spot_img
spot_img

ಯುವರಾಜನ ಟೀಕೆಗೆ ಬೇಸರಿಸಿಕೊಳ್ಳಬೇಡಿ – ಮೋದಿ

Must Read

- Advertisement -

ಭೂಪಾಲ್ – ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನ ಯುವರಾಜ ಪ್ರಧಾನ ಮಂತ್ರಿಯ ಬಗ್ಗೆ ಏನೇನೋ ಮಾತನಾಡಿ ಮಜಾ ತೆಗೆದುಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ತಮ್ಮ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವಹೇಳನ ಮಾಡಿದ್ದನ್ನು ಉಲ್ಲೇಖಿಸಿದರು.
ಕಾಂಗ್ರೆಸ್ ಯುವರಾಜನ ಮಾತುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಜನರು ವಿರೋಧ ಮಾಡುತ್ತಿದ್ದಾರೆ. ಒಬ್ಬ ಪ್ರಧಾನಿಗೆ ಇಂಥ ಮಾತುಗಳನ್ನು ಆಡಬಾರದು ಎಂದು ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ನೀವು ದುಃಖಿತರಾಗಬೇಡಿ ಅವರು ನಾಮದಾರರು, ನಾವು ಕಾಮದಾರರು ಅಂದರೆ ಅವರು ಪ್ರಸಿದ್ಧರು, ನಾವು ಕೆಲಸಗಾರರು. ಶ್ರೀಮಂತರು ಕೆಲಸಗಾರರ ಬಗ್ಗೆ ಮಾತನಾಡುತ್ತಾರೆ. ಮಾತನಾಡಿಕೊಳ್ಳಲಿ ನೀವು ಬೇಸರ ಮಾಡಿಕೊಳ್ಳಬೇಡಿ ಎಂದು ಜನತೆಯಲ್ಲಿ ಮೋದಿ ಮನವಿ ಮಾಡಿಕೊಂಡಿದ್ದಾರೆ.
ಉತ್ತರ ಪ್ರದೇಶದಲ್ಲಿಯೂ ಮಾತನಾಡಿದ ಮೋದಿಯವರು, ಎಲ್ಲಾ ಓಬಿಸಿ ಜನಾಂಗದವರಿಗೆ ಮೀಸಲಾತಿಯಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ. ಇದು ಮೋದಿಯ ಗ್ಯಾರಂಟಿ ಎಂದು ಹೇಳಿ
ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಕೇವಲ ತಮ್ಮ ಪರಿವಾರದ ಬಗ್ಗೆ ಮಾತ್ರ ಚಿಂತೆ ಮಾಡುತ್ತವೆ ಅವಕ್ಕೆ ನಿಮ್ಮ ಬಗ್ಗೆ ಕಾಳಜಿಯಿಲ್ಲ. ಯಾವುದೇ ಜನಾಂಗದ ಬಗ್ಗೆ ಅವರು ಹೇಳುವುದೆಲ್ಲ ಸುಳ್ಳೇ ಎಂದು ಪ್ರಧಾನಿ ಮೋದಿ ಟೀಕಿಸಿದರು.

- Advertisement -
- Advertisement -

Latest News

ಕನ್ಯಾಕುಮಾರಿಯಲ್ಲಿ ಮೋದಿ ಧ್ಯಾನ ಆರಂಭ

ತಿರುವನಂತಪುರಂ - ಲೋಕಸಭಾ ಚುನಾವಣೆಯ ಕೊನೆಯ ಹಂತದ ಚುನಾವಣಾ ಪ್ರಚಾರ ಮುಗಿಸಿದ ಕೂಡಲೆ ನರೇಂದ್ರ ಮೋದಿ ತಮ್ಮ ೪೫ ತಾಸುಗಳ ಧ್ಯಾನ ಪೂರೈಸಲು ತಮಿಳುನಾಡಿನ ಕನ್ಯಾಕುಮಾರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group