ್ಟು ಬಾರಿ ಕೆಲಸದಿಂದ ತೆಗೆದು ಪುನಃ ಅವರೇ ಕರೆದು ಸೇರಿಸಿಕೊಂಡ ಉದಾಹರಣೆಗಳೂ ಸಾಕಷ್ಟಿವೆ. ಮನೆಯಲ್ಲಿ ಇಷ್ಟೊಂದು ಸಾಲ ಮಾಡಿ ಏಕೆ ಕಾರ್ಯಕ್ರಮ ಮಾಡುತ್ತೀರಿ? ಎಂದು ಪ್ರಶ್ನಿಸುತ್ತಾರೆ. ಆದರೆ ನಾನು ಇದ್ಯಾವುದಕ್ಕೂ ದೃತಿಗೆಡದೇ ಅಣ್ಣಾವ್ರ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸುತ್ತಾ ಬಂದಿದ್ದೇನೆ ಎಂದು ಭಾವುಕರಾಗಿ ನುಡಿದರು.

ಇದಾದ ನಂತರ ಡಾ.ರಾಜ್‍ಕುಮಾರ್ ಅವರು ಅಭಿನಯಿಸಿರುವ ಹಲವಾರು ಚಲನಚಿತ್ರಗೀತೆಗಳನ್ನು ಕಲಾವಿದರು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು. ವೇದಿಕೆಯಲ್ಲಿ ಗೌರವಾಧ್ಯಕ್ಷ ವೈ.ಡಿ.ರಾಜಣ್ಣ, ನಿರೂಪಕ ಸುಧೀಂದ್ರ ಇನ್ನೂ ಮುಂತಾದವರು ಇದ್ದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group