.ಸಿಂದಗಿ: ಪಂಚಮಸಾಲಿ ಸಮಾಜ ಒಂದೇ ಪಕ್ಷಕ್ಕೆ ಸೀಮಿತವಾದದ್ದಲ್ಲ ಕೆಲವರು ಪಂಚಮಸಾಲಿ ಸಮಾಜ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವಿದೆ ಎಂದು ಇಂಚಗೇರಿ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಹೇಳಿಕೆ ನೀಡಿದ್ದು ಸರಿಯಲ್ಲ. ಪಂಚಮಸಾಲಿ ಸಮಾಜ ಅದನ್ನು ಉಗ್ರವಾಗಿ ಖಂಡಿಸುತ್ತದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಪಂಚಮಸಾಲಿ ಸಮಾಜದವತಿಯಿಂದ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಾಜದಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದು ಅಕ್ಷಮ್ಯ ಅಪರಾಧವಾಗಿದೆ ನಮ್ಮ ಸಮಾಜದ ಗೋಸ್ಕರ ಪಕ್ಷ ಸರಕಾರದ ವಿರುದ್ದ 2ಎ ಮಿಸಲಾತಿಯ ಬಗ್ಗೆ ಧ್ವನಿ ಎತ್ತಿದ್ದವರು ಬಸನಗೌಡ ಪಾಟೀಲ ಯತ್ನಾಳ ಅವರು ಅಲ್ಲಿ ಯಾರು ಬಂದಿಲ್ಲ. ಸರಕಾರ ಬಂದು ಒಂದು ವರ್ಷ ಕಳೆದರು ಇನ್ನೂವರೆಗೂ ಮಿಸಲಾತಿಯ ಬಗ್ಗೆ ದ್ವನಿ ಎತ್ತುತ್ತಿಲ್ಲ. ಪ್ರಶ್ನಾತೀತ ನಾಯಕ ಬಸನಗೌಡ ಯತ್ನಾಳ ನಾಯಕತ್ವಕ್ಕೆ ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸೋಣ ಎಂದರು.
ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ ಮಾತನಾಡಿ, ತಮ್ಮ ಸ್ವಾರ್ಥಕ್ಕಾಗಿ ಪಂಚಮಸಾಲಿ ಸಮಾಜವನ್ನು ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ಚುನಾವಣೆಯ ಕೊನೆ ಕ್ಷಣದಲ್ಲಿ ಮತದಾರರನ್ನು ಹಾಗೂ ಸಮಾಜ ಮುಖಂಡರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಜಿಗಜಿಣಗಿಯವರು ತಮ್ಮ 50 ವರ್ಷದ ರಾಜಕಾರಣದಲ್ಲಿ ಯಾವೊಬ್ಬ ಪಂಚಮಸಾಲಿ ಸಮಾಜದ ಮುಖಂಡರಿಗೆ ತುಳಿಯುವ ಕಾರ್ಯಕ್ಕೆ ಮುಂದಾಗಿಲ್ಲ. ದೇಶ ಉಳಿದರೆ ನಾವು ಉಳಿಯುತ್ತೇವೆ ಅದಕ್ಕೆ ಇಡೀ ವಿಶ್ವವೇ ಭಾರತದ ಕಡೆ ತಿರುಗಿ ನೋಡುವಂತಾಗಿದ್ದು ಕಾರಣ ಪಂಚಮಸಾಲಿ ಸಮಾಜ ಸಂಪೂರ್ಣವಾಗಿ ಬಿಜೆಪಿ ಪಕ್ಷವನ್ನು ಬೆಂಬಲಿಸಿ ಮೋದಿಯವರ ಕೈ ಬಲಪಡಿಸೋಣ ಎಂದು ಮನವಿ ಮಾಡಿಕೊಂಡರು.
ಜಿಪಂ ಮಾಜಿ ಉಪಾಧಕ್ಷ ಸಿದ್ದರಾಮ ಪಾಟೀಲ ಹೂನಳ್ಳಿ, ಜೆಡಿಎಸ್ ಅಧ್ಯಕ್ಷ ಎಂ.ಎನ್.ಪಾಟೀಲ ಮಾತನಾಡಿದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಜಿಲ್ಲಾ ಉಪಾಧ್ಯಕ್ಷ ಮಲ್ಲು ಬಾದನ, ಗುಂಡು ಕೆರುಡೆ, ಶ್ರೀಶೈಲ ಚಳ್ಳಗಿ, ಮಲ್ಲು ಬಗಲಿ, ಶಿವರಾಜ ಕೆಂಗನಾಳ, ಸಂಗಮೇಶ ಮನ್ನಿಕಟ್ಟಿ, ಮಹೇಶ ಪಾಟೀಲ ನಾಗರಳ್ಳಿ, ನವೀನ ಚಟ್ಟರಕಿ, ಪ್ರಮೋದ ಬಾಗೇವಾಡಿ, ಸಾವಿತ್ರಿ ಹಿಕ್ಕನಗುತ್ತಿ, ರಮೇಶ ಪೀರಶೆಟ್ಟಿ, ಗಂಗಾಧರ ಕಡಗಂಚಿ, ಬಸವರಾಜ ಬಗಲಿ ಸೇರಿದಂತೆ ಅನೇಕರಿದ್ದರು.